ಕೊರೊನಾ ಸಂಕಷ್ಟ ಬಿಟ್ಟು.. ವೈದ್ಯರು-IAS ಮಧ್ಯೆ ಮುಸುಕಿನ ಗುದ್ದಾಟ?

| Updated By: ಸಾಧು ಶ್ರೀನಾಥ್​

Updated on: Aug 26, 2020 | 10:53 AM

ಬೆಂಗಳೂರು: ಕೊರೊನಾ ಕಾಲದಲ್ಲಿ ವೈದ್ಯರು ಹಾಗೂ IAS ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ ಎಂಬ ಮಾತುಗಳು ಕೇಳಬಂದಿದೆ. ಹಾಗಾಗಿ, ಈ ಸಮರಕ್ಕೆ ಬ್ರೇಕ್ ಹಾಕಲು ನಾಳೆ ಮಹತ್ವದ ಸಭೆಯೊಂದನ್ನು ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ. ವೈದ್ಯರು ನಮಗೆ IAS ಶ್ರೇಣಿಯ ನೋಡೆಲ್ ಆಫೀಸರ್ಸ್ ಬೇಡ ಅಂತಿದ್ದಾರಂತೆ. ಇತ್ತ IAS ಅಧಿಕಾರಿಗಳು ನಮಗೆ ಧೈರ್ಯದಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರಂತೆ. ಹೀಗಾಗಿ, ವೈದ್ಯರು ಹಾಗೂ ಐಎಎಸ್ ಅಧಿಕಾರಿಗಳ ನಡುವೆ ಪ್ರತಿಷ್ಠೆಯ ಸಮರ ಶುರುವಾಗಿದೆ. ಈಗಾಗಲೇ ಐಎಎಸ್ […]

ಕೊರೊನಾ ಸಂಕಷ್ಟ ಬಿಟ್ಟು.. ವೈದ್ಯರು-IAS ಮಧ್ಯೆ ಮುಸುಕಿನ ಗುದ್ದಾಟ?
Follow us on

ಬೆಂಗಳೂರು: ಕೊರೊನಾ ಕಾಲದಲ್ಲಿ ವೈದ್ಯರು ಹಾಗೂ IAS ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ ಎಂಬ ಮಾತುಗಳು ಕೇಳಬಂದಿದೆ. ಹಾಗಾಗಿ, ಈ ಸಮರಕ್ಕೆ ಬ್ರೇಕ್ ಹಾಕಲು ನಾಳೆ ಮಹತ್ವದ ಸಭೆಯೊಂದನ್ನು ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ.

ವೈದ್ಯರು ನಮಗೆ IAS ಶ್ರೇಣಿಯ ನೋಡೆಲ್ ಆಫೀಸರ್ಸ್ ಬೇಡ ಅಂತಿದ್ದಾರಂತೆ. ಇತ್ತ IAS ಅಧಿಕಾರಿಗಳು ನಮಗೆ ಧೈರ್ಯದಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರಂತೆ. ಹೀಗಾಗಿ, ವೈದ್ಯರು ಹಾಗೂ ಐಎಎಸ್ ಅಧಿಕಾರಿಗಳ ನಡುವೆ ಪ್ರತಿಷ್ಠೆಯ ಸಮರ ಶುರುವಾಗಿದೆ.

ಈಗಾಗಲೇ ಐಎಎಸ್ ಅಧಿಕಾರಿಗಳು ನೀಡುತ್ತಿರುವ ಕಿರುಕುಳದ ವಿರುದ್ಧ ವೈದ್ಯರು ರೊಚ್ಚಿಗೆದ್ದಿದ್ದಾರೆ. ಇದೀಗ ವೈದ್ಯರ ವಿರುದ್ಧವೂ ಸಮರ ಸಾರಲು IAS ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಮೈಸೂರು ಜಿ.ಪಂ CEO ಮೇಲೆ FIR ದಾಖಲಿಸಿದ್ದನ್ನು IAS ಅಧಿಕಾರಿಗಳ ಸಂಘದಿಂದ ಖಂಡನೆ ವ್ಯಕ್ತವಾಗ್ತಿದೆ.

