ಉಡುಪಿ: ಲಾಕ್‌ಡೌನ್ ಲಾಕ್‌ಡೌನ್ ಲಾಕ್‌ಡೌನ್.. ಈ ಪದ ಕೇಳುತ್ತಿದ್ದರೆ ಭಯ ಆಗುತ್ತೆ. ಯಾಕಂದ್ರೆ ಈ ಲಾಕ್‌ಡೌನ್‌ನಿಂದ ಹಣವಂತರು ಮನೆಯಲ್ಲಿ ಚೆನ್ನಾಗಿ ಉಂಡು ತಿಂದು ಮಲಗಿದ್ರೆ, ಬಡವರು ಹಸಿದ ಹೊಟ್ಟೆಯಲ್ಲಿ ಮಲಗುವಂತೆ ಮಾಡಿದೆ. ಅಂದೇ ದುಡಿದು ಅಂದೇ ಊಟ ಮಾಡುವರು ಒಂದು ಹೊತ್ತಿನ ಊಟಕ್ಕೂ ನರಕಯಾತನೆ ಪಡುತ್ತಿದ್ದಾರೆ.
ಬಡವರ ಕಷ್ಟ ಈ ನೋಡಲಾಗದೆ, ಹೋಟೆಲ್ ಕ್ಲೋಸ್ ಇರುವುದರಿಂದ ಉಡುಪಿಯ ಕಾಂಗ್ರೆಸ್ ಮುಖಂಡ ಮತ್ತು ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಮತ್ತು ಬಳಗ ಪ್ರತಿದಿನ 250ಕ್ಕೂ ಅಧಿಕ ಊಟ ವಿತರಿಸುತ್ತಿದ್ದಾರೆ. ಕೇವಲ ರಸ್ತೆ ಬದಿಯಲ್ಲಿರುವ ನಿರಾಶ್ರಿತರು ಮಾತ್ರವಲ್ಲದೆ ಆಸ್ಪತ್ರೆಗಳಿಗೆ ದುಡಿಯುವ ಆ್ಯಂಬುಲೆನ್ಸ್ ಚಾಲಕರು, ಪೊಲೀಸರು ಮತ್ತು ಹೋಂಗಾರ್ಡ್ ಸಿಬ್ಬಂದಿಗೆ ಊಟ ನೀಡುತ್ತಿದ್ದಾರೆ. ಎಲ್ಲಾ ಕಡೆ ಹೋಟೆಲ್‌ಗಳು ಮುಚ್ಚಿರುವ ಕಾರಣ ಬಹಳಷ್ಟು ಜನರು ನಗರದಲ್ಲಿ ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ನೀಗಿಸಲು ಕೃಷ್ಣಮೂರ್ತಿ ಮತ್ತು ಅವರ ತಂಡ ಹಗಲಿರುಳು ಶ್ರಮಿಸುತ್ತಿದೆ.
ಕೃಷ್ಣಮೂರ್ತಿ ಅವರ ತಂಡ ಕೇವಲ ಊಟ ಹಂಚುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾರಿಗೆ ಔಷಧಿ ಅಗತ್ಯವಿದೆಯೋ ಅವರಿಗೆ ಮೆಡಿಕಲ್ ಸ್ಟೋರ್ಗಳಿಂದ ಉಚಿತವಾಗಿ ಔಷಧಿ ಸರಬರಾಜು ಮಾಡುತ್ತಿದ್ದಾರೆ. 25 ಅಧಿಕ ಆಟೋ ಚಾಲಕರನ್ನು ಜೊತೆಗೂಡಿಸಿಕೊಂಡು ಮೆಡಿಕಲ್ ಎಮರ್ಜೆನ್ಸಿ ಇರುವ ಜನರಿಗೆ ಉಚಿತ ಆಟೋ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೈವೆಯಲ್ಲಿ ಹೋಗುವ ಲಾರಿ ಚಾಲಕರಿಗೂ ಊಟ ನೀರು ನೀಡುವ ಕೆಲಸ ನಿತ್ಯ ಈ ಯುವಕರ ತಂಡದಿಂದ ನಡೆಯುತ್ತಿದೆ.
ಹೋಟೆಲ್ ಉದ್ಯಮಿಯಾಗಿರುವ ಕೃಷ್ಣಮೂರ್ತಿ ತನ್ನ ಹೋಟೆಲ್ ಕಿಚನ್ ಬಳಸಿಕೊಂಡು ಊಟ ತಯಾರಿಸುತ್ತಿದ್ದಾರೆ. ಉಡುಪಿ, ಕಾಪು, ಕಟಪಾಡಿ, ಪರ್ಕಳ, ಮಣಿಪಾಲ ಮೊದಲಾದ ಕಡೆ ಇವರು ಆಹಾರ ವಿತರಿಸುತ್ತಿದ್ದು, ಇಂದಿನಿಂದ ದಿನಕ್ಕೆ 500 ಊಟ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ನಮ್ಮದೊಂದು ಸಲಾಂ.
ಇದನ್ನೂ ಓದಿ: ರೋಗಿಗಳಿಗೆ ಚಿಕಿತ್ಸೆ ನೀಡೋದನ್ನು ನಿಮ್ಮಿಂದ ಕಲಿಯಬೇಕಿಲ್ಲ; ಸೋನು ಸೂದ್ ವಿರುದ್ಧ ತಿರುಗಿಬಿದ್ದ ವೈದ್ಯರು