24 ಗಂಟೆಯಲ್ಲಿ 8350 ಜನರಿಗೆ ಕೊವಿಡ್ ಟೆಸ್ಟ್: ರಾಜ್ಯದಲ್ಲಿಂದು 158 ಜನರಲ್ಲಿ ಸೋಂಕು ದೃಢ

|

Updated on: Dec 28, 2023 | 7:45 PM

ರಾಜ್ಯದಲ್ಲಿ ಕೊರೊನಾ ಸೋಂಕು ತಾಂಡವವಾಡುವ ಸುಳಿವು ನೀಡಿದೆ. ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್​ಗಳ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿನಿಂದ ಒಬ್ಬೊಬ್ಬರೇ ಸಾವನ್ನಪ್ಪುತ್ತಿರುವುದು ಟೆನ್ಷನ್ ತಂದಿಟ್ಟಿದೆ. ಸದ್ಯ ರಾಜ್ಯದಲ್ಲಿ ಇಂದು 158 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಅಲ್ಲಿಗೆ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 1.98ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ.

24 ಗಂಟೆಯಲ್ಲಿ 8350 ಜನರಿಗೆ ಕೊವಿಡ್ ಟೆಸ್ಟ್: ರಾಜ್ಯದಲ್ಲಿಂದು 158 ಜನರಲ್ಲಿ ಸೋಂಕು ದೃಢ
ಕೊರೊನಾ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಡಿಸೆಂಬರ್​ 28: ರಾಜ್ಯದಲ್ಲಿ ಕೊರೊನಾ ಸೋಂಕು (Coronavirus) ತಾಂಡವವಾಡುವ ಸುಳಿವು ನೀಡಿದೆ. ಕೆಲ ದಿನಗಳಿಂದ ದಿನಕ್ಕೆ ಪಾಸಿಟಿವ್ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇಂದು 158 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದರೆ, ಬೆಂಗಳೂರಿನಲ್ಲಿ ಇಂದು ಒಂದೇ ದಿನಕ್ಕೆ 85 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲಿಗೆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 1.98ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 8350 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, 568 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. 69 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಯಾವೆಲ್ಲ ಜಿಲ್ಲೆಗಳಲ್ಲಿ ಕೊರೊನಾ ಕೇಸ್ ಪತ್ತೆ

ಮೈಸೂರು 12, ದಕ್ಷಿಣ ಕನ್ನಡ 8, ಚಾಮರಾಜನಗರ 7, ವಿಜಯನಗರ 6, ಮಂಡ್ಯ 5, ರಾಮನಗರ 5,
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಂದು 5, ಬಳ್ಳಾರಿ 4, ಶಿವಮೊಗ್ಗ 4, ಚಿಕ್ಕಮಗಳೂರು 3, ಕೋಲಾರ 3, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಹಾಸನ, ಕಲಬುರಗಿ, ಬೀದರ್, ಕೊಪ್ಪಳ ಜಿಲ್ಲೆಯಲ್ಲಿ ತಲಾ 1 ಕೊರೊನಾ ಕೇಸ್ ಪತ್ತೆ ಆಗಿದೆ.

ಡೆತ್ ಅಡಿಟ್​ಗೆ ಮುಂದಾದ ಆರೋಗ್ಯ ಇಲಾಖೆ

ಡಿಸೆಂಬರ್ 15 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 10 ಜನರು ಕೊವಿಡ್​ಗೆ ಮೃತಪಟ್ಟಿದ್ದಾರೆ. ಡೆತ್ ಅಡಿಟ್ ಸಭೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಅಂತಾ ಮಾಹಿತಿ ಪಡೆಯಲು ಇಲಾಖೆ ಮುಂದಾಗಿದ್ದು, ಸಾವಿಗೆ ಕೊವಿಡ್ ಮುಖ್ಯ ಕಾರಣವಾಗಿತ್ತು ಅಂತಾ ಮಾಹಿತಿ ಕಲೆ ಹಾಕಲಿದೆ. ಸ್ಟೇಟ್ ಡೆತ್ ಅಡಿಟ್ ಕಮೀಟಿ ಕೂಡಾ ಸಾವಿಗೆ ಕಾರಣ ಕುರಿತು ಸಭೆ ಮಾಡಿದ್ದು, ಸಭೆ ಬಳಿಕ ರಾಜ್ಯದಲ್ಲಿನ ಕೊವಿಡ್ ಡೆತ್ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದು 103 ಕೊವಿಡ್​ ಕೇಸ್ ಪತ್ತೆ; ಓರ್ವ ಸೋಂಕಿತ ಬಲಿ

ಕೊವಿಡ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋದ್ರಿಂದ OPDಗೆ ಬರುವ ರೋಗಿಗಳ ಸಂಖ್ಯೆಯೂ ಏರಿಕೆಯಾಗ್ತಿದೆ. ಕೆಮ್ಮು, ನೆಗಡಿ, ಜ್ವರ ಅಂತಾ ಬರ್ತಿದ್ದ ರೋಗಿಗಳ ಸಂಖ್ಯೆ ದಿಡೀರನೇ ಶೇಕಡಾ 25ರಿಂದ 30ರಷ್ಟು ಏರಿಕೆಯಾಗಿದೆ. ಹೀಗಾಗಿ ಹೊಸ ವರ್ಷದ ಆಚರಣೆ ಬೇರೆ ಹತ್ತಿರವಾಗ್ತಿರೋದ್ರಿಂದ, ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಆರೋಗ್ಯ ಸಚಿವರು ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.