ತೌಕ್ತೆ ಚಂಡಮಾರುತದಿಂದ ಪೀಡಿತ ರಾಜ್ಯಗಳಿಗೆ ಸಹಾಯ ಮಾಡಿ: ಬಿಜೆಪಿ ಕಾರ್ಯಕರ್ತರಿಗೆ ಜೆ.ಪಿ.ನಡ್ಡಾ ಕರೆ
Cyclone Tauktae: ಈ ಬಿಕ್ಕಟ್ಟನ್ನು ಎದುರಿಸಲು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ನಾವು ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು. ಬಿಜೆಪಿಗೆ ಸರ್ಕಾರವಿರುವ ರಾಜ್ಯಗಳಲ್ಲಿ ನಾವು ಸರ್ಕಾರದೊಂದಿಗೆಕೆಲಸ ಮಾಡಬೇಕು. ಅದೇ ವೇಳೆ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇರುವೆಡೆ ಸ್ಥಳೀಯ ಆಡಳಿತದೊಂದಿಗೆ ಸಕಾರಾತ್ಮಕ ಟಿಪ್ಪಣಿಯೊಂದಿಗೆ ಸಮನ್ವಯ ಸಾಧಿಸಬೇಕು.
ದೆಹಲಿ: ತೌಕ್ತೆ ಚಂಡಮಾರುತದ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಪಕ್ಷದ ಶಾಸಕರು ಮತ್ತು ಗೋವಾ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ದಮನ್ ಮತ್ತು ದಿಯು ಮತ್ತು ಗುಜರಾತ್‌ನ ರಾಜ್ಯ ಪದಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಈ ಬಿಕ್ಕಟ್ಟನ್ನು ಎದುರಿಸಲು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ನಾವು ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು. ಬಿಜೆಪಿಗೆ ಸರ್ಕಾರವಿರುವ ರಾಜ್ಯಗಳಲ್ಲಿ ನಾವು ಸರ್ಕಾರದೊಂದಿಗೆ ಕೆಲಸ ಮಾಡಬೇಕು. ಅದೇ ವೇಳೆ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇರುವೆಡೆ ಸ್ಥಳೀಯ ಆಡಳಿತದೊಂದಿಗೆ ಸಕಾರಾತ್ಮಕ ಟಿಪ್ಪಣಿಯೊಂದಿಗೆ ಸಮನ್ವಯ ಸಾಧಿಸಬೇಕು ಎಂದು ನಾವು ಖಚಿತಪಡಿಸಿಕೊಳ್ಳಬೇಕು ಎಂದು ನಡ್ಡಾ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. ಪಕ್ಷದ ರಾಜ್ಯಮಟ್ಟದ ತಂಡಗಳು ಸಾರ್ವಜನಿಕರ ಮಧ್ಯೆ ಇಳಿಯಬೇಕು ಎಂದು ಹೇಳಿದ ಅವರು ಚಂಡಮಾರುತದ ಹಿನ್ನೆಲೆಯಲ್ಲಿ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ನಿರ್ವಹಿಸುವತ್ತ ಕೆಲಸ ಮಾಡಬೇಕು ಎಂದಿದ್ದಾರೆ.
ನಡ್ಡಾ ಬಿಜೆಪಿಯ ಸಂಸತ್ತಿನ ಸದಸ್ಯರು ಮತ್ತು ಶಾಸಕರನ್ನು ಸಂತ್ರಸ್ತ ರಾಜ್ಯಗಳ ಪಂಚಾಯತ್ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುವಂತೆ ಕೇಳಿಕೊಂಡರು. ಶಾಸಕರು ಮತ್ತು ಸಂಸದರು ಪಂಚಾಯತ್ ಜಿಲ್ಲಾ ಪರಿಷತ್ ಮತ್ತು ಬ್ಲಾಕ್ ಅಭಿವೃದ್ಧಿ ಮಂಡಳಿಗಳ ಪ್ರತಿನಿಧಿಗಳೊಂದಿಗೆ ನೇರಾ ನೇರ ಸಂವಹನ ನಡೆಸಬೇಕು ಎಂದಿದ್ದಾರೆ.
