AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಮೇ 24ರವರೆಗೆ ಮುಂದುವರಿಯಲಿದೆ ಲಾಕ್‌ಡೌನ್, ಮೆಟ್ರೊ ಸೇವೆಗಳು ಬಂದ್: ಅರವಿಂದ ಕೇಜ್ರಿವಾಲ್

Delhi Lockdown: ಅಗತ್ಯ ಸೇವೆಗಳಲ್ಲಿ ತೊಡಗಿರುವವರಿಗೆ ವಿನಾಯಿತಿ ಮತ್ತು ಅಗತ್ಯ ವಸ್ತುಗಳ ಪೂರೈಕೆ ಸರಪಳಿಯೊಂದಿಗೆ ಜನ ಸಂಚಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ಲಾಕ್‌ಡೌನ್‌ನಲ್ಲಿ ನಿಷೇಧಿಸಲಾಗಿದೆ. ಮೆಟ್ರೋ ಸೇವೆಗಳು ಸ್ಥಗಿತವಾಗಿಯೇ ಇರುತ್ತವೆ ಮತ್ತು ಅಗತ್ಯ ಸೇವಾ ಪೂರೈಕೆದಾರರಿಗೆ ಮಾತ್ರ ಸಾರ್ವಜನಿಕ ಸಾರಿಗೆ ಇರಲಿದೆ.

ದೆಹಲಿಯಲ್ಲಿ ಮೇ 24ರವರೆಗೆ ಮುಂದುವರಿಯಲಿದೆ ಲಾಕ್‌ಡೌನ್, ಮೆಟ್ರೊ ಸೇವೆಗಳು ಬಂದ್: ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್​
ರಶ್ಮಿ ಕಲ್ಲಕಟ್ಟ
|

Updated on: May 16, 2021 | 1:23 PM

Share

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಕೊವಿಡ್ -19 ಲಾಕ್‌ಡೌನ್ ಅನ್ನು ಮೇ 24 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್ ನಾವು ಇನ್ನೊಂದು ವಾರ ಲಾಕ್‌ಡೌನ್ ಮುಂದುವರಿಸಲಿದ್ದೇವೆ. ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದಿದ್ದಾರೆ. ಕೊವಿಡ್ -19 ಅನ್ನು ಎದುರಿಸುವಲ್ಲಿ ಇಲ್ಲಿಯವರೆಗೆ ಗಳಿಸಿದ ಪ್ರಯೋಜನವನ್ನು ಈಗ ಸಡಿಲಿಕೆ ನೀಡಿ ಕಳೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ಲಾಕ್‌ಡೌನ್ ವಿಸ್ತರಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರಾಜ್ಯದಲ್ಲಿ ಚೇತರಿಕೆ ದರ ಹೆಚ್ಚುತ್ತಿದೆ ಮತ್ತು ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಸುಮಾರು 6,500 ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು ಪಾಸಿಟಿವಿಟಿ ದರವು ಶೇ 10 ಕ್ಕೆ ಇಳಿದಿದೆ. ಹಿಂದಿನ ದಿನ ಇದು ಶೇ 11 ರಿಂದ ಕಡಿಮೆಯಾಗಿದೆ. ನಾವು ಈಗ ಸಡಿಲಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ದೆಹಲಿ ಮೆಟ್ರೋ ಸೇವೆ ಪುನರಾರಂಭವಾಗುತ್ತದೆಯೇ ಎಂದು ಕೇಳಿದಾಗ, ಈ ವಾರದಲ್ಲಿರುವಂತೆ ನಿರ್ಬಂಧಗಳು ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಅಗತ್ಯ ಸೇವೆಗಳಲ್ಲಿ ತೊಡಗಿರುವವರಿಗೆ ವಿನಾಯಿತಿ ಮತ್ತು ಅಗತ್ಯ ವಸ್ತುಗಳ ಪೂರೈಕೆ ಸರಪಳಿಯೊಂದಿಗೆ ಜನ ಸಂಚಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ಲಾಕ್‌ಡೌನ್‌ನಲ್ಲಿ ನಿಷೇಧಿಸಲಾಗಿದೆ. ಮೆಟ್ರೋ ಸೇವೆಗಳು ಸ್ಥಗಿತವಾಗಿಯೇ ಇರುತ್ತವೆ ಮತ್ತು ಅಗತ್ಯ ಸೇವಾ ಪೂರೈಕೆದಾರರಿಗೆ ಮಾತ್ರ ಸಾರ್ವಜನಿಕ ಸಾರಿಗೆ ಇರಲಿದೆ. ಏಪ್ರಿಲ್ 19 ರಂದು ಮೊದಲ ಬಾರಿಗೆ ಹೇರಿದ ಲಾಕ್‌ಡೌನ್ ಅನ್ನು ರಾಷ್ಟ್ರ ರಾಜಧಾನಿಯಲ್ಲಿ ವಿಸ್ತರಿಸುತ್ತಿರುವುದು ಇದು ನಾಲ್ಕನೇ ಬಾರಿ . ಈ ಹಿಂದಿನ ನಿರ್ಬಂಧವು ಸೋಮವಾರ ಬೆಳಿಗ್ಗೆ 5 ಗಂಟೆಗೆ ಕೊನೆಗೊಳ್ಳಬೇಕಿತ್ತು.

