ಈ ಫೋಟೋದಲ್ಲಿರುವ ಸ್ಯಾಂಡಲ್​ವುಡ್​ ಬ್ಯೂಟಿ ಯಾರು ಎಂದು ಗೆಸ್​ ಮಾಡ್ತೀರಾ?

ಕೊರೊನಾ ವೈರಸ್​ ಎರಡನೇ ಅಲೆ ಮಿತಿಮೀರಿ ಹರಡುತ್ತಿದೆ. ಹೀಗಾಗಿ, ದೇಶದ ಅನೇಕ ರಾಜ್ಯಗಳಲ್ಲಿ ಕಠಿಣ ಲಾಕ್​ಡೌನ್​ ಜಾರಿ ತರಲಾಗಿದೆ. ಇದಕ್ಕಾಗಿ ಶೂಟಿಂಗ್​ ಕೂಡ ನಿಲ್ಲಿಸಲಾಗಿದೆ. ಇದರಿಂದ ಸಿನಿಮಾ ಮಂದಿ ಮನೆಯಲ್ಲೇ ಇರುವಂತಾಗಿದೆ.

ಈ ಫೋಟೋದಲ್ಲಿರುವ ಸ್ಯಾಂಡಲ್​ವುಡ್​ ಬ್ಯೂಟಿ ಯಾರು ಎಂದು ಗೆಸ್​ ಮಾಡ್ತೀರಾ?
ರಶ್ಮಿಕಾ ಮಂದಣ್ಣ
Rajesh Duggumane

|

May 20, 2021 | 10:06 PM

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಹಲವು ರಾಜ್ಯಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಈ ಕಾರಣಕ್ಕೆ ಸೆಲೆಬ್ರಿಟಿಗಳೆಲ್ಲರೂ ಮನೆಯಲ್ಲೇ ಇದ್ದಾರೆ. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿರುವ ಸ್ಟಾರ್​ಗಳು ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್​ವುಡ್​ನ ಸ್ಟಾರ್​ ನಟಿ ಬಾಲ್ಯದ ದಿನಗಳ ಫೋಟೋ ಒಂದನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಈ ಫೋಟೋಗಳನ್ನು ಹಂಚಿಕೊಂಡಿದ್ದು ಬೇರಾರೂ ಅಲ್ಲ ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಕೆಂಪು ಟಿ-ಶರ್ಟ ಧರಿಸಿ ಕಾಯುತ್ತಾ ಕೂತಿದ್ದಾರೆ. ಈ ಫೋಟೋದಲ್ಲಿ ಅವರು ತುಂಬಾನೇ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಕ್ಯಾಪ್ಶನ್​ ನೀಡಿರುವ ಅವರು, ಕೊರೊನಾ ಹೋಗುವುದನ್ನು ಕಾಯುವುದು ಹೀಗೆಯೇ ಇರುತ್ತದೆ ಎಂದು ಕುಹಕವಾಡಿದ್ದಾರೆ. ಅಲ್ಲದೆ, ಇದಕ್ಕೆ #ThrowbackThursday ಎಂದು ಹ್ಯಾಶ್​ಟ್ಯಾಗ್​​ ಕೂಡ ನೀಡಿದ್ದಾರೆ.

ಕಿರಿಕ್​ ಪಾರ್ಟಿ ತೆರೆಕಂಡಾಗ ಕರ್ನಾಟಕದ ಕ್ರಶ್​ ಆಗಿದ್ದ ರಶ್ಮಿಕಾ, ನಂತರ ಇಂಡಿಯಾ ಕ್ರಶ್​ ಆದರು. ಇಂಥ ಬ್ಯೂಟಿ ಚಿಕ್ಕ ವಯಸ್ಸಿನಲ್ಲೂ ಕ್ಯೂಟ್​ ಆಗಿದ್ದರು ಎಂದು ಅಭಿಮಾನಿಗಳು ಹೇಳಿದ್ದಾರೆ. ಚೈಲ್ಡ್​ಹುಡ್​ ಫೋಟೋ ನೋಡಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ.  

ಕೊರೊನಾ ವೈರಸ್​ ಎರಡನೇ ಅಲೆ ಮಿತಿಮೀರಿ ಹರಡುತ್ತಿದೆ. ಹೀಗಾಗಿ, ದೇಶದ ಅನೇಕ ರಾಜ್ಯಗಳಲ್ಲಿ ಕಠಿಣ ಲಾಕ್​ಡೌನ್​ ಜಾರಿಗೆ ತರಲಾಗಿದೆ. ಇದಕ್ಕಾಗಿ ಶೂಟಿಂಗ್​ ಕೂಡ ನಿಲ್ಲಿಸಲಾಗಿದೆ. ಇದರಿಂದ ಸಿನಿಮಾ ಮಂದಿ ಮನೆಯಲ್ಲೇ ಇರುವಂತಾಗಿದೆ. ಹೀಗಾಗಿ, ಸೆಲೆಬ್ರಿಟಿಗಳು ವಿಡಿಯೋ ಹಾಗೂ Throwback ಫೋಟೋಗಳನ್ನು ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಗುಡ್ ಬೈ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ವೃತ್ತಿ ಜೀವನದ ದೃಷ್ಟಿಯಿಂದ ಇದು ಬಹಳ ಮಹತ್ವ ಪಡೆದುಕೊಂಡಿದೆ. ಇದಲ್ಲದೆ, ತೆಲುಗಿನಲ್ಲಿ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಡಿ-ಗ್ಲಾಮ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಕಾಡಿನ ಹಿನ್ನೆಲೆಯಲ್ಲಿ ನಡೆಯಲಿದೆ. ಈ ಚಿತ್ರ ಎರಡು ಪಾರ್ಟ್​ಗಳಲ್ಲಿ ಮೂಡಿ ಬರಲಿದೆ ಎನ್ನುವ ಮಾತು ಕೂಡ ಕೇಳಿ ಬಂದಿದೆ.

ಇದನ್ನೂ ಓದಿ: Pushpa: ರಶ್ಮಿಕಾ-ಅಲ್ಲು ಅರ್ಜುನ್ ನಟನೆಯ​ ‘ಪುಷ್ಪ’ ಚಿತ್ರಕ್ಕೆ ಹೆಸರು ಚೇಂಜ್​; ಯಾಕಿಂಥ ನಿರ್ಧಾರ?

‘ಕಿರಿಕ್​ ಪಾರ್ಟಿ ಹಿಂದಿ ರಿಮೇಕ್​ನಲ್ಲಿ ನಾನು ನಟಿಸಲ್ಲ’; ರಶ್ಮಿಕಾ ಖಡಕ್​ ನಿರ್ಧಾರಕ್ಕಿದೆ ಬಲವಾದ ಕಾರಣ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada