AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ತೋಟದ ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರ್ ಬೈಕ್

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ತೋಟದಲ್ಲಿ ಮಾವಿನಕಾಯಿ ಕಿತ್ತುಕೊಂಡಿದ್ದಕ್ಕೆ ಮಾಲೀಕ ಬೈಕ್ ಸವಾರನ ವಿರುದ್ಧ ವಿಕೃತವರ್ತನೆ ತೋರಿಸಿದ್ದಾನೆ. ಬೈಕ್ ಸವಾರ ಸತೀಶ್ ತೋಟದಲ್ಲಿ ಬಿಟ್ಟಿದ್ದ ಮಾವಿನಕಾಯಿ ಸವಿಯಲು 6 ಕಾಯಿಗಳನ್ನು ಕಿತ್ತಿದ್ದರು. ಇದನ್ನು ನೋಡಿದ ತೋಟದ ಮಾಲೀಕ ನಾಗರಾಜ್ ಮಾನವೀಯತೆ ಮರೆತು ವಿಕೃತ ವರ್ತನೆ ಮೆರೆದಿದ್ದಾರೆ.

ಚಿಕ್ಕಬಳ್ಳಾಪುರ: ತೋಟದ ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರ್ ಬೈಕ್
ಮಾವಿನಕಾಯಿ ಕಿತ್ತಿದ್ದಕ್ಕೆ ಸುಟ್ಟು ಹೋಯ್ತು ಡಿಸ್ಕವರಿ ಬೈಕ್
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:May 21, 2021 | 10:10 AM

Share

ಚಿಕ್ಕಬಳ್ಳಾಪುರ: ಹಿಂದೊಂದು ಕಾಲವಿತ್ತು ಸ್ನೇಹಿತರೆಲ್ಲ ಒಟ್ಟುಗೂಡಿ ಬೇಲಿ ದಾಟಿ ತೋಟದಲ್ಲಿ ಬೆಳೆದ ಮಾವಿನಕಾಯಿಗಳನ್ನು ಕಿತ್ತು ಜಜ್ಜಿ ಉಪ್ಪು ಖಾರ ಹಾಕಿ ತಿಂದು ಬಾಲ್ಯ ಕಳೆದದ್ದು ನೆನಪು. ಆದರೆ ಇಂದು ಮಾವಿನಕಾಯಿ ತಿನ್ನಬೇಕು ಎಂದುಕೊಂಡದ್ದೇ ಮಹಾ ತಪ್ಪಾಗಿ ಹೋಗಿದೆ. ತೋಟದಲ್ಲಿದ್ದ 6 ಮಾವಿನಕಾಯಿ ಕಿತ್ತಿದ್ದಕ್ಕೆ ಆಕ್ರೋಶಗೊಂಡ ತೋಟದ ಮಾಲೀಕ ಮಾಡಿದ್ದೇನು ಗೊತ್ತಾ? ಮಾವಿನಕಾಯಿ ಕಿತ್ತಿದ್ದಕ್ಕೆ ಈ ವ್ಯಕ್ತಿ ತೆತ್ತ ಬೆಲೆ ಏನು?

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ತೋಟದಲ್ಲಿ ಮಾವಿನಕಾಯಿ ಕಿತ್ತುಕೊಂಡಿದ್ದಕ್ಕೆ ಮಾಲೀಕ ಬೈಕ್ ಸವಾರನ ವಿರುದ್ಧ ವಿಕೃತವರ್ತನೆ ತೋರಿಸಿದ್ದಾನೆ. ಬೈಕ್ ಸವಾರ ಸತೀಶ್ ತೋಟದಲ್ಲಿ ಬಿಟ್ಟಿದ್ದ ಮಾವಿನಕಾಯಿ ಸವಿಯಲು 6 ಕಾಯಿಗಳನ್ನು ಕಿತ್ತಿದ್ದರು. ಇದನ್ನು ನೋಡಿದ ತೋಟದ ಮಾಲೀಕ ನಾಗರಾಜ್ ಮಾನವೀಯತೆ ಮರೆತು ವಿಕೃತ ವರ್ತನೆ ಮೆರೆದಿದ್ದಾರೆ. ಸತೀಶ್ ತಂದಿದ್ದ ಅಗಲಗುರ್ಕಿ ಗ್ರಾಮದ ಕೃಷ್ಣಪ್ಪ ಎನ್ನುವವರಿಗೆ ಸೇರಿದ  ಡಿಸ್ಕವರ್ ಬೈಕ್ ಅನ್ನು ತೋಟದ ಮಾಲೀಕ ನಾಗರಾಜ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

6 ಮಾವಿನಕಾಯಿ ಕಿತ್ತಿದ್ದಕ್ಕೆ ಸತೀಶ್ ಡಿಸ್ಕವರ್ ಬೈಕ್ ಅನ್ನು ಕಳೆದುಕೊಂಡಿದ್ದಾರೆ. ತೋಟದ ಮಾಲೀಕನ ವರ್ತನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Mohanlal Birthday: ಮಲಯಾಳಂ ಸ್ಟಾರ್​ ನಟ ಮೋಹನ್​ ಲಾಲ್​ ಜನ್ಮದಿನ; ‘ದೃಶ್ಯಂ 2’ ಗೆಟಪ್​ನಲ್ಲಿ ಕಾಮನ್​ ಡಿಪಿ ವೈರಲ್​

Published On - 10:06 am, Fri, 21 May 21

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.