ದೆಹಲಿಯ ಕೊವಿಡ್ -19 ಪ್ರಕರಣಗಳ ಬಗ್ಗೆ ಮಾತನಾಡಿದ ಕೇಜ್ರಿವಾಲ್, ಕಳೆದ 24 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 10,000 ಕ್ಕಿಂತ ಕಡಿಮೆ ಪ್ರಕರಣಗಳನ್ನು ದಾಖಲಾಗಿದೆ ಎಂದಿದ್ದಾರೆ. ದೆಹಲಿಯಲ್ಲಿ ಕೋವಿಡ್ -19 ಹರಡುವುದನ್ನು ಪರಿಶೀಲಿಸುವಲ್ಲಿ ಲಾಕ್‌ಡೌನ್ ಪ್ರಮುಖ ಪಾತ್ರ ವಹಿಸಿದೆ ಎಂದು ಕೇಜ್ರಿವಾಲ್ ಶನಿವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಪ್ರಕರಣಗಳು ಹೆಚ್ಚಾಗದಂತೆ ನೋಡಿಕೊಳ್ಳಲು ಜನರು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ ಕೇಜ್ರಿವಾಲ್.

ಕೊರೊನಾ  ಕಾಲದಲ್ಲಿ ಪರಸ್ಪರ ಬೆರಳು ತೋರಿಸುವ ಬದಲು  ಜತೆಯಾಗಿ  ನಿಲ್ಲೋಣ

ಕೊರೊನಾ ಸಂಕಷ್ಟ ಕಾಲದಲ್ಲಿ  ಜನರು ದುಃಖಿತರಾಗಿದ್ದಾರೆ. ಈ ಹೊತ್ತಲ್ಲಿ ಪರಸ್ಪರ ಬೆರಳು ತೋರಿಸುವ ಬದಲುಜತೆಯಾಗಿ ನಿಲ್ಲಬೇಕು.  ನಾನು ಆಮ್ ಆದ್ಮಿ  ಪಕ್ಷದ ಕಾರ್ಯಕರ್ತರಲ್ಲಿ ಹೇಳುವುದಿಷ್ಟೇ. ನೀವೂ ಎಲ್ಲೇ ಇರಿ, ನಿಮ್ಮ ಸುತ್ತು ಮುತ್ತಲಿನ  ಜನರಿಗೆ ತನು ಮನ ಧನದಿಂದ ಸಹಾಯಮಾಡಿ. ಈ  ಕ್ಷಣದಲ್ಲಿ ಇದೇ ದೇಶಭಕ್ತಿ,ಇದೇ ಧರ್ಮ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿದೆಹಲಿ ನಿವಾಸಿಗಳಿಗೆ ಉಚಿತ ಪಡಿತರ; ಆಟೊ,ಟ್ಯಾಕ್ಸಿ ಚಾಲಕರಿಗೆ ₹5000 ಆರ್ಥಿಕ ನೆರವು: ಅರವಿಂದ್ ಕೇಜ್ರಿವಾಲ್ ಘೋಷಣೆ