Bengaluru News: ಮುಖ್ಯಮಂತ್ರಿಗಳ ನಿವಾಸದ ಬಳಿ ರಸ್ತೆಗಳು ಬ್ಲಾಕ್ ಆಗಿದ್ದಕ್ಕೆ ಹಿರಿಯ ವ್ತಕ್ತಿಯೊಬ್ಬರು ಸಿದ್ದರಾಮಯ್ಯ ಎದುರೇ ಆಕ್ರೋಶ ವ್ಯಕ್ತಪಡಿಸಿದರು!

Bengaluru News: ಮುಖ್ಯಮಂತ್ರಿಗಳ ನಿವಾಸದ ಬಳಿ ರಸ್ತೆಗಳು ಬ್ಲಾಕ್ ಆಗಿದ್ದಕ್ಕೆ ಹಿರಿಯ ವ್ತಕ್ತಿಯೊಬ್ಬರು ಸಿದ್ದರಾಮಯ್ಯ ಎದುರೇ ಆಕ್ರೋಶ ವ್ಯಕ್ತಪಡಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 27, 2023 | 2:14 PM

ಸೀನಿಯರ್ ಸಿಟಿಜನ್ ರಸ್ತೆ ಬ್ಲಾಕ್ ಆಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ ಪೊಲೀಸ್ ಮತ್ತು ಭದ್ರತಾ ದಳದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸ (CM’s residence) ಎದುರು ಹಿರಿಯ ವ್ಯಕ್ತಿಯೊಬ್ಬರು (senior citizen) ಹೊರಹಾಕುತ್ತಿರುವ ಕೋಪ ಸಹಜ ಮತ್ತು ಸ್ವಾಭಾವಿಕವಾಗಿದೆ. ಇಲ್ಲಿ ಕಾಣುತ್ತಿರುವ ರಸ್ತೆಯ ಎರಡೂ ಭಾಗಗಳಲ್ಲಿ ಬ್ಯಾರಿಕೇಡ್ ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟಿರುವುದರಿಂದ ಬೇರೆ ವಾಹನಗಳ ಸಂಚಾರಕ್ಕೆ ತೀವ್ರ ಸ್ವರೂಪದ ಅಡಚಣೆಯಾಗುತ್ತಿದೆ. ಅವಸರದಲ್ಲಿರುವರು ತಾಳ್ಮೆ ಕಳೆದುಕೊಳ್ಳುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ಸೀನಿಯರ್ ಸಿಟಿಜನ್ (ಹೆಸರು ಗೊತ್ತಾಗಿಲ್ಲ) ರಸ್ತೆ ಬ್ಲಾಕ್ ಆಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ ಪೊಲೀಸ್ ಮತ್ತು ಭದ್ರತಾ ದಳದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳ್ಳುತ್ತಿದ್ದಾರೆ. ಈ ರಸ್ತೆಯಲ್ಲಿ 28,000 ಸಾವಿರ ವಾಹನಗಳು ಯಾಕೆ ನಿಂತಿವೆ ಅವರು ಕೇಳುತ್ತಾರೆ. ಅದೇ ಸಮಯಕ್ಕೆ ತಮ್ಮ ನಿವಾಸದಿಂದ ಆಚೆ ಬರುವ ಸಿಎಂ ಸಿದ್ದರಾಮಯ್ಯ (Siddaramaiah) ಜೊತೆಯೂ ಅವರು ಮಾತಾಡುತ್ತಾರೆ. ಮುಖ್ಯಮಂತ್ರಿ ಹಿರಿಯ ವ್ಯಕ್ತಿಗೆ ಏನು ಹೇಳಿದರು ಅಂತ ಗೊತ್ತಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