Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿಯಲ್ಲಿ ನ್ಯೂ ಇಯರ್​ಗಾಗಿ ಗೋವಾ ಲಿಕ್ಕರ್ ಸ್ಟಾಕ್ ಮಾಡ್ತಿದ್ದ ಆರು ಜನರ ಬಂಧನ

ಇನ್ನೇನು ಹೊಸ ವರ್ಷ ಬರುತ್ತಿದ್ದು, ಈ ಹಿನ್ನಲೆ ಅಕ್ರಮ ಮದ್ಯ ಸ್ಟಾಕ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದ ಬಂಧಿತರು. ಗೋವಾದಿಂದ ಕಲಬುರಗಿಯಲ್ಲಿ ಲಿಕ್ಕರ್ ಸ್ಟಾಕ್ ಮಾಡುತ್ತಿದ್ದರು. ಖಚಿತ ಮಾಹಿತಿ‌ ಮೇರೆಗೆ ದಾಳಿ ಮಾಡಿದ ಅಬಕಾರಿ ಪೊಲೀಸರು, ಲಕ್ಷಾಂತರ ಮೌಲ್ಯದ ಗೋವಾ ಲಿಕ್ಕರ್ ಜೊತೆಗೆ ಆರು ಜನರನ್ನ ಖೆಡ್ಡಾಗೆ ಕೆಡವಿದ್ದಾರೆ.

ಕಲಬುರಗಿಯಲ್ಲಿ ನ್ಯೂ ಇಯರ್​ಗಾಗಿ ಗೋವಾ ಲಿಕ್ಕರ್ ಸ್ಟಾಕ್ ಮಾಡ್ತಿದ್ದ ಆರು ಜನರ ಬಂಧನ
ಕಲಬುರಗಿಯಲ್ಲಿ ಗೋವಾ ಮದ್ಯ ವಶ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 28, 2023 | 7:24 PM

ಕಲಬುರಗಿ, ಡಿ.28: ಸಧ್ಯ‌ ಎಲ್ಲರೂ ಹೊಸ ವರ್ಷ(New Year)ಆಚರಣೆಗೆ ಫ್ಲ್ಯಾನ್ ಮಾಡುತ್ತಿದ್ದಾರೆ. ಆದ್ರೆ, ಇಲ್ಲೊಂದು ಐನಾತಿ ಗ್ಯಾಂಗ್ ನ್ಯೂ ಇಯರ್ ಸೆಲೆಬ್ರೆಷನ್​ಗಾಗಿ ಅಡ್ಡದಾರಿ ಹಿಡಿದಿತ್ತು. ಹೇಗೋ ನ್ಯೂ ಇಯರ್ ಅಂದರೆ ಎಲ್ಲರೂ ಕಾಮನ್ ಆಗಿ ಎಣ್ಣೆ ಪಾರ್ಟಿ ಮಾಡುತ್ತಾರೆ. ಇದನ್ನೆ ಎನ್ ಕ್ಯಾಶ್ ಮಾಡಿಕೊಂಡ ಈ ಆರು ಜನ ಬೇರೆಯದ್ದೆ ಉಪಾಯ ಮಾಡಿದ್ದರು. ಗೋವಾದಿಂದ ಎಲ್ಲಾ ಬ್ರ್ಯಾಂಡ್​ಗಳ ಲಿಕ್ಕರ್​ಗಳ‌ನ್ನ ತರಿಸಿ, ಸ್ಟಾಕ್ ಮಾಡಿ ಅದನ್ನ ನ್ಯೂ ಇಯರ್​ಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಕ್ಕೆ ನಿರ್ಧರಿಸಿದ್ದರು.

