Bengaluru News; ಮಂತ್ರಿ ಸ್ಥಾನ ಸಿಗದ ಕಾರಣ ಒಂದು ವಾರ ಅಸಮಾಧಾನ ಇತ್ತು, ಈಗ ಇಲ್ಲ: ಕೆಎಂ ಶಿವಲಿಂಗೇಗೌಡ, ಶಾಸಕ
ಶಾಸಕಕರು ಮತ್ತು ಸಚಿವರ ನಡುವೆ ಸಾಮರಸ್ಯ ಮೂಡಬೇಕಾದರೆ ಪ್ರತಿ ಮೂರು ತಿಂಗಳಿಗೊಮ್ಮೆ ಶಾಸಕಾಂಗ ಪಕ್ಷದ ನಡೆಸಬೇಕು ಅನ್ನೋದು ತಮ್ಮ ಸ್ವಂತ ಅಭಿಪ್ರಾಯ ಎಂದು ಶಿವಲಿಂಗೇಗೌಡ ಹೇಳಿದರು.
ಬೆಂಗಳೂರು: ವಿಧಾನ ಸೌಧ ಆವರಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ತನಗೆ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು. ಮಂತ್ರಿ ಸ್ಥಾನ (ministerial berth) ಸಿಗಲಿಲ್ಲವೆಂಬ ಬೇಸರ ಒಂದು ವಾರದ ಮಟ್ಟಿಗೆ ಇದ್ದಿದ್ದು ನಿಜ, ಅದರೆ ಈಗ ಅದು ದೂರವಾಗಿದೆ ಎಂದು ಹೇಳಿದ ಗೌಡರು ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನೇ ತನಗೆ ಮಂತ್ರಿ ಸ್ಥಾನ ನೋಡುವ ಘೋಷಣೆ ಮಾಡಿದ್ದಾರೆ, ಅವರಾಗಿ ನೀಡುವವರೆಗೆ ಕಾಯುವುದಾಗಿ ಹೇಳಿದರು. ಆಧಿವೇಶನ ಮುಗಿದ ಬಳಿಕ ಒಂದು ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ನಿಜ, ಶಾಸಕಕರು ಮತ್ತು ಸಚಿವರ ನಡುವೆ ಸಾಮರಸ್ಯ ಮೂಡಬೇಕಾದರೆ ಪ್ರತಿ ಮೂರು ತಿಂಗಳಿಗೊಮ್ಮೆ ಶಾಸಕಾಂಗ ಪಕ್ಷದ ನಡೆಸಬೇಕು ಅನ್ನೋದು ತಮ್ಮ ಸ್ವಂತ ಅಭಿಪ್ರಾಯ ಎಂದು ಶಿವಲಿಂಗೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್ ಕಾರಿಡಾರ್: ಡಿಕೆ ಶಿವಕುಮಾರ್ ಘೋಷಣೆ

