ದೇವರ ದರ್ಶನವಾದ ನಂತರ ದೇವಸ್ಥಾನದಲ್ಲಿ ಕುಳಿತುಕೊಳ್ಳೋದೇಕೆ?

ಹಿಂದೂ ಸಂಪ್ರದಾಯದ ಪ್ರಕಾರ, ಭಗವಂತನ ಕೃಪೆಗಾಗಿ ನಾವೆಲ್ಲಾ ದೇವಾಲಯಕ್ಕೆ ಹೋಗುತ್ತೇವೆ. ದೇವಸ್ಥಾನಕ್ಕೆ ಹೋಗಿ, ನಮ್ಮ ಇಷ್ಟಾರ್ಥಗಳೆಲ್ಲಾ ಈಡೇರಿಸೆಂದು ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತೇವೆ. ತದನಂತರ ದೇವಾಲಯದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡು, ಭಗವಂತನನ್ನು ನಿರ್ಮಲ ಮನಸ್ಸಿನಿಂದ ಬೇಡುತ್ತೇವೆ. ಆದ್ರೆ ಈ ರೀತಿ ದೇವಾಲಯದಲ್ಲಿ ಕುಳಿತುಕೊಳ್ಳೋದೇಕೆ? ಏಕಾಂತದಲ್ಲಿ ಭಗವಂತನನ್ನು ಪ್ರಾರ್ಥಿಸೋದೇಕೆ? ಅನ್ನೋ ಪ್ರಶ್ನೆಗಳಿಗೆ ಆಧ್ಯಾತ್ಮದಲ್ಲಿ ಹಾಗೂ ವಿಜ್ಞಾನ ಲೋಕದಲ್ಲಿ ಉತ್ತರ ಸಿಗಲಿದೆ. ಅದೇನಂದ್ರೆ, ದೇವಸ್ಥಾನದಲ್ಲಿ ಭಗವಂತನ ದರ್ಶನವಾದ ತಕ್ಷಣವೇ ಕೆಲಸ ಆಯಿತೆಂದು ಹೊರಕ್ಕೆ ಬಂದು ಬಿಡಬಾರದು. ದೇಗುಲದಲ್ಲಿಯೇ ಸ್ವಲ್ಪ ಹೊತ್ತು ಏಕಾಂತದಲ್ಲಿ […]

ದೇವರ ದರ್ಶನವಾದ ನಂತರ ದೇವಸ್ಥಾನದಲ್ಲಿ ಕುಳಿತುಕೊಳ್ಳೋದೇಕೆ?
Follow us
ಸಾಧು ಶ್ರೀನಾಥ್​
|

Updated on:Feb 12, 2020 | 8:04 PM

ಹಿಂದೂ ಸಂಪ್ರದಾಯದ ಪ್ರಕಾರ, ಭಗವಂತನ ಕೃಪೆಗಾಗಿ ನಾವೆಲ್ಲಾ ದೇವಾಲಯಕ್ಕೆ ಹೋಗುತ್ತೇವೆ. ದೇವಸ್ಥಾನಕ್ಕೆ ಹೋಗಿ, ನಮ್ಮ ಇಷ್ಟಾರ್ಥಗಳೆಲ್ಲಾ ಈಡೇರಿಸೆಂದು ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತೇವೆ. ತದನಂತರ ದೇವಾಲಯದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡು, ಭಗವಂತನನ್ನು ನಿರ್ಮಲ ಮನಸ್ಸಿನಿಂದ ಬೇಡುತ್ತೇವೆ.

ಆದ್ರೆ ಈ ರೀತಿ ದೇವಾಲಯದಲ್ಲಿ ಕುಳಿತುಕೊಳ್ಳೋದೇಕೆ? ಏಕಾಂತದಲ್ಲಿ ಭಗವಂತನನ್ನು ಪ್ರಾರ್ಥಿಸೋದೇಕೆ? ಅನ್ನೋ ಪ್ರಶ್ನೆಗಳಿಗೆ ಆಧ್ಯಾತ್ಮದಲ್ಲಿ ಹಾಗೂ ವಿಜ್ಞಾನ ಲೋಕದಲ್ಲಿ ಉತ್ತರ ಸಿಗಲಿದೆ. ಅದೇನಂದ್ರೆ, ದೇವಸ್ಥಾನದಲ್ಲಿ ಭಗವಂತನ ದರ್ಶನವಾದ ತಕ್ಷಣವೇ ಕೆಲಸ ಆಯಿತೆಂದು ಹೊರಕ್ಕೆ ಬಂದು ಬಿಡಬಾರದು.

