ಎರಡನೇ ಬ್ಯಾಚ್ನಲ್ಲಿ ಹೈದರಾಬಾದ್ ತಲುಪಿದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ; ವ್ಯಾಕ್ಸಿನ್ ಅಭಿಯಾನಕ್ಕೆ ಮತ್ತಷ್ಟು ಬಲ
ನಮ್ಮ ದೇಶದಲ್ಲಿ ಅಭಿವೃದ್ಧಿಪಡಿಸಲಾದ ಲಸಿಕೆ ಭಾರತದಲ್ಲಿ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ರಾಯಭಾರಿ ನಿಕೋಲಾಯ್ ಕುಡಶೇವ್ ಹೇಳಿದ್ದಾರೆ.
ಹೈದರಾಬಾದ್: ಸ್ಪುಟ್ನಿಕ್ ವಿ ಲಸಿಕೆ ಇಂದು ಎರಡನೇ ಹಂತದಲ್ಲಿ ರಷ್ಯಾದಿಂದ ಭಾರತಕ್ಕೆ ಬಂದು ತಲುಪಿದೆ. ಭಾನುವಾರ ಹೈದರಾಬಾದ್ಗೆ ಬಂದಿಳಿದಿದೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ರಷ್ಯಾದ ಭಾರತದ ರಾಯಭಾರಿ ನಿಕೋಲಾಯ್ ಕುಡಶೇವ್, ರಷ್ಯಾ ಮತ್ತು ಭಾರತ ಜೊತೆಯಾಗಿ ಕೊವಿಡ್ 19 ಸೋಂಕಿನ ಹೋರಾಡುತ್ತಿರುವುದು ಖುಷಿಯ ವಿಚಾರ. ಇದು ನಮ್ಮ ದ್ವಿಪಕ್ಷೀಯ ಸಂಬಂಧ ಗಟ್ಟಿಯಾಗಿ ಇದೆ ಎಂಬುದಕ್ಕೆ ಸಾಕ್ಷಿ. ಈ ಜಂಟಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ದೊಡ್ಡಮಟ್ಟದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, ಸದ್ಯ ನೀಡುತ್ತಿರುವ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳೆರಡೂ ಭಾರತದಲ್ಲಿ ತಯಾರಾದವುಗಳೇ ಆಗಿವೆ. ಇದೀಗ ಇದೇ ಮೊದಲಬಾರಿಗೆ ವಿದೇಶಿ ಲಸಿಕೆ ಸ್ಪುಟ್ನಿಕ್ ವಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಭಾರತಕ್ಕೆ ಲಸಿಕೆ ತಲುಪಿದೆ. ಈ ಮಧ್ಯೆ ಅರವಿಂದ್ ಕೇಜ್ರಿವಾಲ್ ತಮಗೆ 16 ಕೋಟಿ ಸ್ಪುಟ್ನಿಕ್ ವಿ ಲಸಿಕೆ ಬೇಕು ಎಂದು ಡಾ. ರೆಡ್ಡಿ ಲ್ಯಾಬೋರೇಟರಿಗೆ ಪತ್ರ ಬರೆದಿದ್ದಾರೆ.
ಭಾರತಕ್ಕೆ ಮೊದಲ ಬ್ಯಾಚ್ನ ಸ್ಪುಟ್ನಿಕ್ ವಿ ಲಸಿಕೆ ಬಂದಿಳಿದಿದ್ದು ಮೇ 1ರಂದು. ಇದೀಗ ಎರಡನೇ ಹಂತದಲ್ಲಿ ಬಂದಿಳಿದಿದೆ. ನಮ್ಮ ದೇಶದಲ್ಲಿ ಅಭಿವೃದ್ಧಿಪಡಿಸಲಾದ ಲಸಿಕೆ ಭಾರತದಲ್ಲಿ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ರಾಯಭಾರಿ ನಿಕೋಲಾಯ್ ಕುಡಶೇವ್ ಹೇಳಿದ್ದಾರೆ.
ಇದನ್ನೂ ಓದಿ: ಇನ್ನೆಷ್ಟು ದಿನ ಪ್ರಸಾರ ಆಗಲಿದೆ ‘ಜೊತೆ ಜೊತೆಯಲಿ‘ ಹೊಸ ಸಂಚಿಕೆಗಳು? ಇಲ್ಲಿದೆ ಉತ್ತರ
ತೌಕ್ತೆ ಚಂಡಮಾರುತದಿಂದ ಪೀಡಿತ ರಾಜ್ಯಗಳಿಗೆ ಸಹಾಯ ಮಾಡಿ: ಬಿಜೆಪಿ ಕಾರ್ಯಕರ್ತರಿಗೆ ಜೆ.ಪಿ.ನಡ್ಡಾ ಕರೆ