Vow to God| ಹರಕೆ ತೀರಿಸದೇ ಹೋದರೆ ದೇವರಿಗೆ ಕೋಪ ಬರುತ್ತಾ?

ಕಷ್ಟಕಾಲದಲ್ಲಿ ಹರಕೆ ಹೊತ್ತು ಅದು ನಿವಾರಣೆಯಾದ ನಂತರ ನಾವು ಹೊತ್ತ ಹರಕೆಯನ್ನು ತೀರಿಸಬೇಕು. ಒಂದು ವೇಳೆ ಭಗವಂತನ ಹರಕೆ ತೀರಿಸದೇ ಹೋದ್ರೆ ಭಗವಂತನ ಅವಕೃಪೆಗೆ ಪಾತ್ರರಾಗ್ತೀವಿ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

Vow to God| ಹರಕೆ ತೀರಿಸದೇ ಹೋದರೆ ದೇವರಿಗೆ ಕೋಪ ಬರುತ್ತಾ?
ಗಣೇಶ ವಿಗ್ರಹ (ಪ್ರಾತಿನಿಧಿಕ ಚಿತ್ರ)
Follow us
ಆಯೇಷಾ ಬಾನು
|

Updated on: Apr 27, 2021 | 6:56 AM

ಹಿಂದೂ ಸಂಪ್ರದಾಯದಲ್ಲಿ ನಾನಾ ಬಗೆಯಲ್ಲಿ ದೇವರನ್ನು ಪ್ರಾರ್ಥನೆ ಮಾಡೋ ಪರಿಪಾಠವಿದೆ. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ನಾವು ಮದುವೆ ತಡೆ ನಿವಾರಣೆಗೆ, ಉತ್ತಮ ಕೆಲಸ ಸಿಗಲು, ಆರೋಗ್ಯ ಉತ್ತಮವಾಗಿರಲು, ಹಣಕಾಸಿನ ಅಡಚಣೆ ನಿವಾರಣೆಯಾಗಲು, ಮನೆ ಕಟ್ಟುವುದಕ್ಕೆ ಅಡಚಣೆ ಇದ್ದಲ್ಲಿ ಭಗವಂತನ ಮೊರೆ ಹೋಗ್ತೀವಿ. ಕೆಲವೊಮ್ಮೆ ಕೇವಲ ಪ್ರಾರ್ಥನೆಯನ್ನಷ್ಟೇ ಮಾಡದೇ ದೇವರ ಬಳಿ ಹರಕೆಯನ್ನು ಕಟ್ಟಿಕೊಳ್ತೀವಿ. ಕಷ್ಟ ಬಂದಾಗ ಭಗವಂತನಿಗೆ ಮೊರೆ ಇಟ್ಟು, ಆ ಕಷ್ಟ ತೀರಿದ ನಂತರ ಭಗವಂತನನ್ನು ಮರೆತು ಹೋಗೋರೂ ಇರ್ತಾರೆ. ಅಂತಹವರಿಗೆ ಮತ್ತೆ ಕಷ್ಟಗಳು ಎದುರಾದಾಗ ಭಗವಂತನ ನೆನಪಾಗುತ್ತೆ. ಹೀಗೆ ಮತ್ತೆ ಮತ್ತೆ ಕಷ್ಟಗಳು ನಮ್ಮನ್ನು ಕಾಡಬಾರದು ಅಂದ್ರೆ ಅದಕ್ಕೊಂದು ಉಪಾಯವಿದೆ. ಅದೇನಂದ್ರೆ ಕಷ್ಟಕಾಲದಲ್ಲಿ ಹರಕೆ ಹೊತ್ತು ಅದು ನಿವಾರಣೆಯಾದ ನಂತರ ನಾವು ಹೊತ್ತ ಹರಕೆಯನ್ನು ತೀರಿಸಬೇಕು. ಒಂದು ವೇಳೆ ಭಗವಂತನ ಹರಕೆ ತೀರಿಸದೇ ಹೋದ್ರೆ ಭಗವಂತನ ಅವಕೃಪೆಗೆ ಪಾತ್ರರಾಗ್ತೀವಿ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹಾಗಾದ್ರೆ ಹರಕೆ (harake) ಹೊತ್ತು ನಂತರದ ದಿನಗಳಲ್ಲಿ ತೀರಿಸದೇ ಹೋದ್ರೆ ಏನಾಗುತ್ತೆ ಅನ್ನೋದನ್ನ ಇಲ್ಲಿ ಓದಿ.

ಹರಕೆ ತೀರಿಸದೇ ಹೋದ್ರೆ ಏನಾಗುತ್ತೆ? -ದಂಪತಿ ನಡುವಿನ ಸಾಮರಸ್ಯಕ್ಕೆ ಹರಕೆ ಹೊತ್ತಾಗ ಅದನ್ನು ತೀರಿಸದಿದ್ದಲ್ಲಿ ವಾಕ್ ದೋಷ ಉಂಟಾಗುತ್ತೆ. ಹರಕೆ ಮೂಲಕ ಪಡೆದ ಫಲ ನಾಶವಾಗುತ್ತೆ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ.