ಕೊವಿಡ್ ಕಂಟ್ರೋಲ್ ಮಾಡಲು ಹಗಲಿರುಳು ಎನ್ನದೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ನ ಮತ್ತು ನಿಯಮಗಳನ್ನ ಸರಿಯಾಗಿ ಜಾರಿಗೆ ತರಲು ಮೇಲಿನ ಅಧಿಕಾರಿಗಳಿಗೆ ಹೆಚ್ಚು ಕೆಲಸವಿರುತ್ತದೆ. ಈ ಸಂದರ್ಭದಲ್ಲಿ ಒಬ್ಬ ಜಿಲ್ಲಾ CEO ಗೆ ಕೆಲಸ ಮಾಡಿಸಬೇಕಾದ ಒತ್ತಡವಿರುತ್ತದೆ. ಹಾಗಂತ CEO ರೇ ತಪ್ಪು ಮಾಡಿದ್ದು ಅಂತಾ ಎಲ್ಲರು ಬಿಂಬಿಸುತ್ತಿದ್ದಾರೆ. ಇದರಿಂದ ಅಧಿಕಾರಿಗಳ ನೈತಿಕತೆ ಕುಗ್ಗುವಂತೆ ಆಗುತ್ತದೆ ಎಂದು ಅಧಿಕಾರಿಗಳು ತಮ್ಮ ವಾದ ಮಂಡಿಸಿದ್ದಾರೆ.

‘ಧೈರ್ಯದಿಂದ ಕೆಲಸ ಮಾಡುವಂಥ ವಾತವರಣ ಬೇಕು’
THO ಸಾವಿನ ಬಗ್ಗೆ ನಮಗೂ ವಿಷಾದವಿದೆ. ಹಾಗಂತ ಅಧಿಕಾರಿಗಳು ಕಿರಿಯ ಸಿಬ್ಬಂದಿಯಿಂದ ಕೆಲಸ ಮಾಡಿಸಬಾರದು ಅನ್ನೋ ರೀತಿ ಬಿಂಬಿಸೋದು ಸರಿಯಲ್ಲ. ಹೀಗಾಗಿ ನಮಗೆ ಮುಕ್ತವಾಗಿ ಹಾಗೂ ಧೈರ್ಯದಿಂದ ಕೆಲಸ ಮಾಡುವಂಥ ವಾತವರಣವನ್ನು ಸರ್ಕಾರ ಕಲ್ಪಿಸಿಕೊಡಬೇಕು. ಅಧಿಕಾರಿಗಳನ್ನ ದಕ್ಷತೆಯಿಂದ ಕೆಲಸ ಮಾಡಲು ಬಿಡಬೇಕು ಎಂದು IAS ಅಧಿಕಾರಿಗಳು ಹೇಳ್ತಿದ್ದಾರೆ.

‘ಇವರು ನೋಡೆಲ್ ಆಫೀಸರ್ ಆಗಿ ನೇಮಕವಾಗೋದು ಬೇಡ’
ಇತ್ತ ವೈದ್ಯರು IAS ಅಧಿಕಾರಿಗಳ ಕಾರ್ಯವೈಖರಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವರಿಗೆ ಕೋವಿಡ್ ನಿರ್ವಹಣೆಗಿಂತ ಬರೀ ಟಾರ್ಗೆಟ್ ಸೆಟ್​ ಮಾಡುವುದು ಗೊತ್ತಷ್ಟೇ. ಸುಮ್ಮನೆ ಱಂಡಮ್ ಟೆಸ್ಟ್ ಕಿಟ್​ಗಳನ್ನ ಖರ್ಚು ಮಾಡಲು ಹೀಗೆ ಮಾಡ್ತಿದ್ದಾರೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರನ್ನು ಬೇಕಾಬಿಟ್ಟಿಯಾಗಿ ಟೆಸ್ಟ್ ಮಾಡಿಸುತ್ತಿದ್ದಾರೆ. ಹೀಗಾಗಿ ಇವರು ನೋಡೆಲ್ ಆಫೀಸರ್ ಆಗಿ ನೇಮಕವಾಗೋದು ಬೇಡ ಅಂತಾ ವೈದ್ಯರು ಹೇಳುತ್ತಿದ್ದಾರೆ.

ಈ ಶೀತಲ ಸಮರವನ್ನು ಶಮನಗೊಳಿಸಲು ಇಬ್ಬರ ನಡುವೆ ಸರ್ಕಾರದ ಮಟ್ಟದಲ್ಲಿ ಸಭೆ ಏರ್ಪಟ್ಟಿದ್ದು ಈ ಸಭೆಯಲ್ಲಿ ಐಎಎಸ್ ಅಧಿಕಾರಿಗಳು ಕೋವಿಡ್ ನೋಡೆಲ್ ಆಫೀಸರ್ಸ್ ಗೆ ಮುಂದುವರಿಯುವುದರ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.