ಕಟ್ಟಡ ಕಾರ್ಮಿಕ ಮಕ್ಕಳ ವಾರ್ಷಿಕ ಸಹಾಯಧನಕ್ಕೆ ಕಾರ್ಮಿಕ ಇಲಾಖೆ ಕತ್ತರಿ ಕತ್ತರಿ ಹಾಕಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಈಗ ಕಾಂಗ್ರೆಸ್ ಸರ್ಕಾರ ಕಡಿತ ಮಾಡಿದೆ. ಭಾರೀ ಪ್ರಮಾಣದಲ್ಲಿ ಸಹಾಯಧನ ಕಡಿತ ಮಾಡಿದ್ದು ಈ ಬಗ್ಗೆ ಸರ್ಕಾರ ಅಕ್ಟೋಬರ್ 30 ರಂದು ಅಧಿಸೂಚನೆ ಹೊರಡಿಸಿದೆ. ಹಾಗಾದ್ರೆ, ಎಷ್ಟೆಷ್ಟು ಕಡಿತ ಮಾಡಿದೆ ಎನ್ನುವ ಅಂಕಿ-ಅಂಶ ಈ ಕೆಳಗಿನಂತಿದೆ ನೋಡಿ.
Ad
ವಿಧಾನಸೌಧ
Follow us on
ಬೆಂಗಳೂರು, (ನವೆಂಬರ್ 08): ಕಾಂಗ್ರೆಸ್ ಸರ್ಕಾರ (Congress Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ(guarantee scheme) ಅನುದಾನ ಸರಿದೂಗಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಬೇರೆ ಯೋಜನೆಗಳ ಅನುದಾನವನ್ನು ಈ ಗ್ಯಾರಂಟಿಗೆ ಕೊಡಲಾಗುತ್ತಿದೆ. ಅಲ್ಲದೇ ಕೆಲ ಯೋಜನೆಗಳಿಗೆ ಕತ್ತರಿ ಹಾಕಲಾಗಿದೆ. ಅದರಂತೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ ಬಿದ್ದಿದೆ. ಹೌದು.. ಕಾರ್ಮಿಕ ಇಲಾಖೆ, ಕಲಿಕಾ ಭಾಗ್ಯ ಯೋಜನೆ(kalika bhagya yojana) ಅಡಿಯಲ್ಲಿ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೀಡುವ ವಾರ್ಷಿಕ ಸಹಾಯಧನವನ್ನು ಕಡಿತಗೊಳಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಕಡಿತ ಮಾಡಿದೆ. ಭಾರೀ ಪ್ರಮಾಣದಲ್ಲಿ ಸಹಾಯಧನ ಕಡಿತ ಮಾಡಿದ್ದು ಈ ಬಗ್ಗೆ ಸರ್ಕಾರ ಅಕ್ಟೋಬರ್ 30 ರಂದು ಅಧಿಸೂಚನೆ ಹೊರಡಿಸಿದೆ. ಕಟ್ಟಡ ಕಾರ್ಮಿಕರ ಮಕ್ಕಳ ಕಲಿಕೆ ಭಾಗ್ಯಕ್ಕೆ “ಕಡಿತ” ಭಾಗ್ಯ ಕರುಣಿಸಿದೆ.
1-4 ತರಗತಿ ವರೆಗಿನ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 5000 ರೂ. ನೀಡಲಾಗುತ್ತಿತ್ತು. ಆದ್ರೆ, ಇದೀಗ ಅದನ್ನು ಕಾಂಗ್ರೆಸ್ ಸರ್ಕಾರ 1100 ರೂ.ಗೆ ಇಳಿಸಿದೆ.
5-8 ತರಗತಿ ವಿದ್ಯಾರ್ಥಿಗಳಿಗೆ 8000 ರೂ. ರಿಂದ 1250 ರೂಪಾಯಿಗೆ ಇಳಿಕೆ. 9-10 ತರಗತಿ ಮಕ್ಕಳಿಗೆ ನೀಡಲಾಗುತ್ತಿದ್ದ 12000 ರೂಪಾಯಿ ಈಗ 3000 ರೂ.ಗೆ ಇಳಿಕೆ ಮಾಡಲಾಗಿದೆ.
ಪಿಯುಸಿ ವಿದ್ಯಾರ್ಥಿಗಳ 15000 ರೂಪಾಯಿಯನ್ನು 4600 ರೂ.ಗೆ ಇಳಿಸಲಾಗಿದೆ.
ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ 25000 ರೂ. ಅನ್ನು 6000 ರೂ.ನೀಡಲಾಗಿದೆ.
ಬಿಇ, ಬಿಟೆಕ್ ವಿದ್ಯಾರ್ಥಿಗಳಿಗೆ 50000 ರೂಪಾಯಿದಿಂದ 10000ರೂ.ಗೆ ಇಳಿಕೆ