ದೇಗುಲದಲ್ಲಿಯೇ ಸ್ವಲ್ಪ ಹೊತ್ತು ಏಕಾಂತದಲ್ಲಿ ಕುಳಿತು ಭಗವಂತನನ್ನು ಧ್ಯಾನಿಸುವುದರಿಂದ ಶಾರೀರಕ, ಮಾನಸಿಕ ಚಂಚಲತೆಯನ್ನು ಹಿಡಿತದಲ್ಲಿಡಬಹುದು ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದ್ರಿಂದ ಶಾರೀರಿಕ ಹಾಗೂ ಮಾನಸಿಕ ಚಂಚಲತೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವುದಷ್ಟೇ ಅಲ್ಲದೇ ದೇವರ ಅನುಗ್ರಹವನ್ನೂ ಪಡೆಯಬಹುದು ಎನ್ನಲಾಗುತ್ತೆ. ಇದಿಷ್ಟೇ ಅಲ್ಲದೇ, ಧರ್ಮಶಾಸ್ತ್ರದ ಪ್ರಕಾರ, ದೇವರ ದರ್ಶನವಾದ ನಂತರ ದೇವಸ್ಥಾನದಲ್ಲಿ ಕುಳಿತುಕೊಳ್ಳುವುದರಿಂದ ಅನೇಕ ಲಾಭಗಳಿವೆ. ಆ ಲಾಭಗಳೇನು ಅಂದ್ರೆ..

ದೇವಾಲಯದಲ್ಲಿ ಕುಳಿತುಕೊಳ್ಳುವುದರಿಂದ ಸಿಗೋ ಆಧ್ಯಾತ್ಮಿಕ ಲಾಭಗಳು: 1.ದೇವಸ್ಥಾನದಲ್ಲಿ ಧನಾತ್ಮಕ ಶಕ್ತಿ ಅಧಿಕವಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ. 2.ದೇವಸ್ಥಾನದಲ್ಲಿ ಪ್ರಶಾಂತತೆ ವಾತಾವರಣ ಇರೋದ್ರಿಂದ ಮನಸ್ಸು ಕೆಟ್ಟದನ್ನು ಯೋಚಿಸುವುದಿಲ್ಲ. 3.ಇದ್ರಿಂದ ದೇವರ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತೆ. 4.ದೇವಸ್ಥಾನದಲ್ಲಿ ಕುಳಿತುಕೊಂಡು ದೇವರ ಸ್ಮರಣೆ ಮಾಡುವುದು ಧ್ಯಾನಕ್ಕೆ ಸಮ ಎನ್ನಲಾಗುತ್ತೆ. 5.ಸ್ವಲ್ಪ ಸಮಯ ಮೌನವಾಗಿ ಕುಳಿತು ದೇವರ ಸ್ಮರಣೆ ಮಾಡೋದ್ರಿಂದ ಸ್ಮರಣಾ ಶಕ್ತಿ ಹೆಚ್ಚಾಗುತ್ತೆ.

ದೇವಾಲಯದಲ್ಲಿ ಕುಳಿತುಕೊಳ್ಳುವುದರ ಹಿಂದಿರೋ ವೈಜ್ಞಾನಿಕ ಕಾರಣ: 1.ಮೂಲ ವಿಗ್ರಹವನ್ನು ಸ್ಥಾಪನೆ ಮಾಡುವಾಗ, ಅದರ ಕೆಳಗೆ ತಾಮ್ರಪತ್ರಗಳನ್ನು ಇಡಲಾಗುತ್ತೆ. ಆ ತಾಮ್ರ ಪತ್ರಗಳಿಂದ ಉಂಟಾಗುವ ಆಯಸ್ಕಾಂತೀಯ ತರಗಾಂತರಗಳನ್ನು ನಮ್ಮ ದೇಹ ಗ್ರಹಿಸುತ್ತೆ. ಇದ್ರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ, ಸಮಾಧಾನ ಸಿಗುತ್ತೆ.

ಹೀಗೆ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಒಂದೊಂದು ಆಚರಣೆಯ ಹಿಂದೆಯೂ ಒಂದೊಂದು ವೈಜ್ಞಾನಿಕ ಕಾರಣವಿರುತ್ತೆ. ಅದನ್ನು ತಿಳಿದುಕೊಂಡು ನಡೆದರೆ ಅದರ ಉಪಯೋಗಗಳನ್ನು ಸಂಪೂರ್ಣವಾಗಿ ಪಡೆಯಬಹುದು.

Published On - 7:53 pm, Wed, 12 February 20