AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tonsure| ದೇವಸ್ಥಾನಗಳಲ್ಲಿ ಮುಡಿ ನೀಡೋದೇಕೆ? ಇದರ ಹಿಂದೆ ಅಡಗಿರೋ ಅರ್ಥವೇನು?

ಮುಡಿ ಕೊಡುವ ಸಂಪ್ರದಾಯ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಜನರು ತಮ್ಮ ಕಷ್ಟಗಳ ನಿವಾರಣೆಗಾಗಿ ದೇವರಲ್ಲಿ ಬೇಡಿಕೊಳ್ತಾರೆ. ತಮ್ಮ ಆಶಯಗಳನ್ನು ಭಗವಂತ ಈಡೇರಿಸಿದ ನಂತರ ದೇವರ ಸನ್ನಿಧಿಗೆ ಹೋಗಿ ತಮ್ಮ ಮುಡಿಯನ್ನು ಒಪ್ಪಿಸುವುದು ಒಂದು ಸಂಪ್ರದಾಯ ಹಾಗೂ ನಂಬಿಕೆಯಿಂದ ಕೂಡಿರುವ ಪದ್ಧತಿ.

Tonsure| ದೇವಸ್ಥಾನಗಳಲ್ಲಿ ಮುಡಿ ನೀಡೋದೇಕೆ? ಇದರ ಹಿಂದೆ ಅಡಗಿರೋ ಅರ್ಥವೇನು?
ಸಂಗ್ರಹ ಚಿತ್ರ
ಆಯೇಷಾ ಬಾನು
|

Updated on: Apr 28, 2021 | 6:36 AM

Share

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳು, ಸಂಪ್ರದಾಯಗಳು ಆಚರಣೆಗಳಿವೆ. ನಮ್ಮ ಧರ್ಮದ ಪ್ರತಿಯೊಂದು ಆಚರಣೆಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಕೆಲವೊಮ್ಮೆ ಅವುಗಳನ್ನು ಕೇಳಲು ಮತ್ತು ನೋಡಲು ಆಶ್ಚರ್ಯ ಆಗಬಹುದು. ಆದ್ರೆ ಅದರ ಹಿಂದೆ ಅನೇಕ ಹಿನ್ನೆಲೆಗಳು ಹಾಗೂ ಪುರಾಣ ಕತೆಗಳು ಬೆಸೆದು ಕೊಂಡಿರುತ್ತವೆ. ದೇವರ ಹೆಸರಿನಲ್ಲಿ ಮಾಡುವ ಕೆಲವು ಪದ್ಧತಿಗಳು ಮನುಷ್ಯನ ಜೀವನದಲ್ಲಿ ಬದಲಾವಣೆ ಹಾಗೂ ಶ್ರೇಯಸ್ಸನ್ನು ತಂದುಕೊಡುತ್ತವೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಅಂತಹ ಒಂದು ನಂಬಿಕೆಯಲ್ಲಿ ದೇವರಿಗೆ ಮುಡಿ ಕೊಡೋದೂ ಒಂದು.

ಮುಡಿ ಕೊಡುವ ಸಂಪ್ರದಾಯ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಜನರು ತಮ್ಮ ಕಷ್ಟಗಳ ನಿವಾರಣೆಗಾಗಿ ದೇವರಲ್ಲಿ ಬೇಡಿಕೊಳ್ತಾರೆ. ತಮ್ಮ ಆಶಯಗಳನ್ನು ಭಗವಂತ ಈಡೇರಿಸಿದ ನಂತರ ದೇವರ ಸನ್ನಿಧಿಗೆ ಹೋಗಿ ತಮ್ಮ ಮುಡಿಯನ್ನು ಒಪ್ಪಿಸುವುದು ಒಂದು ಸಂಪ್ರದಾಯ ಹಾಗೂ ನಂಬಿಕೆಯಿಂದ ಕೂಡಿರುವ ಪದ್ಧತಿ. ಜೀವನದ ಹೋರಾಟದಲ್ಲಿ ನಾವುಗಳು ಹೇಳುವ ಸುಳ್ಳು, ಮೋಸಗಳಿಗೆ ಕೊನೆ ಇರುವುದಿಲ್ಲ.

