AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohanlal Birthday: ಮಲಯಾಳಂ ಸ್ಟಾರ್​ ನಟ ಮೋಹನ್​ ಲಾಲ್​ ಜನ್ಮದಿನ; ‘ದೃಶ್ಯಂ 2’ ಗೆಟಪ್​ನಲ್ಲಿ ಕಾಮನ್​ ಡಿಪಿ ವೈರಲ್​

Happy Birthday Mohanlal: ಬರ್ತ್​ಡೇ ಸಲುವಾಗಿ ಬಿಡುಗಡೆ ಮಾಡಿರುವ ಕಾಮನ್​ ಡಿಪಿ ಪೋಸ್ಟರ್​ನಲ್ಲಿ ಮೋಹನ್​ಲಾಲ್​ ಅವರ ‘ದೃಶ್ಯಂ 2’ ಸಿನಿಮಾದ ಗೆಟಪ್​ ಹೈಲೈಟ್​ ಆಗಿದೆ. ಇದನ್ನು ಅವರ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

Mohanlal Birthday: ಮಲಯಾಳಂ ಸ್ಟಾರ್​ ನಟ ಮೋಹನ್​ ಲಾಲ್​ ಜನ್ಮದಿನ; ‘ದೃಶ್ಯಂ 2’ ಗೆಟಪ್​ನಲ್ಲಿ ಕಾಮನ್​ ಡಿಪಿ ವೈರಲ್​
ಮೋಹನ್​ಲಾಲ್​
ಮದನ್​ ಕುಮಾರ್​
|

Updated on:May 21, 2021 | 8:53 AM

Share

ಮಲಯಾಳಂ ಚಿತ್ರರಂಗದ ಸೂಪರ್​ ಸ್ಟಾರ್​ ಕಲಾವಿದ ಮೋಹನ್​​ಲಾಲ್​ ಅವರಿಗೆ ಇಂದು (ಮೇ 21) ಜನ್ಮದಿನದ ಸಂಭ್ರಮ. 1980ರ ದಶಕದಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅವರು ಇಂದಿಗೂ ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. ಕೇರಳದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮೋಹನ್​ಲಾಲ್​ ಸಿನಿಮಾಗಳೆಂದರೆ ಜನರು ಮುಗಿಬಿದ್ದು ನೋಡುತ್ತಾರೆ. ಎಲ್ಲರಿಂದಲೂ ಅವರಿಗೆ ಇಂದು ಜನ್ಮದಿನದ ಶುಭಾಶಯ ಕೋರಲಾಗುತ್ತಿದೆ.

ಮಾಲಿವುಡ್​ನಲ್ಲಿ ಇಂದು ಮಿಂಚುತ್ತಿರುವ ಹೊಸ ಹೀರೋಗಳಿಗೂ ಸಖತ್​ ಪೈಪೋಟಿ ನೀಡುತ್ತಿರುವ ಮೋಹನ್​ಲಾಲ್​ ಅವರು 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2019ರಲ್ಲಿ ಬಂದ ಲೂಸಿಫರ್​ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈ ವರ್ಷ ಓಟಿಟಿಯಲ್ಲಿ ಬಿಡುಗಡೆಯಾದ ‘ದೃಶ್ಯಂ 2’ ಚಿತ್ರ ಕೂಡ ಸೂಪರ್​ ಹಿಟ್​ ಆಯಿತು. ದೇಶಾದ್ಯಂತ ಇರುವ ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡಿದರು. ಆ ಮೂಲಕ ಮೋಹನ್​ಲಾಲ್​ ಸ್ಟಾರ್​ಗಿರಿ ಇನ್ನಷ್ಟು ಹೆಚ್ಚಿತು.

ಇಂದು ಬರ್ತ್​ಡೇ ಸಲುವಾಗಿ ಬಿಡುಗಡೆ ಮಾಡಿರುವ ಕಾಮನ್​ ಡಿಪಿ ಪೋಸ್ಟರ್​ನಲ್ಲಿಯೂ ಮೋಹನ್​ಲಾಲ್​ ಅವರ ‘ದೃಶ್ಯಂ 2’ ಸಿನಿಮಾದ ಗೆಟಪ್​ ಹೈಲೈಟ್​ ಆಗಿದೆ. ಇದನ್ನು ಅವರ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೊರೊನಾ ವೈರಸ್​ ಹಾವಳಿ ಹೆಚ್ಚುತ್ತಿರುವುದರಿಂದ ಸಾರ್ವಜನಿಕವಾಗಿ ಸಂಭ್ರಮಿಸಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಅದರ ಬದಲು ಸಾಮಾಜಿಕ ಜಾಲತಾಣಗಳ ಮೂಲಕ ಫ್ಯಾನ್ಸ್​ ಸಂಭ್ರಮಿಸುತ್ತಿದ್ದಾರೆ.

ಅಭಿಮಾನಿಗಳು ಮಾತ್ರವಲ್ಲದೆ, ವಿವಿಧ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಮೋಹನ್​ಲಾಲ್​ಗೆ ಶುಭಾಶಯ ತಿಳಿಸುತ್ತಿದ್ದಾರೆ. ಪೃಥ್ವಿರಾಜ್​ ಸುಕುಮಾರನ್​, ಟೊವಿನೋ ಥಾಮಸ್ ಸೇರಿದಂತೆ ಅನೇಕ ನಟರು ಮೋಹನ್​ಲಾಲ್​ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಬರ್ತ್​ಡೇ ವಿಶ್​ ಮಾಡಿದ್ದಾರೆ. 61ನೇ ವಯಸ್ಸಿನಲ್ಲೂ ಮೋಹನ್​ಲಾಲ್​ ಹದಿಹರೆಯದ ಯುವಕನಂತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮರಕ್ಕರ್​, ಆರಾಟ್ಟು ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ದೃಶ್ಯಂ ರೀತಿಯೇ ‘ದೃಶ್ಯಂ 2’ ಸಿನಿಮಾ ಕೂಡ ಹಲವು ಭಾಷೆಗಳಿಗೆ ರಿಮೇಕ್​ ಆಗುತ್ತಿದೆ. ಕನ್ನಡ ರಿಮೇಕ್​ನಲ್ಲಿ ರವಿಚಂದ್ರನ್​ ನಟಿಸಲಿದ್ದಾರೆ.

ಇದನ್ನೂ ಓದಿ:

ದೃಶ್ಯಂ ಸಿನಿಮಾ ನೋಡಿ ದರೋಡೆಗೆ ಪ್ಲ್ಯಾನ್.. ಇದು ನಿಮ್ಮ ಊಹೆಗೂ ನಿಲುಕದಂಥ ‘ಶೂ’ ಮ್ಯಾನ್ ಥ್ರಿಲ್ಲರ್!

‘ದೃಶ್ಯ 2’ ಮಾಡೋಕೆ ರವಿಚಂದ್ರನ್​ ರೆಡಿ! ಯುಗಾದಿ ಹಬ್ಬದ ದಿನವೇ ‘ಕ್ರೇಜಿ ಸ್ಟಾರ್​’ ಅಭಿಮಾನಿಗಳಿಗೆ ಸಿಹಿ ಸುದ್ದಿ

Published On - 8:18 am, Fri, 21 May 21

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