ಬೆಂಗಳೂರು: ನಿನ್ನೆ ಖಾಸಗಿ ಆ್ಯಂಬುಲೆನ್ಸ್ನಲ್ಲಿ ಮೃತದೇಹ ತಂದಿದ್ದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಚಿತಾಗಾರ ಸಿಬ್ಬಂದಿ ಹಿಂದೇಟು ಹಾಕಿದ್ದು ಸಿಬ್ಬಂದಿ ಹಾಗೂ ಕುಟುಂಬಸ್ಥರ ನಡುವೆ ಗಲಾಟೆ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಈಗ ಖಾಸಗಿ ಆ್ಯಂಬುಲೆನ್ಸ್‌ಗಳಲ್ಲಿ ತಂದ ಶವಗಳಿಗೂ ಅಂತ್ಯಕ್ರಿಯೆ ಮಾಡಬೇಕು ಎಂದು ಮೇಡಿ ಅಗ್ರಹಾರ ಚಿತಾಗಾರದಲ್ಲಿ ಇಂದು ಮತ್ತೊಂದು ರೂಲ್ಸ್ ಹಾಕಲಾಗಿದೆ.
ನಿನ್ನೆವರೆಗೆ ಕೇವಲ ಬಿಬಿಎಂಪಿ ಆ್ಯಂಬುಲೆನ್ಸ್‌ಗಳಲ್ಲಿ ತಂದ ಮೃತದೇಹಗಳಿಗೆ ಮಾತ್ರ ದಹನಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದ್ರೆ ಇಂದಿನಿಂದ ಖಾಸಗಿ ಹಾಗೂ ಬಿಬಿಎಂಪಿ ಎರಡೂ ಆ್ಯಂಬುಲೆನ್ಸ್‌ಗಳಿಗೆ ಅವಕಾಶ ನೀಡಲಾಗಿದೆ. ಖಾಸಗಿ ಆ್ಯಂಬುಲೆನ್ಸ್‌ಗಳಲ್ಲಿ ಮೃತ ದೇಹ ತಂದರೂ ಅಂತ್ಯಕ್ರಿಯೆ ನಡೆಸಲಾಗುತ್ತೆ.
ನಿನ್ನೆ ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ತಂದ ಶವಕ್ಕೆ ತಡೆ ಹಿಡಿಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದರು. ಒಂದು ಕಡೆ ಬಿಬಿಎಂಪಿ ಆ್ಯಂಬುಲೆನ್ಸ್‌ಗಳು ಎಷ್ಟು ಕಾದರೂ ಬರೋದಿಲ್ಲ. ಅಲ್ಪ-ಸ್ವಲ್ಪ ಹಣಕೊಟ್ಟು ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಶವ ರವಾನೆ ಮಾಡಲಾಗುತ್ತೆ. ಆದ್ರೆ ಚಿತಾಗಾರ ಸಿಬ್ಬಂದಿ ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಶವ ತಂದ್ರೆ ಅಂತ್ಯಕ್ರಿಯೆ ಇಲ್ಲ ಎಂದು ಹೇಳ್ತಾರೆ. ಹೀಗಾಗಿ ನಿನ್ನೆ ಇದೇ ರೀತಿ ಶವ ಸಂಸ್ಕಾರಕ್ಕೆ ಅವಕಾಶ ನೀಡದ್ದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಎರಡೂ ವಾಹನಗಳಿಗೂ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ತಂದರೂ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ. ಸದ್ಯ ಈಗ ಈ ಸಮಸ್ಯೆ ಬಗೆಹರಿದಿದ್ದು ಖಾಸಗಿ ಹಾಗೂ ಬಿಬಿಎಂಪಿ ಆ್ಯಂಬುಲೆನ್ಸ್‌ಗಳಲ್ಲಿ ಮೃತ ದೇಹ ತಂದರೆ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗುತ್ತೆ. ಬೆಳಗ್ಗೆ 7:30ರಿಂದ 11ಗಂಟೆಯವರೆಗೆ 5 ಕೊವಿಡ್ ಮೃತದೇಹಗಳನ್ನು ದಹನ ಮಾಡಲಾಗಿದೆ.
ಇದನ್ನೂ ಓದಿ: ಖಾಸಗಿ ಆ್ಯಂಬುಲೆನ್ಸ್ ಬಿಡಲು ಸಿಬ್ಬಂದಿ ಆಕ್ರೋಶ, ಮೃತದೇಹ ದಹನಕ್ಕೂ ಪಾಲಿಸಬೇಕು ರೂಲ್ಸ್! ಮಾರ್ಷಲ್ಗಳ ಕಾಟ