Bengaluru News; ಯಾವುದೇ ಷರತ್ತಿಲ್ಲದೆ ಗ್ಯಾರಂಟಿಗಳನ್ನು ಜಾರಿಗೊಳಿಸಿದರೂ ಬೊಕ್ಕಸಕ್ಕೆ ಹೊರೆಯಾಗದು ಅಂತ ಸರ್ಕಾರಕ್ಕೆ ಹೇಳಿದ್ದೆವು: ಡಾ ಸಿಎನ್ ಅಶ್ವಥ್ ನಾರಾಯಣ
ಕಂಡೀಷನ್ ಹೇರದೆಯೇ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದರೂ 20,000 ಕೋಟಿ ರೂ. ಹೊರೆ ಮಾತ್ರ ಬೊಕ್ಕಸದ ಮೇಲೆ ಬೀಳುತ್ತದೆ ಅಂತ ಬಿಜೆಪಿ ಹೇಳಿದರೂ ಕಾಂಗ್ರೆಸ್ ಸರ್ಕಾರ ಆ ಮಾತನ್ನು ಕಡೆಗಣಿಸಿತು ಎಂದು ಶಾಸಕ ಹೇಳಿದರು.
ಬೆಂಗಳೂರು: ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಸರ್ಕಾರವನ್ನು ರೈತ ವಿರೋಧಿ, ದಲಿತ ವಿರೋಧಿ, ವಿದ್ಯಾರ್ಥಿ ವಿರೋಧಿ(anti-students) ಮತ್ತು ಬಡವರ ವಿರೋಧಿ ಅಂತ ಜರಿದರು. ಜನರ ಮುಂದೆ ಗ್ಯಾರಂಟಿಗಳನ್ನು (guarantees) ಘೋಷಿಸುವಾಗ ಯಾವುದೇ ಕಂಡೀಷನ್ ಗಳನ್ನು ಪ್ರಸ್ತಾಪಿಸಿರಲಿಲ್ಲ, ಹಾಗಾಗೇ, ಜಾರಿಗೊಳಿಸುವಾಗ ಷರತ್ತುಗಳನ್ನು ಅನ್ವಯಿಸಬೇಡಿ ಅಂತ ಬಿಜೆಪಿ, ಸರ್ಕಾರಕ್ಕೆ ಹೇಳಿತ್ತು ಎಂದು ಶಾಸಕ ಹೇಳಿದರು. ಕಂಡೀಷನ್ ಹೇರದೆಯೇ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದರೂ 20,000 ಕೋಟಿ ರೂ. ಹೊರೆ ಮಾತ್ರ ಬೊಕ್ಕಸದ ಮೇಲೆ ಬೀಳುತಿತ್ತು, ವಾಣಿಜ್ಯ ತೆರಿಗೆಯೊಂದರಿಂದಲೇ 1.20 ಲಕ್ಷಕೋಟಿ ರೂ, ಸಂಗ್ರಹವಾಗುತ್ತದೆ ಅಂತ ಬಿಜೆಪಿ ಹೇಳಿದರೂ ಸರ್ಕಾರ ಕೇಳಲಿಲ್ಲ ಎಂದು ಆಶ್ವಥ್ ನಾರಾಯಣ ಹೇಳಿದರು. ಇಚ್ಛಾ ಶಕ್ತಿ, ದೂರಾಲೋಚನೆ, ಆರ್ಥಿಕತೆ ಬಗ್ಗೆ ಸರಿಯಾದ ಜ್ಞಾನವಿರದ ಸರ್ಕಾರ ನಮ್ಮ ಸಲಹೆಯನ್ನು ಕಡೆಗಣಿಸಿತು ಎಂದು ಆಶ್ವಥ್ ನಾರಾಯಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