ವೈದ್ಯಕೀಯ ಸಿಬ್ಬಂದಿಯೊಂದಿಗಿನ ಸೌಹಾರ್ದತೆ ಗಟ್ಟಿಯಾಗಿರಬೇಕು, ಇದರಿಂದಾಗಿ ನಮ್ಮ ತಂಡಗಳು ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಔಷಧಿ ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ನಡ್ಡಾ ಹೇಳಿದರು. ಪಕ್ಷದ ಕಾರ್ಯಕರ್ತರು ಸಹ ಮೀನುಗಾರರತ್ತ ಗಮನಹರಿಸಬೇಕು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.
Cyclone Tauktae is heading towards coastal regions of Goa, Maharashtra, Kerala, Karnataka, Daman & Diu & Gujarat. Discussed the precaution & relief work with BJP MPs, MLAs & state office bearers of affected areas. We will provide all possible help following COVID protocols. pic.twitter.com/1o3mV8cHx6
— Jagat Prakash Nadda (@JPNadda) May 16, 2021
ಭಾನುವಾರ ಕೊವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದಕ್ಕಾಗಿ ರಾಜ್ಯಕ್ಕೆ ಸಹಾಯ ಮಾಡಲು ‘ಸೇವಾ ಹೈ ಸಂಘಟನ್ ‘ ಕಾರ್ಯಕ್ರಮದಡಿ ನಡ್ಡಾ 17 ಮೊಬೈಲ್ ವೈದ್ಯಕೀಯ ಘಟಕಗಳನ್ನು ಮತ್ತು ಹಿಮಾಚಲ ಪ್ರದೇಶಕ್ಕೆ ವೈದ್ಯಕೀಯ ಸಹಾಯಕ್ಕೆ ಚಾಲನೆ ನೀಡಿದ್ದಾರೆ.
#SevaHiSangathan के मंत्र को लेकर भाजपा के लाखों कार्यकर्ता जरुरतमंदों को बेड दिलाने, ऑक्सीजन व अन्य जरूरी व्यवस्था कराने के कार्य मे जुटे हैं।
इसी क्रम मे आज हिमाचल प्रदेश के सभी 12 ज़िलों के लिए कोरोना महामारी मे राहत सामग्री लेकर जाने वाली मोबाइल मेडिकल यूनिट्स को रवाना किया। pic.twitter.com/neXzWOkZ7H
— Jagat Prakash Nadda (@JPNadda) May 16, 2021
ಕೊವಿಡ್‌ನ ಎರಡನೇ ಅಲೆಯ ಮಧ್ಯೆ, ‘ಸೇವಾ ಹೈ ಸಂಘಟನ್’ನ ಎರಡನೇ ಭಾಗ ಪ್ರಾರಂಭವಾಗಿದೆ. ನಮ್ಮ ಅನೇಕ ಕಾರ್ಮಿಕರು ಆಸ್ಪತ್ರೆಗಳ ಜೊತೆಗೆ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ ಮತ್ತು ಅದರೊಂದಿಗೆ, ಪರೀಕ್ಷೆಯನ್ನು ಆಧರಿಸಿದ ನಾವು ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಕಷ್ಟದ ಈ ಹೊತ್ತಿನಲ್ಲಿ ಮಹಿಳಾ ಮಂಡಳಿ ಮತ್ತು ಸ್ವಸಹಾಯ ಗುಂಪುಗಳು ಪಿಪಿಇ ಕಿಟ್, ಮಾಸ್ಕ್ ತಯಾರಿಸಿ ನೆರವಾದವು ಎಂದಿದ್ದಾರೆ ನಡ್ಡಾ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.
ಇದನ್ನೂ ಓದಿ: Cyclone Tauktae Photos: ತೌಕ್ತೆ ಚಂಡಮಾರುತದ ಪ್ರತಾಪ; ಇಲ್ಲಿದೆ ಚಂಡಮಾರುತದ ಇಂದಿನ ಚಿತ್ರಣ
Published On - 3:51 pm, Sun, 16 May 21