ಲಸಿಕೆ ಹಾಕಿ ಹಣ ಮಾಡುತ್ತಿದ್ದ ಲೇಡಿ ಡಾಕ್ಟರ್ಸ್ ವಿರುದ್ಧ ಎಫ್ಐಆರ್, ಪೊಲೀಸರಿಂದ ಮುಂದುವರೆದ ಶೋಧ
ಮಂಜುನಾಥ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ.ಪುಷ್ಪಿತಾ(25) ಹಾಗೂ ಆಕೆಯ ಜೊತೆ ಕೆಲಸ ಮಾಡುತ್ತಿದ್ದ ಪ್ರೇಮಾ(34) ಬಂಧಿತ ಆರೋಪಿಗಳು. ಇವರು ಪಿಹೆಚ್ಸಿಯಲ್ಲಿ ಅರ್ಹ ಫಲಾನುಭವಿಗಳಿಗೆ ನೀಡದೆ ಡಾ.ಪುಷ್ಪಿತಾ ತನ್ನ ಪರಿಚಯದ ಪ್ರೇಮಾಳ ಮನೆಗೆ ಲಸಿಕೆ ತೆಗೆದುಕೊಂಡು ಹೋಗಿ 500 ರೂ ಗೆ ಒಂದು ಡೋಸ್ ನೀಡುತ್ತಿದ್ದರು.
ಬೆಂಗಳೂರು: ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಅರ್ಹರಿಗೆ ನೀಡಬೇಕಿದ್ದ ಕೊರೊನಾ ಲಸಿಕೆಯನ್ನು ಹಣ ಪಡೆದು ಅಕ್ರಮವಾಗಿ ನೀಡುತ್ತಿದ್ದ ಬಿಬಿಎಂಪಿ ಗುತ್ತಿಗೆ ವೈದ್ಯೆ ಸೇರಿ ಇಬ್ಬರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಈ ಅಕ್ರಮ ವ್ಯಾಕ್ಸಿನೇಶನ್ ದಂಧೆ ಪ್ರಕರಣ ಹಿನ್ನೆಲೆಯಲ್ಲಿ ಈಗ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಜುನಾಥ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ.ಪುಷ್ಪಿತಾ(25) ಹಾಗೂ ಆಕೆಯ ಜೊತೆ ಕೆಲಸ ಮಾಡುತ್ತಿದ್ದ ಪ್ರೇಮಾ(34) ಬಂಧಿತ ಆರೋಪಿಗಳು. ಇವರು ಪಿಹೆಚ್ಸಿಯಲ್ಲಿ ಅರ್ಹ ಫಲಾನುಭವಿಗಳಿಗೆ ನೀಡದೆ ಡಾ.ಪುಷ್ಪಿತಾ ತನ್ನ ಪರಿಚಯದ ಪ್ರೇಮಾಳ ಮನೆಗೆ ಲಸಿಕೆ ತೆಗೆದುಕೊಂಡು ಹೋಗಿ 500 ರೂ ಗೆ ಒಂದು ಡೋಸ್ ನೀಡುತ್ತಿದ್ದರು. ಏಪ್ರಿಲ್ 23ರಿಂದ ಇವರು ಈ ದಂಧೆ ನಡೆಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರತಿ ದಿನ ಮಧ್ಯಾಹ್ನ 4 ಗಂಟೆಯ ನಂತರ ಮನೆಯಲ್ಲಿ ಲಸಿಕೆ ನೀಡುತ್ತಿದ್ದರು. ಲಸಿಕೆ ಪಡೆಯಲು ಇಚ್ಚಿಸಿದವರನ್ನು ಪ್ರೇಮಾಳ ಮನೆಗೆ ಕರೆಸಿಕೊಳ್ಳಲಾಗುತ್ತಿತ್ತು.
ಸಿಕ್ಕಿ ಬಿದ್ದಿದ್ದು ಹೇಗೆ? ಅಕ್ರಮ ಲಸಿಕೆ ನೀಡಿಕೆ ಬಗ್ಗೆ ಮಾಹಿತಿ ಪಡೆದ ಪಶ್ಚಿಮ ವಿಭಾಗದ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್ಪೆಕ್ಟರ್ ಲೋಹಿತ್ ಖುದ್ದಾಗಿ ಲಸಿಕೆ ಪಡೆಯುವವರಂತೆ ಬಂದು ಅಕ್ರಮ ಲಸಿಕೆ ನೀಡುತ್ತಿದ್ದದನ್ನು ಖಚಿತ ಪಡಿಸಿಕೊಂಡಿದ್ದಾರೆ. ಈ ರೀತಿ ವೈದ್ಯೆ ಮತ್ತು ಸಹಾಯಕಿ ಅರೆಸ್ಟ್ ಆಗಿದ್ದಾರೆ. ಇನ್ನು ಅಕ್ರಮ ವ್ಯಾಕ್ಸಿನೇಷನ್ ಅನ್ನು ರೆಡ್ ಹ್ಯಾಂಡ್ ಆಗಿ ಹಿಡಿಯದಿದ್ರೆ ಸಾಕ್ಷಿಯೇ ಸಿಗುತ್ತಿರಲಿಲ್ಲಾ. ಅಕ್ರಮ ವ್ಯಾಕ್ಸಿನೇಷನ್ ನಲ್ಲಿ ಒಂದು ವ್ಯಾಕ್ಸಿನೇಷನ್ ಗೆ 500 ಹಣ ಪಡೆಯುತಿದ್ರು. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವವರ ಬಳಿ ಆಧಾರ್ ಕಾರ್ಡ್ ಅನ್ನು ಪಡೆದು ಎಂಟ್ರಿ ಮಾಡುತಿದ್ರು. ವ್ಯಾಕ್ಸಿನೇಷನ್ಗೆ ಇರುವ ವೆಬ್ ಸೈಟ್ ನಲ್ಲಿ ಎಂಟ್ರಿ ಮಾಡಿ ಮೆಸೇಜ್ ಬರುವಂತೆ ಮಾಡ್ತಿದ್ರು.
ಸಕ್ರಮವಾಗಿಯೇ ವ್ಯಾಕ್ಸಿನೇಷನ್ಗೆ ಇರುವ ನೀತಿ ನಿಯಮಗಳನ್ನೆ ಪಾಲಿಸುತಿದ್ರು. ಒಂದು ದಿನಕ್ಕೆ ಸುಮಾರು 70 ಜನರಿಗೆ ವ್ಯಾಕ್ಸಿನೇಷನ್ ಹಾಕಿರುವ ಮಾಹಿತಿ ಸಿಕ್ಕಿದೆ. ಒಂದು ದಿನದಲ್ಲೇ ಅಕ್ರಮವಾಗಿ ಸುಮಾರು 30 ರಿಂದ 35 ಸಾವಿರ ಹಣ ಮಾಡುತಿದ್ದರು. ಈ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.
ಇದನ್ನೂ ಓದಿ: ಐಎಎಸ್ ಪರೀಕ್ಷೆ ಪಾಸ್ ಮಾಡಿದ ಟೀಂ ಇಂಡಿಯಾದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ?