ಭಗವಂತನಿಗೆ ನೈವೇದ್ಯ ತಯಾರಿಸಲು ಪಾಲಿಸಬೇಕಾದ ನಿಯಮಗಳೇನು? ಈ ನಿಯಮಗಳನ್ನು ಪಾಲಿಸಿದ್ರೆ ದೈವ ಒಲಿತಾನಂತೆ
ಭಗವಂತನಿಗೆ ನಿವೇದಿಸುವ ನೈವೇದ್ಯವನ್ನು ನಿಯಮಬದ್ಧವಾಗಿ ತಯಾರಿಸಬೇಕು. ಇಲ್ಲದಿದ್ದರೆ ನೈವೇದ್ಯ ಭಗವಂತನಿಗೆ ಸೇರುವುದಿಲ್ಲ. ಅದು ರಾಕ್ಷಸರ ಪಾಲಾಗುತ್ತೆ ಅಂತಾ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಭಗವಂತನ ಪೂಜಾ ಸಮಯದಲ್ಲಿ ಆತನಿಗೆ ನೈವೇದ್ಯವನ್ನು ಅರ್ಪಿಸುತ್ತೇವೆ. ಭಗವಂತನ ಮುಂದೆ ಇಟ್ಟ ನೈವೇದ್ಯದ ಮೇಲೆ ತುಳಸಿ ದಳವನ್ನು ಹಾಕುತ್ತೇವೆ. ಅತ್ಯಂತ ನಿಯಮ ಬದ್ಧವಾಗಿ, ಶುಚಿಯಾಗಿ ಭಗವಂತನಿಗೆ ನೈವೇದ್ಯವನ್ನು ತಯಾರಿಸಬೇಕು. ಪುರಾಣಗಳ ಪ್ರಕಾರ, ನೈವೇದ್ಯ ತಯಾರಿಸಲು ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತೆ. ಆ ನಿಯಮಗಳೇನು ಅನ್ನೋದನ್ನು ಇಲ್ಲಿ ತಿಳಿಯಿರಿ.
ನೈವೇದ್ಯ ತಯಾರಿಸಲು ಪಾಲಿಸಬೇಕಾದ ನಿಯಮಗಳು 1.ನೈವೇದ್ಯ ತಯಾರಿಸೋಕೂ ಮೊದಲು ಶುಚಿರ್ಭೂತರಾಗಬೇಕು. 2.ನೈವೇದ್ಯ ತಯಾರಿಸಲು ಸ್ವಚ್ಛವಾದ ವಸ್ತುಗಳನ್ನೇ ಉಪಯೋಗಿಸಬೇಕು. 3.ನೈವೇದ್ಯವನ್ನು ಶುಚಿಯಾದ ಸ್ಥಳದಲ್ಲೇ ತಯಾರಿಸಬೇಕು. 4.ನೈವೇದ್ಯದ ಮೇಲೆ ತುಳಸಿ ಎಲೆಯನ್ನು ಮತ್ತು ದೇವರ ತೀರ್ಥವನ್ನು ಸಿಂಪಡಿಸಬೇಕು. 5.ಆಯಾ ದೇವರುಗಳಿಗೆ ಪ್ರಿಯವಾದ ನೈವೇದ್ಯವನ್ನೇ ತಯಾರಿಸಬೇಕು.
ಯಾವ ದೇವರಿಗೆ, ಯಾವ ನೈವೇದ್ಯ ತಯಾರಿಸಬೇಕು? 1.ಮಹಾವಿಷ್ಣುವಿಗೆ ಪಾಯಸವನ್ನು ನಿವೇದಿಸಬೇಕು. 2.ಪರಮೇಶ್ವರನಿಗೆ ಪಂಚಾಮೃತವನ್ನು ಅರ್ಪಿಸಬೇಕು. 3.ವಿದ್ಯಾದೇವಿ ಸರಸ್ವತಿಗೆ ಹಾಲು, ಪಂಚಾಮೃತ, ತುಪ್ಪ, ಬೆಣ್ಣೆ ನಿವೇದಿಸಬೇಕು. 4.ಧನಲಕ್ಷ್ಮೀಗೆ ಮಿಠಾಯಿ, ಕೇಸರಿಬಾತ್ ಅರ್ಪಿಸಬೇಕು. 5.ದುರ್ಗಾದೇವಿಗೆ ಪಾಯಸ, ಮಿಠಾಯಿ, ಬಾಳೆಹಣ್ಣು, ತೆಂಗಿನಕಾಯಿಯನ್ನು ನಿವೇದಿಸಬೇಕು. 6.ಪ್ರಥಮ ಪೂಜ್ಯ ಗಣೇಶನಿಗೆ ಮೋದಕವನ್ನು ಅರ್ಪಿಸಬೇಕು. 7.ಪಿತೃವಾಕ್ಯ ಪರಿಪಾಲಕನಾದ ಶ್ರೀರಾಮನಿಗೆ ಕೇಸರಿಬಾತ್, ಪಾಯಸವನ್ನು ಸಮರ್ಪಿಸಬೇಕು. 8.ಶ್ರೀಕೃಷ್ಣನಿಗೆ ಸಕ್ಕರೆ, ಬೆಣ್ಣೆಯನ್ನು ಅರ್ಪಿಸಬೇಕು.
