ಭಾರತ ಮತ್ತು ಬ್ರಿಟನ್​ನ​ಲ್ಲಿ ಕಂಡುಬರುವ ಕೊರೊನಾವೈರಸ್ ತಳಿಗಳ ವಿರುದ್ಧ ಕೊವಾಕ್ಸಿನ್ ಪರಿಣಾಮಕಾರಿ: ಭಾರತ್ ಬಯೋಟೆಕ್‌

Covaxin: ಭಾರತ್ ಬಯೋಟೆಕ್ ಟ್ವೀಟ್ ಮಾಡಿದ ಇನ್ಫೋಗ್ರಾಫಿಕ್ ಪ್ರಕಾರ ಈ ಲಸಿಕೆಯು ಕೊರೊನಾವೈರಸ್ ರೂಪಾಂತರಿಗೆ (ಡಿ 614 ಜಿ) ಹೋಲಿಸಿದರೆ ಬಿ .1.617 ರೂಪಾಂತರಿ ವಿರುದ್ಧ 1.95 ಅಂಶದಿಂದ ತಟಸ್ಥೀಕರಣದಲ್ಲಿ ಸಾಧಾರಣ ಇಳಿಕೆ ಕಂಡುಬಂದಿದೆ. ಆದಾಗ್ಯೂ, ಈ ಕಡಿತದ ಹೊರತಾಗಿಯೂ ಬಿ .1.617ನೊಂದಿಗೆ ಟೈಟ್ರೆ ಮಟ್ಟವು ರಕ್ಷಣಾತ್ಮಕ ಎಂದು ನಿರೀಕ್ಷಿಸಿದ ಮಟ್ಟಕ್ಕಿಂತಲೂ ಹೆಚ್ಚಿಗೆ ಆಗಿದೆ.

ಭಾರತ ಮತ್ತು ಬ್ರಿಟನ್​ನ​ಲ್ಲಿ ಕಂಡುಬರುವ ಕೊರೊನಾವೈರಸ್ ತಳಿಗಳ ವಿರುದ್ಧ ಕೊವಾಕ್ಸಿನ್ ಪರಿಣಾಮಕಾರಿ: ಭಾರತ್ ಬಯೋಟೆಕ್‌
ಕೊವ್ಯಾಕ್ಸಿನ್
Follow us
ರಶ್ಮಿ ಕಲ್ಲಕಟ್ಟ
|

Updated on:May 16, 2021 | 5:37 PM

ದೆಹಲಿ: ಕೋವಿಡ್ ಲಸಿಕೆ ಕೊವಾಕ್ಸಿನ್ ಭಾರತ ಮತ್ತು ಬ್ರಿಟನ್​ನಲ್ಲಿ ಮೊದಲು ಗುರುತಿಸಲ್ಪಟ್ಟ B.1.617 ಮತ್ತು B.1.1.7 ಸೇರಿದಂತೆ ಪರೀಕ್ಷಿಸಲ್ಪಟ್ಟ ಎಲ್ಲಾ ಪ್ರಮುಖ ಹೊಸ ರೂಪಾಂತರಿ ವೈರಸ್​ಗಳ ವಿರುದ್ಧ ಪರಿಣಾಮಕಾರಿ ಆಗಿದೆ ಎಂದು ಭಾರತ್ ಬಯೋಟೆಕ್‌ ಭಾನುವಾರ ಹೇಳಿದೆ. ಭಾರತ್ ಬಯೋಟೆಕ್ ಟ್ವೀಟ್ ಮಾಡಿದ ಇನ್ಫೋಗ್ರಾಫಿಕ್ ಪ್ರಕಾರ ಈ ಲಸಿಕೆಯು ಕೊರೊನಾವೈರಸ್ ರೂಪಾಂತರಿಗೆ (ಡಿ 614 ಜಿ) ಹೋಲಿಸಿದರೆ ಬಿ .1.617 ರೂಪಾಂತರಿ ವಿರುದ್ಧ 1.95 ಅಂಶದಿಂದ ತಟಸ್ಥೀಕರಣದಲ್ಲಿ ಸಾಧಾರಣ ಇಳಿಕೆ ಕಂಡುಬಂದಿದೆ. ಆದಾಗ್ಯೂ, ಈ ಕಡಿತದ ಹೊರತಾಗಿಯೂ ಬಿ .1.617ನೊಂದಿಗೆ ಟೈಟ್ರೆ ಮಟ್ಟವು ರಕ್ಷಣಾತ್ಮಕ ಎಂದು ನಿರೀಕ್ಷಿಸಿದ ಮಟ್ಟಕ್ಕಿಂತಲೂ ಹೆಚ್ಚಿಗೆ ಆಗಿದೆ.

B.1.1.7 (ಬ್ರಿಟನ್ ನಲ್ಲಿ ಮೊದಲು ಕಂಡುಬಂದಿದೆ) ಮತ್ತು ಲಸಿಕೆ ತಳಿ (D614G) ನಡುವಿನ ತಟಸ್ಥೀಕರಣದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಭಾರತ್ ಬಯೋಟೆಕ್ ಸೇರಿಸಲಾಗಿದೆ.

ಈ ಸಂಶೋಧನೆಗಳು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ – ಇಂಡಿಯಾ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದೊಂದಿಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಮೂರು ಕೋವಿಡ್ -19 ಲಸಿಕೆಗಳಲ್ಲಿ ಕೋವಾಕ್ಸಿನ್ ಕೂಡ ಒಂದು. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶಾದ್ಯಂತ ಈವರೆಗೆ ಒಟ್ಟು 18,22,20,164 ಡೋಸ್ ಕೊವಿಡ್ -19 ಲಸಿಕೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಮುಂದಿನ ಮೂರು ದಿನಗಳಲ್ಲಿ 51 ಲಕ್ಷ ಡೋಸ್ ಕೊವಿಡ್ ಲಸಿಕೆ ರಾಜ್ಯಗಳಿಗೆ ಸಿಗಲಿದೆ: ಕೇಂದ್ರ ಆರೋಗ್ಯ ಸಚಿವಾಲಯ

Published On - 5:34 pm, Sun, 16 May 21