ಕರ್ನಾಟಕಕ್ಕೆ ಯಾವ ಕಂಪೆನಿಯ ಲಸಿಕೆ ಬರಲಿದೆ.. ಕೊವ್ಯಾಕ್ಸಿನ್​ ಅಥವಾ ಕೊವಿಶೀಲ್ಡ್​?

ತಾಲೀಮು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ವೈದ್ಯರಿಗಾಗಲೀ, ಜಿಲ್ಲಾಧಿಕಾರಿಗಳಿಗಾಗಲೀ ಯಾವ ಲಸಿಕೆ ಕರ್ನಾಟಕಕ್ಕೆ ಬರಲಿದೆ ಎಂಬ ಮಾಹಿತಿ ನೀಡಲಾಗಿಲ್ಲ. ಸದ್ಯ ದೇಶದಲ್ಲಿ ಭಾರತ್​ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್ ಮತ್ತು ಸೆರಮ್​ ಸಂಸ್ಥೆಯ ಕೊವಿಶೀಲ್ಡ್ ಈ ಎರಡೂ ಲಸಿಕೆಗಳಿಗೂ ತುರ್ತು ಬಳಕೆಗೆ ಅನುಮಾತಿ ನೀಡಲಾಗಿದೆ.

ಕರ್ನಾಟಕಕ್ಕೆ ಯಾವ ಕಂಪೆನಿಯ ಲಸಿಕೆ ಬರಲಿದೆ.. ಕೊವ್ಯಾಕ್ಸಿನ್​ ಅಥವಾ ಕೊವಿಶೀಲ್ಡ್​?
ಪ್ರಾತಿನಿಧಿಕ ಚಿತ್ರ
Updated By: ರಾಜೇಶ್ ದುಗ್ಗುಮನೆ

Updated on: Jan 08, 2021 | 7:06 PM

ಬೆಂಗಳೂರು: ಕೊರೊನಾ ಲಸಿಕೆ ವಿತರಣೆಗೆ ಸಮಯ ಸನ್ನಿಹಿತವಾಗಿದೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳೂ ಕೇಂದ್ರದಿಂದ ಲಸಿಕೆ ಪೂರೈಕೆ ಆಗುವುದನ್ನೇ ನಿರೀಕ್ಷಿಸುತ್ತಿವೆ. ಕೆಲವು ಮೂಲಗಳು ಕರ್ನಾಟಕ್ಕೆ ಸೋಮವಾರವೇ ಲಸಿಕೆ ಬರುವ ಸಾಧ್ಯತೆ ಇದೆ ಎನ್ನುತ್ತಿವೆ. ಇಷ್ಟಾದರೂ ಯಾವ ಸಂಸ್ಥೆಯ ಕೊರೊನಾ ಲಸಿಕೆ ಬರಲಿದೆ ಎನ್ನುವುದಕ್ಕೆ ಮಾತ್ರ ಇನ್ನೂ ಯಾರಿಗೂ ಉತ್ತರ ಸಿಕ್ಕಿಲ್ಲ.

ತಾಲೀಮು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ವೈದ್ಯರಿಗಾಗಲೀ, ಜಿಲ್ಲಾಧಿಕಾರಿಗಳಿಗಾಗಲೀ ಈ ಕುರಿತು ಮಾಹಿತಿಯನ್ನು ನೀಡಲಾಗಿಲ್ಲ. ಸದ್ಯ ದೇಶದಲ್ಲಿ ಭಾರತ್​ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್ ಮತ್ತು ಸೆರಮ್​ ಸಂಸ್ಥೆಯ ಕೊವಿಶೀಲ್ಡ್ ಈ ಎರಡೂ ಲಸಿಕೆಗಳಿಗೂ ತುರ್ತು ಬಳಕೆಗೆ ಅನುಮಾತಿ ನೀಡಲಾಗಿದೆ. ಆದರೆ, ಯಾವ ಆಧಾರದ ಮೇಲೆ, ಯಾವ ಲಸಿಕೆಯನ್ನು, ಯಾವ ಜಾಗಕ್ಕೆ ನೀಡಲಾಗುತ್ತದೆ ಎಂಬುದು ಮಾತ್ರ ಗುಟ್ಟಾಗಿ ಉಳಿದಿದೆ.

ಕೊರೊನಾ ಲಸಿಕೆ ತಾಲೀಮು ಪ್ರಕ್ರಿಯೆಯಲ್ಲಿ ಭಾಗವಹಿಸಿದವರಿಗೆ ಕೊಟ್ಟ ಲಸಿಕೆ ಯಾವುದು ಗೊತ್ತಾ?

Published On - 7:05 pm, Fri, 8 January 21