-ಕೆಲಸ ಕಾರ್ಯಗಳು ಆಗಲೀ ಎಂದು ಹರಕೆ ಹೊತ್ತು ಅದನ್ನು ತೀರಿಸದೇ ಹೋದ್ರೆ, ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಡಚಣೆಯಾಗುತ್ತೆ. ಇನ್ನು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಡಚಣೆ ಆಗುತ್ತಲೇ ಇರುತ್ತೆ.

-ಮನೆ ಕಟ್ಟೋ ವಿಚಾರಕ್ಕೆ ಹರಕೆ ಹೊತ್ತು ತೀರಿಸದೇ ಹೋದ್ರೆ, ಮನೆ ಕಟ್ಟೋಕೆ ಅಡಚಣೆ ಆಗುತ್ತಿರುತ್ತೆ. ಜೊತೆಗೆ ಮದುವೆ, ಸಂತಾನ ವಿಳಂಬವಾಗುತ್ತೆ. ಪದೇ ಪದೆ ಆರೋಗ್ಯ ಸಮಸ್ಯೆ ಕಾಡುತ್ತೆ.

-ಸರ್ಕಾರಿ ಕೆಲಸ ಸಿಗಲೆಂದು ಹರಕೆ ಹೊತ್ತು ಅದನ್ನು ತೀರಿಸದೇ ಹೋದ್ರೆ, ಸರ್ಕಾರಿ ಕೆಲಸ ಸಿಕ್ಕಿದ್ದರೂ ಅದರಲ್ಲಿ ನಾನಾ ಬಗೆಯ ತೊಂದರೆ ಅನುಭವಿಸಬೇಕಾಗುತ್ತೆ.

-ವ್ಯಾಪಾರ ಅಭಿವೃದ್ಧಿಗಾಗಿ ಹರಕೆ ಹೊತ್ತು ತೀರಿಸದೇ ಹೋದ್ರೆ, ವ್ಯಾಪಾರ-ವ್ಯವಹಾರ ಮಾಡುವವರಿಗೆ ಆದಾಯ ಏಕಾಏಕಿ ಕುಸಿದು ಹೋಗುತ್ತೆ.

-ಉದ್ಯೋಗ ದೊರೆತ ನಂತರ ಹರಕೆ ತೀರಿಸದೇ ಹೋದ್ರೆ ಕೆಲಸದ ಸ್ಥಳದಲ್ಲಿ ಮಾಲೀಕರ ಜೊತೆ ಜಗಳ ಆಗಬಹುದು. ಕೆಲಸಗಾರರ ಜೊತೆಯೂ ಜಗಳ ಆಗುತ್ತೆ. ಅನ್ಯೋನ್ಯತೆ ಇರುವುದಿಲ್ಲ.

-ಹಣಕಾಸಿನ ಸಮಸ್ಯೆ ನಿವಾರಣೆಗೆ ಹೊತ್ತ ಹರಕೆ ತೀರಿಸದೇ ಹೋದ್ರೆ ಸಾಲ ಜಾಸ್ತಿ ಆಗುತ್ತೆ.

ಹೀಗಾಗೇ ನಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಹರಕೆ ಹೊತ್ತುಕೊಂಡು ಅವು ಸಿದ್ಧಿಯಾದ ಮೇಲೆ ಕಟ್ಟಿಕೊಂಡ ಹರಕೆಯನ್ನು ಮರೆಯಬಾರದು. ಒಂದೊಮ್ಮೆ ಮರೆತರೆ ಆ ಭಗವಂತ ಯಾವುದಾದರೊಂದು ರೂಪದಲ್ಲಿ ತನ್ನ ಬಳಿಗೆ ಕರೆಯಿಸಿಕೊಳ್ಳುತ್ತಾನೆ ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ. ಹಿಂದೆ ಕಷ್ಟಗಳು ಬಂದಾಗ ಹರಕೆ ಹೊತ್ತಿರುವುದನ್ನು ನೆನಪಿಸ್ತಾನೆ. ಆದ್ದರಿಂದ ಯಾರೇ ಆಗಲಿ ತಮ್ಮ ಕಷ್ಟಕಾಲದಲ್ಲಿ ದೇವರಿಗೆ ಹರಕೆ ಹೊತ್ತಿಕೊಂಡಿದ್ದಲ್ಲಿ ನಿರ್ಲಕ್ಷಿಸದೇ, ಹರಕೆಗಳನ್ನು ತೀರಿಸಬೇಕು ಅಂತಾ ನಮ್ಮ ಹಿರಿಯರು ಹೇಳ್ತಾರೆ.

ಇದನ್ನೂ ಓದಿ: ದೇವರ ದರ್ಶನವಾದ ನಂತರ ದೇವಸ್ಥಾನದಲ್ಲಿ ಕುಳಿತುಕೊಳ್ಳೋದೇಕೆ?