ಐತಿಹಾಸಿಕ ಕೇದಾರನಾಥ ದೇವಸ್ಥಾನ ನಾಳೆ ತೆರೆಯಲಿದೆ; ಕೊವಿಡ್ ಸಂಕಷ್ಟ ಹಿನ್ನೆಲೆ ಭಕ್ತರಿಗೆ ಪ್ರವೇಶ ನಿಷೇಧ
ಬೆಟ್ಟದ ಕೆಳಗೆ ಇರುವ ಉಗ್ಗಿಮಠದಲ್ಲಿನ ಕೇದಾರನಾಥನ ಉತ್ಸವ ಮೂರ್ತಿ ಇಂದು ರಾತ್ರಿವೇಳೆಗೆ ಬೆಟ್ಟಕ್ಕೆ ತೆರಳಲಿದೆ. ಕೊವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಕೇವಲ ಪೂಜೆಗೆ ಮಾತ್ರ ಅವಕಾಶ ನೀಡಿದೆ. ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.
ದಾವಣಗೆರೆ: ಐತಿಹಾಸಿಕ ಕೇದಾರನಾಥ ದೇವಸ್ಥಾನ ನಾಳೆ ತೆರೆಯಲಿದೆ. ಈ ಹಿನ್ನೆಲೆಯಲ್ಲಿ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೆಲಿಕಾಪ್ಟರ್ ಮೂಲಕ ಬೆಟ್ಟಕ್ಕೆ ಆಗಮಿಸಿದ್ದಾರೆ. ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯಶ್ರೀಗೆ ಬೆಟ್ಟಕ್ಕೆ ತೆರಳಲು ಉತ್ತರಾಖಂಡ್ ಮುಖ್ಯಮಂತ್ರಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದಾರೆ. ಶ್ರೀಗಳ ಜತೆ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಕೂಡ ಆಗಮಿಸಿದ್ದಾರೆ.
ಐತಿಹಾಸಿಕ ಪುಣ್ಯಕ್ಷೇತ್ರ ಕೇದಾರನಾಥನ ದೇವಸ್ಥಾನ ನಾಳೆ ಬೆಳಿಗ್ಗೆ ಐದು ಗಂಟೆಗೆ ಓಪನ್ ಆಗಲಿದೆ. ಉತ್ತರಾಖಂಡ ರಾಜ್ಯದ ಬೆಟ್ಟದಲ್ಲಿ ಇರುವ ಪುಣ್ಯಕ್ಷೇತ್ರ ಕೇದಾರದ ಕೇದಾರನಾಥ ಮಂದಿರ ನಾಳೆ ತೆರೆಯಲಿದೆ. ಮಂದಿರ ಜಗದ್ಗುರುಗಳಾದ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಇಂದು ಹೆಲಿಕಾಪ್ಟರ್ ಮೂಲಕ ಬೆಟ್ಟಕ್ಕೆ ಪ್ರವೇಶಿಸಿದ್ದಾರೆ. ಸ್ವಾಮೀಜಿ ಜೊತೆ ದಾವಣಗೆರೆ ಜಿಲ್ಲೆಯ ಜಗಳೂರು ಕಣ್ವಕುಪ್ಪೆ ಮಠದ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಕೇದಾರನಾಥ ಪುಣ್ಯಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಬೆಟ್ಟದ ಕೆಳಗೆ ಇರುವ ಉಗ್ಗಿಮಠದಲ್ಲಿನ ಕೇದಾರನಾಥನ ಉತ್ಸವ ಮೂರ್ತಿ ಇಂದು ರಾತ್ರಿವೇಳೆಗೆ ಬೆಟ್ಟಕ್ಕೆ ತೆರಳಲಿದೆ. ಕೊವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಕೇವಲ ಪೂಜೆಗೆ ಮಾತ್ರ ಅವಕಾಶ ನೀಡಿದೆ. ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಕೇದಾರ ಪೀಠ ಕರ್ನಾಟಕದ ವೀರಶೈವ ಪಂಚಪೀಠಗಳಲ್ಲೊಂದಾಗಿದೆ. ಕೇದಾರನಾಥನ ಅರ್ಚಕರೆಲ್ಲ ಕರ್ನಾಟಕ ಮೂಲದ ವೀರಶೈವ ಪರಂಪರೆಯ ವೀರಮಹೇಶ್ವರ ಜಂಗಮ ಸಮುದಾಯದವರಾಗಿದ್ದಾರೆ.
ಇದನ್ನೂ ಓದಿ: Tonsure| ದೇವಸ್ಥಾನಗಳಲ್ಲಿ ಮುಡಿ ನೀಡೋದೇಕೆ? ಇದರ ಹಿಂದೆ ಅಡಗಿರೋ ಅರ್ಥವೇನು?
Chanakya Niti: ಈ ಮೂರು ಗುಣಗಳು ಇರುವ ಹೆಂಡತಿ ಇದ್ದರೆ ಮನೆಗೆ ಒಳ್ಳೆಯದು
Published On - 5:19 pm, Sun, 16 May 21