ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಪರಿಶೀಲನೆ ಹಿನ್ನೆಲೆಯಲ್ಲಿ ಇಂದು ಸಿಟಿ ರೌಂಡ್ಸ್ ಕೈಗೊಂಡಿದ್ದರು. ವಿಧಾನಸೌಧದಿಂದ ಬಸ್‌ನಲ್ಲಿ ತೆರಳಿ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಿಸಿದರು. ಈ ವೇಳೆ ರೇಸ್ ಕೋರ್ಸ್ ರಸ್ತೆಯ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ.
ಯಡಿಯೂರಪ್ಪ ನೇತೃತ್ವದಲ್ಲಿ ಸಿಟಿ ರೌಂಡ್ಸ್ ನಡೆಯುತ್ತಿರುವ ಮಧ್ಯೆ ಸಚಿವ ಬೈರತಿ ಬಸವರಾಜ್ ಮತ್ತು ಬಿಡಿಎ ಅಧ್ಯಕ್ಷ. ಎಸ್.ಆರ್. ವಿಶ್ವನಾಥ್ ಕೆ.ಸಿ.ದಾಸ್ ಮಳಿಗೆಗೆ ಹೋಗಿ ಸ್ವೀಟ್ ಖರೀದಿಸಿದ್ದಾರೆ. ಸ್ವೀಟ್ ಖರೀದಿಸಿದ ಬಳಿಕ, ಸಿಎಂ ವಾಹನಕ್ಕೆ ಸ್ವೀಟ್ ಪ್ಯಾಕೆಟ್‌ಗಳನ್ನು ತಂದಿಟ್ಟಿದ್ದಾರೆ. ಬೈರತಿ ಬಸವರಾಜ್ ಮತ್ತು ಎಸ್.ಆರ್.ವಿಶ್ವನಾಥ್ ಮುಖ್ಯಮಂತ್ರಿ ಯಡಿಯೂರಪ್ಪಗೂ ಸಿಹಿತಿಂಡಿ ತಂದುಕೊಟ್ಟಿದ್ದಾರೆ.
ಸಿಟಿ ರೌಂಡ್ಸ್ಗೆ ಸಿಎಂ ಬಿಎಸ್‌ವೈ ಜೊತೆ ಸಚಿವರಾದ ಆರ್.ಅಶೋಕ್, ಭೈರತಿ ಬಸವರಾಜ್, ಸಂಸದ ಪಿ.ಸಿ.ಮೋಹನ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸಾಥ್ ನೀಡಿದ್ದಾರೆ. ಸಿಎಂ ಅವರು ರೇಸ್ ಕೋರ್ಸ್ ರಸ್ತೆ , ಅಂಬೇಡ್ಕರ್ ರಸ್ತೆ, ಐಟಿಸಿ ಜಂಕ್ಷನ್, ರಾಮ್ ಮೋಹನ್ ರಾಯ್ ರಸ್ತೆ , ನೈಯ್ಸ್ ರೋಡ್ ಜಂಕ್ಷನ್, ವುಡ್ ಸ್ಟ್ರೀಟ್, ಟಾಟಾ ಲೈನ್, ಎಸ್.ಬಿ.ಐ ಜಂಕ್ಷನ್, ಎಂ.ಜಿ ರೋಡ್ , ರಾಜಭವನ ಜಂಕ್ಷನ್, ಪ್ಲಾನಿಟೋರಿಯಂ ಜಂಕ್ಷನ್ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಸಿಎಂ BSY ಸಿಟಿ ರೌಂಡ್ಸ್.. ಕಾಲೇಜು ಮುಂದೆ ಸ್ಕೈ ವಾಕ್ ನಿರ್ಮಿಸಿಕೊಡುವಂತೆ RC ಕಾಲೇಜು ವಿದ್ಯಾರ್ಥಿಗಳಿಂದ ಮನವಿ
Published On - 3:06 pm, Sat, 30 January 21