ಬಾದಾಮಿ ಕ್ಷೇತ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳ; ನೆರವಿಗೆ ಧಾವಿಸಿದ ಸಿದ್ದರಾಮಯ್ಯ

ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಸಿದ್ದರಾಮಯ್ಯ ಪ್ರತಿನಿಧಿಸುತ್ತಾರೆ. ತಮ್ಮ ಕ್ಷೇತ್ರದ ಆರೋಗ್ಯ ಸಿಬ್ಬಂದಿಗೆ 100 ಎನ್-95 ಮಾಸ್ಕ್ ವಿತರಿಸಿದ್ದಾರೆ. ಜೊತೆಗೆ, 50 ಪಿಪಿಇ ಕಿಟ್​ಗಳನ್ನು ಕೂಡ ಸಿದ್ದರಾಮಯ್ಯ ಬೆಂಗಲಿಗರು ವಿತರಿಸಿದ್ದಾರೆ.

ಬಾದಾಮಿ ಕ್ಷೇತ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳ; ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Edited By:

Updated on: Aug 23, 2021 | 12:27 PM

ಬಾಗಲಕೋಟೆ: ಬಾದಾಮಿ ಕ್ಷೇತ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊರೊನಾ ಸೋಂಕಿತರ ನೆರವಿಗೆ ಧಾವಿಸಿದ್ದಾರೆ. ಬಾದಾಮಿ ತಾಲೂಕು ಆಡಳಿತಕ್ಕೆ 3 ಆ್ಯಂಬುಲೆನ್ಸ್ ಹಸ್ತಾಂತರ ಮಾಡಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರು ಆ್ಯಂಬುಲೆನ್ಸ್ ಹಸ್ತಾಂತರಿಸಿದ್ದಾರೆ. ಬಾದಾಮಿ ತಹಸೀಲ್ದಾರ್ ಸುಹಾಸ ಇಂಗಳೆ, ಟಿಎಚ್​ಒ ಡಾ. ಎಂ.ಬಿ. ಪಾಟಿಲ್​ಗೆ ಸಿದ್ದರಾಮಯ್ಯ ಬೆಂಬಲಿಗರು ಆಂಬುಲೆನ್ಸ್ ಹಸ್ತಾಂತರಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಸಿದ್ದರಾಮಯ್ಯ ಪ್ರತಿನಿಧಿಸುತ್ತಾರೆ. ತಮ್ಮ ಕ್ಷೇತ್ರದ ಆರೋಗ್ಯ ಸಿಬ್ಬಂದಿಗೆ 100 ಎನ್-95 ಮಾಸ್ಕ್ ವಿತರಿಸಿದ್ದಾರೆ. ಜೊತೆಗೆ, 50 ಪಿಪಿಇ ಕಿಟ್​ಗಳನ್ನು ಕೂಡ ಸಿದ್ದರಾಮಯ್ಯ ಬೆಂಗಲಿಗರು ವಿತರಿಸಿದ್ದಾರೆ.

Loading...

ಬಾದಾಮಿ ತಾಲೂಕಿನಲ್ಲಿ ಪರಿಸ್ಥಿತಿ ಹೇಗಿದೆ?
ಎರಡನೇ ಅಲೆ ಕಾಣಿಸಿಕೊಂಡ ಮೇಲೆ ಸಿದ್ದರಾಮಯ್ಯ ಇನ್ನೂ ತಮ್ಮ ಕ್ಷೇತ್ರಕ್ಕೆ ಬಂದಿಲ್ಲ. ಕಳೆದ ವಾರ ಕ್ಷೇತ್ರದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಕ್ರಮ ತಡಗೆದುಕೊಂಡಿದ್ದ ಸಿದ್ದರಾಮಯ್ಯ, ಅಧಿಕಾರಿಗಳ ಜೊತೆ ಮೊಬೈಲ್​ನಲ್ಲಿ ಮಾತನಾಡಿ ನಿತ್ಯ 40 ಜಂಬೂ ಸಿಲಿಂಡರ್ ಪೂರೈಕೆಗೆ ಕ್ರಮ ಕೈಗೊಂಡಿದ್ದರು. ಬಳಿಕ, ಇಂದು ಮೂರು ಅಂಬುಲೆನ್ಸ್ ಒದಗಿಸಿದ್ದಾರೆ. ಆದರೆ, ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾವಾಗ ಬರ್ತಾರೆ ಎಂದು ಕ್ಷೇತ್ರದ ಜನರು ಕಾಯುತ್ತಿದ್ದಾರೆ.

ಟ್ವಿಟರ್​ನಲ್ಲಿ ಪ್ರೊಫೈಲ್​ ಪಿಕ್ಚರ್​ ಬದಲಿಸಿದ ಸಿದ್ದರಾಮಯ್ಯ
ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ವ್ಯಾಕ್ಸಿನ್ ನೀಡದ ವಿಚಾರಕ್ಕೆ ಸಿದ್ದರಾಮಯ್ಯ ಪ್ರೊಫೈಲ್ ಪಿಕ್ಚರ್​ ಬದಲಾವಣೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿಜೀ, ನಮ್ಮನೆ ಮಕ್ಕಳ ಲಸಿಕೆ ವಿದೇಶಕ್ಕೆ ರಫ್ತು ಮಾಡಿದ್ಯಾಕೆ? ಎಂದು ಪ್ರೊಫೈಲ್ ಪಿಕ್ಚರ್ ಬದಲಾಯಿಸಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ಬ್ರಿಟನ್​ನ​ಲ್ಲಿ ಕಂಡುಬರುವ ಕೊರೊನಾವೈರಸ್ ತಳಿಗಳ ವಿರುದ್ಧ ಕೊವಾಕ್ಸಿನ್ ಪರಿಣಾಮಕಾರಿ: ಭಾರತ್ ಬಯೋಟೆಕ್‌

ತಮಿಳುನಾಡಿನಲ್ಲಿ ಕೊರೊನಾ ಪ್ಯಾಕೇಜ್ ಘೋಷಣೆ; ಎಲ್ಲಾ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊವಿಡ್​ಗೆ ಉಚಿತ ಚಿಕಿತ್ಸೆ

Published On - 6:27 pm, Sun, 16 May 21

TV9 Web

TV9 Kannada

Read More
Loading...
Unable to load recommendations.
Follow Us