ದೇವರಿಗೆ ಮುಡಿ ನೀಡುವುದು (tonsure) ಎಂದರೆ ವ್ಯಕ್ತಿ ತನ್ನ ಅಹಂಕಾರವನ್ನು ತೊರೆಯೋದು.. ಮಾನವನು ಮಾಡುವ ಸರ್ವಕರ್ಮಗಳ ಪಾಪ ಫಲವು ಕೂದಲನ್ನು ಸೇರುತ್ತೆ. ಆದ್ದರಿಂದಲೇ ಪಾಪಗಳಿಗೆ ನಿಲಯವಾದ ಕೂದಲನ್ನು ಆ ಭಗವಂತನಿಗೆ ಸಮರ್ಪಿಸಿ, ಇಲ್ಲಿಯವರೆವಿಗೂ ಮಾಡಿರುವ ಪಾಪವನ್ನು ಬಿಡುತ್ತಿದ್ದೇನೆ. ಇನ್ನು ಮುಂದೆ ಒಳ್ಳೆಯವನಾಗಿ, ಧರ್ಮವಾಗಿ, ನ್ಯಾಯವಾಗಿ, ಇರುತ್ತೇನೆಂದು ಹೇಳುವುದೇ ತಲೆಗೂದಲನ್ನು ನೀಡುವುದರ ಪರಮಾರ್ಥ. ಈ ನಂಬಿಕೆಯಿಂದಲೇ ಇಂದಿಗೂ ಜನರು ತಮ್ಮ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ದೇವರ ದರ್ಶನಕ್ಕಾಗಿ ತೀರ್ಥಯಾತ್ರೆಯನ್ನು ಕೈಗೊಳ್ತಾರೆ. ಹಾಗೇ ದೇಗುಲಗಳಿಗೆ ತೆರಳಿದಾಗ ತಮ್ಮ ಮುಡಿಯನ್ನು ದೇವರಿಗೆ ಅರ್ಪಿಸುವುದರ ಮೂಲಕ ಪಾವನರಾಗ್ತಾರೆ.

ಭಗವಂತನಿಗೆ ಮುಡಿ ಅರ್ಪಿಸೋದನ್ನು ಅಹಂಕಾರವನ್ನು ತೊರೆಯುವ, ತ್ಯಾಗ ಮಾಡುವ ಒಂದು ಪರಿ ಎಂದು ಪರಿಗಣಿಸಲಾಗುತ್ತೆ. ಹೀಗಾಗಿ ಕೂದಲನ್ನು ತೆಗೆಸುವುದು ಅಥವಾ ದೇವರಿಗೆ ಮುಡಿ ನೀಡುವುದು ಎಂದರೆ ವ್ಯಕ್ತಿ ತನ್ನ ಅಹಂಕಾರವನ್ನು ತೊರೆಯೋದು. ಈ ಮೂಲಕ ದೇವರಿಗೆ ಶರಣಾಗುವುದು ಎನ್ನುವ ಸಂದೇಶ ಈ ಆಚರಣೆಯಲ್ಲಿ ಅಡಕವಾಗಿದೆ. ಈ ಕಾರಣದಿಂದಾಗೇ ದೇವರಿಗೆ ಮುಡಿ ನೀಡುವುದು ಒಂದು ಪವಿತ್ರವಾದ ಪದ್ಧತಿ ಅಥವಾ ನಂಬಿಕೆ ಎಂಬ ಪ್ರತೀತಿ ಇದೆ.

ಇದನ್ನೂ ಓದಿ:Vow to God| ಹರಕೆ ತೀರಿಸದೇ ಹೋದರೆ ದೇವರಿಗೆ ಕೋಪ ಬರುತ್ತಾ?