ನೈವೇದ್ಯಕ್ಕೆ ತುಳಸಿ ಎಲೆಗಳನ್ನು ಹಾಕೋದೇಕೆ? 1.ನೇವೇದ್ಯದಲ್ಲಿರುವ ಸೂಕ್ಷ್ಮಲಹರಿಗಳನ್ನು ತುಳಸಿ ಎಲೆ ಗ್ರಹಿಸಿಕೊಳ್ಳುತ್ತೆ. 2.ತುಳಸಿ ಎಲೆಯ ಮಾಧ್ಯಮದಿಂದ, ಭಗವಂತನಿಗೆ ನೈವೇದ್ಯ ತಲುಪಿದ್ರೆ ಆತ ಸಂತುಷ್ಟನಾಗ್ತಾನೆ. 3.ತುಳಸಿ ಎಲೆಯನ್ನು ನೈವೇದ್ಯದ ಮೇಲಿಡುವುದರಿಂದ, ರಜ-ತಮ ಕಣಗಳ ಆವರಣ ಕಡಿಮೆಯಾಗುತ್ತೆ. 4.ನೈವೇದ್ಯದ ಸುತ್ತಲಿನ ವಾಯುಮಂಡಲ ಶುದ್ಧವಾಗಿ, ದುಷ್ಟ ಶಕ್ತಿಗಳ ಕಾಟ ಕಡಿಮೆಯಾಗುತ್ತೆ. 5.ತುಳಸಿ ಎಲೆ ಭಗವಂತನಿಂದ ಬರುವ ಚೈತನ್ಯವನ್ನೆಲ್ಲಾ ನೈವೇದ್ಯದ ಮೇಲೆ ಹರಡುತ್ತದೆ.
ಹೀಗೆ ಭಗವಂತನಿಗೆ ನಿವೇದಿಸುವ ನೈವೇದ್ಯವನ್ನು ನಿಯಮಬದ್ಧವಾಗಿ ತಯಾರಿಸಬೇಕು. ಇಲ್ಲದಿದ್ದರೆ ನೈವೇದ್ಯ ಭಗವಂತನಿಗೆ ಸೇರುವುದಿಲ್ಲ. ಅದು ರಾಕ್ಷಸರ ಪಾಲಾಗುತ್ತೆ ಅಂತಾ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ಭಗವಂತನಿಗೆ ನಿವೇದಿಸುವ ನೈವೇದ್ಯದಲ್ಲಿ ಹುಳುಗಳು ಇದ್ದರೆ ಅಪಶಕುನಗಳಾಗೋ ಸಾಧ್ಯತೆ ಇದೆ ಅನ್ನೋದನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗೇ ದೇವರಿಗೆ ನೈವೇದ್ಯ ತಯಾರಿಸುವಾಗ ಅತ್ಯಂತ ಜಾಗರೂಕತೆಯಿಂದ ಗಮನಿಸುತ್ತಿರಬೇಕು. ಒಂದು ವೇಳೆ ನೈವೇದ್ಯದಲ್ಲಿ ಹುಳಗಳು ಕಾಣಿಸಿಕೊಂಡ್ರೆ, ತಕ್ಷಣವೇ ಅದನ್ನು ನೀರಿನಲ್ಲಾಗಲಿ, ಅಗ್ನಿಯಲ್ಲಾಗಲಿ ಹಾಕಬೇಕು. ನಂತರ ಮತ್ತೆ ಶುಚಿಯಾಗಿ, ಜಾಗರೂತೆಯಿಂದ ನೈವೇದ್ಯವನ್ನ ತಯಾರಿಸಿ ಭಗವಂತನಿಗೆ ನಿವೇದಿಸಬೇಕು. ಹೀಗೆ ಮಾಡೋದ್ರಿಂದ ಭಗವಂತ ಸಂತುಷ್ಟನಾಗಿ, ನಮ್ಮೆಲ್ಲಾ ಮನೋಕಾಮನೆಗಳನ್ನು ಈಡೇರಿಸ್ತಾನೆ ಎನ್ನಲಾಗುತ್ತೆ.
ಇದನ್ನೂ ಓದಿ: ಹೋಮ, ಹವನಗಳಲ್ಲಿ ದರ್ಬೆಯನ್ನು ಬಳಸೋದೇಕೆ? ಪೂಜೆಯಲ್ಲಿ ದರ್ಬೆ ಉಂಗುರ ಧರಿಸೋದೇಕೆ?