ಈ ಮಾಹಿತಿ ತಿಳಿದ ಕಲಬುರಗಿ ಅಬಕಾರಿ ಪೊಲೀಸರು ಇಂದು(ಡಿ.28) ಬೆಳ್ಳಂ ಬೆಳಗ್ಗೆ 3 ತಂಡಗಳು ವಿವಿಧ ಕಡೆ ದಾಳಿ ಮಾಡಿದ್ದರು. ನಂತರ ಅಬಕಾರಿ ಪೊಲೀಸರಿಗೂ ಶಾಕ್ ಕಾದಿತ್ತು. ಖಾಸಗಿ ಬಸ್ಸಿನಲ್ಲಿ ಒಂದೋ ಎರಡೂ ಬಾಟಲ್ ಇರಬೇಕು ಅಂದುಕೊಂಡಿದ್ದ ಅಬಕಾರಿ ಪೊಲೀಸರು ಒಮ್ಮೆ ಹೌಹಾರಿ ಹೋಗಿದ್ದರು. ಯಾಕೆಂದರೆ ಅಲ್ಲಿ ಸಿಕ್ಕಿದ್ದು ಬರೋಬ್ಬರಿ 51 ಲಕ್ಷ ಮೌಲ್ಯದ 48 ಲೀಟರ್ ಗೋವಾ ಲಿಕ್ಕರ್ ಹಾಗೂ ಲಿಕ್ಕರ್ ಸಾಗಿಸೋಕೆ ಬಳಸಲಾಗಿದ್ದ ಒಂದು ಲಕ್ಸುರಿ ಬಸ್ ಜೊತೆಗೆ ಎರಡೂ ಬೈಕ್​ಗಳು.‌ ಕೂಡಲೇ ಆರು ಜನ ಐನಾತಿಗಳ‌ನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:New Year Guidelines: ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಬೆಂಗಳೂರು ಪೊಲೀಸ್​ ಆಯುಕ್ತ: ಇಲ್ಲಿದೆ ಮಾಹಿತಿ

ಇನ್ನು ಸಧ್ಯ ಬಂಧಿತರಾಗಿರೋ ಸಂಗಣ್ಣ ಶಟಗಾರ ಸಂತ್ರಾಸವಾಡಿ. ವಿಜಯ ಸಿದ್ದಗುರು ಕಲಬುರಗಿ. ಸತೀಶ್ ಸಾಲಿ ಕಲ್ಲಹಂಗರಗಾ, ಚಂದ್ರಕಾಂತ್ ಚಿಕ್ಕೆ ಬಾಚನಾಳ. ನಿತ್ಯ ಆನಂದ ಕಾಂಬಳೆ, ಏಕಲೂರ್ ಬಸವಕಲ್ಯಾಣ. ವಾಮನರಾವ್ ಮರಗುತ್ತಿ ತಾಂಡಾ ಈ ಎಲ್ಲಾ ಆರು ಜನ ಕಳೆದ ಹಲವಾರು ತಿಂಗಳಿಂದ ಫ್ಲ್ಯಾನ್ ಮಾಡಿದ್ದರಂತೆ. ಹೇಗೋ ಗೋವಾದಲ್ಲಿ ಕಡಿಮೆ ಬೆಲೆಗೆ ಲಿಕ್ಕರ್ ಸಿಗುತ್ತದೆ, ಅದನ್ನ ಅಕ್ರಮವಾಗಿ ತಂದು ಮಾರಾಟ ಮಾಡಿದ್ರೆ ಒಳ್ಳೆಯ ದುಡಿಮೆ ಮಾಡಬಹುದು ಎನ್ನುವ ದುರಾಸೆಗೆ ಬಿದ್ದಿದ್ದವರು, ಇದೀಗ ಜೈಲು ಸೇರಿದ್ದಾರೆ.

ಸಧ್ಯ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಕಲಬುರಗಿ ಅಬಕಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗೋವಾ-ಕರ್ನಾಟಕ ಗಡಿಯಲ್ಲಿ ಅಷ್ಟು ಬಿಗಿ ಸ್ಯೆಕ್ಯೂರಿಟಿ ಇದ್ದರೂ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ಮದ್ಯ ಬರ್ತಿರೋದು ಹೇಗೆ ಎನ್ನುವ ಅನುಮಾನ ಕಾಡುತ್ತಿದೆ. ಇದರ ಹಿಂದೆ ಏನಾದರೂ ದೊಡ್ಡ ಚೈನ್ ಲಿಂಕ್ ಇದಿಯಾ ಎನ್ನೋ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