ಬಿಜೆಪಿ ಕಮೀಶನ್ ರೇಟ್ ಕಾರ್ಡ್ ಸದನದಲ್ಲಿ ಪ್ರಸ್ತಾಪಿಸಿದ್ದು ಕುಮಾರಸ್ವಾಮಿ, ಜಗಳ ನಡೆದಿದ್ದು ಪ್ರಿಯಾಂಕ್ ಖರ್ಗೆ-ಅಶ್ವಥ್ ನಾರಾಯಣ ಮಧ್ಯೆ!

ಬಿಜೆಪಿ ಕಮೀಶನ್ ರೇಟ್ ಕಾರ್ಡ್ ಸದನದಲ್ಲಿ ಪ್ರಸ್ತಾಪಿಸಿದ್ದು ಕುಮಾರಸ್ವಾಮಿ, ಜಗಳ ನಡೆದಿದ್ದು ಪ್ರಿಯಾಂಕ್ ಖರ್ಗೆ-ಅಶ್ವಥ್ ನಾರಾಯಣ ಮಧ್ಯೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 12, 2023 | 6:34 PM

ಖರ್ಗೆ ಇಲಾಖೆಯಲ್ಲಿ ಏನು ಅಕ್ರಮ ನಡೆಯತ್ತಿದೆ ಅಂತ ದಾಖಲೆ ಕೊಡುವುದಾಗಿ ಅಶ್ವಥ್ ಪ್ರತ್ಯಾಸ್ಪೀಕರ್ ಯುಟಿ ಖಾದರ್ ಮಧ್ಯ ಪ್ರವೇಶಿದರೂ ವಾಕ್ಸಮರ ನಿಲ್ಲೋದಿಲ್ಲ.

ಬೆಂಗಳೂರು: ನಿಮಗೆ ನೆನಪಿರಬಹುದು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವ್ಯಾವ ಇಲಾಖೆಯಲ್ಲಿ ಯಾವ್ಯಾವ ಕೆಲಸಗಳಿಗೆ ಎಷ್ಟೆಟ್ಟು ಕಮೀಶನ್ ನಿಗದಿಯಾಗಿದೆ ಅಂತ ಒಂದು ರೇಟ್ ಕಾರ್ಡನ್ನು (commission rate card) ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿತ್ತಲ್ಲದೆ ಅದರ ಜಾಹೀರಾತು ಸಹ ನೀಡಿತ್ತು. ಆ ವಿಷಯವನ್ನು ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿ ಯಾವ ಆಧಾರದ ಮೇಲೆ ರೇಟ್ ಕಾರ್ಡ್ ಹಾಕಿದ್ದು ಅಂತ ಪ್ರಶ್ನಿಸಿದಾಗ ಉತ್ತರ ನೀಡಲು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಎದ್ದು ನಿಂತು ಅದನ್ನು ಒಬ್ಬ ಬಿಜೆಪಿ ಶಾಸಕನೇ ನಮಗೆ ಹೇಳಿದ್ದು ಅನ್ನುತ್ತಾರೆ. ಅವರ ಮಾತಿನಿಂದ ಉರಿದು ಬೀಳುವ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಸಾಕ್ಷಿ ಕೊಡಿ ಅಂತ ಹೇಳುತ್ತಾರೆ. ಖರ್ಗೆ ಮತ್ತು ಅಶ್ವಥ್ ನಡುವೆ ಜೋರಾದ ವಾದ ವಿವಾದ ನಡೆಯುತ್ತದೆ. ಖರ್ಗೆ ಇಲಾಖೆಯಲ್ಲಿ ಏನು ಅಕ್ರಮ ನಡೆಯತ್ತಿದೆ ಅಂತ ದಾಖಲೆ ಕೊಡುವುದಾಗಿ ಅಶ್ವಥ್ ಪ್ರತ್ಯಾರೋಪ ಮಾಡಿದಾಗ ಖರ್ಗೆ, ಕೊಡಿ ದಾಖಲೆ ಅನ್ನುತ್ತಾರೆ. ಸ್ಪೀಕರ್ ಯುಟಿ ಖಾದರ್ ಮಧ್ಯ ಪ್ರವೇಶಿದರೂ ವಾಕ್ಸಮರ ನಿಲ್ಲೋದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