
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೊನಾದಿಂದ ಒಟ್ಟು ಮೃತರಾದವರ ಸಂಖ್ಯೆ 18 ಕ್ಕೆ ತಲುಪಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇದುವರೆಗೂ 2ನೇ ಬಲಿಯಾಗಿದೆ. ಕೊರೊನಾದಿಂದ ಮೃತಪಟ್ಟ ಮಹಿಳೆಯ ಅತ್ತೆಯೂ ಸಾವು ಕಂಡಿದ್ದಾರೆ. ಮಂಗಳೂರಿನ ಕೊವಿಡ್-19 ಆಸ್ಪತ್ರೆಯಲ್ಲಿ ವೃದ್ಧೆ ಮೃತಪಟ್ಟಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ 78 ವರ್ಷದ ವೃದ್ಧೆ ಇಂದು ಸಾವಿಗೀಡಾದವರು. ಏಪ್ರಿಲ್18 ರಂದು ಕೊರೊನಾದಿಂದ ವೃದ್ಧೆಯ ಸೊಸೆ ಮೃತಪಟ್ಟಿದ್ದರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಸಬಾ ಪೇಟೆಯ ನಿವಾಸಿಗಳು.
Published On - 7:29 pm, Thu, 23 April 20