Anna Bhagya scheme: ಅಕ್ಕಿಗೆ ಪರ್ಯಾಯವಾಗಿ ಹಣ ನೀಡುವ ಸರ್ಕಾರದ ನಿರ್ಧಾರವನ್ನು ಹೆಚ್ ಡಿ ಕುಮಾರಸ್ವಾಮಿ ಸದನದಲ್ಲಿ ಸ್ವಾಗತಿಸಿದರು!

Anna Bhagya scheme: ಅಕ್ಕಿಗೆ ಪರ್ಯಾಯವಾಗಿ ಹಣ ನೀಡುವ ಸರ್ಕಾರದ ನಿರ್ಧಾರವನ್ನು ಹೆಚ್ ಡಿ ಕುಮಾರಸ್ವಾಮಿ ಸದನದಲ್ಲಿ ಸ್ವಾಗತಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 12, 2023 | 3:15 PM

ಮುಖ್ಯಮಂತ್ರಿ ನೀಡುವ ವಿವರಣೆಯಿಂದ ಕನ್ವಿನ್ಸ್ ಆಗುವ ಕುಮಾರಸ್ವಾಮಿ ಅಕ್ಕಿಗೆ ಪರ್ಯಾಯವಾಗಿ ಸರ್ಕಾರ ಹಣ ನೀಡಲು ನಿರ್ಧರಿಸುವದಕ್ಕೆ ತಮ್ಮ ತಕರಾರಿಲ್ಲ ಎಂದು ಹೇಳುತ್ತಾರೆ.

ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ (HD Kumarswamy) ವಿಧಾನ ಸಭೆಯಲ್ಲಿಂದು ಬಹಳ ಸೌಮ್ಯವಾಗಿ ಮಾತಾಡಿದರು ಮತ್ತು ಅನ್ನಭಾಗ್ಯ ಯೋಜನೆಯಡಿ (Anna Bhagya scheme ) ಸರ್ಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವ ನಿರ್ಧಾರವನ್ನು ಸ್ವಾಗತಿಸಿದರು. ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಕುಮಾರಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ರಾಜ್ಯದಲ್ಲಿ ಎಪಿಲ್ ಮತ್ತು ಬಿಪಿಎಲ್ ಸೇರಿ ಒಟ್ಟು 1 ಕೋಟಿ 28 ಕುಟುಂಬಗಳಿವೆ ಮತ್ತು 4.42 ಕೋಟಿ ಫಲಾನುಭವಿಗಳಿದ್ದಾರೆ, ಈ 4.42 ಕೋಟಿ ಜನರಿಗೆ ಅಕ್ಕಿ ಸಿಗುವವರೆಗೆ ಪ್ರತಿ ವ್ಯಕ್ತಿಗೆ ಕೆಜಿ ಅಕ್ಕಿಗೆ ರೂ. 34ರಂತೆ ರೂ. 170 ಅನ್ನು ಡಿಬಿಟಿ ವ್ಯವಸ್ಥೆ ಮೂಲಕ ಹಣ ವರ್ಗಾಯಿಸಲಾಗುವುದು ಎಂದು ಹೇಳಿದರು. ಅವರ ವಿವರಣೆಯಿಂದ ಕನ್ವಿನ್ಸ್ ಆಗುವ ಕುಮಾರಸ್ವಾಮಿ ಅಕ್ಕಿಗೆ ಪರ್ಯಾಯವಾಗಿ ಸರ್ಕಾರ ಹಣ ನೀಡಲು ನಿರ್ಧರಿಸುವದಕ್ಕೆ ತಮ್ಮ ತಕರಾರಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