Bengaluru; ಶಿಕ್ಷಣ ಸಚಿವ ಮಧು ಬಂಗಾರಪ್ಪ ದಾರ್ಷ್ಟ್ಯತೆ ಮತ್ತು ದುರಹಂಕಾರ ಪ್ರದರ್ಶಿಸುತ್ತಿದ್ದಾರೆ: ಸಿಟಿ ರವಿ

Bengaluru; ಶಿಕ್ಷಣ ಸಚಿವ ಮಧು ಬಂಗಾರಪ್ಪ ದಾರ್ಷ್ಟ್ಯತೆ ಮತ್ತು ದುರಹಂಕಾರ ಪ್ರದರ್ಶಿಸುತ್ತಿದ್ದಾರೆ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 12, 2023 | 5:01 PM

ಮಕ್ಕಳಲ್ಲಿ ದೇಶಭಕ್ತಿಯನ್ನು ಅನಾವರಣಗೊಳಿಸುವ ಪಾಠಗಳು ಸಮಾಜ ಘಾತುಕ ಅಂತ ಹೇಗೆ ಅನಿಸಿಕೊಳ್ಳುತ್ತವೆ ಎಂದು ರವಿ ಪ್ರಶ್ನಿಸಿದರು.

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi), ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ವರ್ತನೆ ದಾರ್ಷ್ಟ್ಯತೆ ಮತ್ತು ದುರಹಂಕಾರದಿಂದ (arrogance) ಕೂಡಿದೆ ಎಂದು ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ರವಿ, ಶಿಕ್ಷಣ ಸಚಿವ ಪಠ್ಯ ಪುಸ್ತಕಗಳಿಂದ ಕೆಲ ಪಾಠಗಳನ್ನು ತೆಗೆದಿದ್ದೇವೆ ಅಂತ ಹೇಳದೆ ಕಿತ್ತು ಬಿಸಾಡಿದ್ದೇವೆ ಅಂತ ದುರಹಂಕಾರದಿಂದ ಹೇಳುತ್ತಾರೆ ಎಂದರು. ಯಾವ ಕಾರಣಕ್ಕೆ ಆ ಪಠ್ಯಗಳನ್ನು ತೆಗೆಯಲಾಗಿದೆ ಅಂತ ಅವರು ಸ್ಪಷ್ಟಪಡಿಸಬೇಕಿದೆ, ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡೋದು ಸರಿಯಲ್ಲ ಎಂದು ಮಾಜಿ ಸಚಿವ ಹೇಳಿದರು. ಅವರು ತೆಗದು ಹಾಕಿದ ಪಾಠಗಳಲ್ಲಿ ಸಮಾಜಘಾತುಕ, ರಾಷ್ಟ್ರಘಾತುಕ ಅಂಶಗಳಿದ್ದರೆ ಅದನ್ನು ಜನರ ಮುಂದೆ ಇಡಲಿ, ಮಕ್ಕಳಲ್ಲಿ ದೇಶಭಕ್ತಿಯನ್ನು ಅನಾವರಣಗೊಳಿಸುವ ಪಾಠಗಳು ಸಮಾಜ ಘಾತುಕ ಅಂತ ಹೇಗೆ ಅನಿಸಿಕೊಳ್ಳುತ್ತವೆ ಎಂದು ರವಿ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