ರಾಜ್ಯದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಮತ್ತೊಬ್ಬರು ಬಲಿ, ಎಲ್ಲಿ?

|

Updated on: Apr 30, 2020 | 8:09 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಮಂಗಳೂರಿನ ವೆನ್​ ಲಾಕ್ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 69 ವರ್ಷದ ವೃದ್ಧೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಮೂವರು ಸಾವಿಗೀಡಾಗಿದ್ದು, ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಏ.21ರಂದು ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೃದ್ಧೆ ಆಸ್ಪತ್ರೆಗೆ ದಾಖಲಾಗಿದ್ದರು. ಏ.19ರಂದು ಮೃತಪಟ್ಟ ಮಹಿಳೆಯಿಂದ ಈಕೆಗೆ ಸೋಂಕು ತಗುಲಿತ್ತು. ಇವರಿಬ್ಬರೂ ನೆರೆಮನೆಯ ನಿವಾಸಿಯಾಗಿದ್ದರು. ಏ.23ರಂದು ಮಹಿಳೆಯ ಅತ್ತೆ ಕೊರೊನಾಗೆ ಬಲಿಯಾಗಿದ್ದರು. ಇವರ ಸಂಪರ್ಕದಿಂದ ವೈರಸ್​ ತಗುಲಿದ್ದ […]

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಮತ್ತೊಬ್ಬರು ಬಲಿ, ಎಲ್ಲಿ?
Follow us on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಮಂಗಳೂರಿನ ವೆನ್​ ಲಾಕ್ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 69 ವರ್ಷದ ವೃದ್ಧೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಮೂವರು ಸಾವಿಗೀಡಾಗಿದ್ದು, ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಏ.21ರಂದು ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೃದ್ಧೆ ಆಸ್ಪತ್ರೆಗೆ ದಾಖಲಾಗಿದ್ದರು. ಏ.19ರಂದು ಮೃತಪಟ್ಟ ಮಹಿಳೆಯಿಂದ ಈಕೆಗೆ ಸೋಂಕು ತಗುಲಿತ್ತು. ಇವರಿಬ್ಬರೂ ನೆರೆಮನೆಯ ನಿವಾಸಿಯಾಗಿದ್ದರು. ಏ.23ರಂದು ಮಹಿಳೆಯ ಅತ್ತೆ ಕೊರೊನಾಗೆ ಬಲಿಯಾಗಿದ್ದರು. ಇವರ ಸಂಪರ್ಕದಿಂದ ವೈರಸ್​ ತಗುಲಿದ್ದ ವೃದ್ಧೆ ಇಂದು ಸಾವಿಗೀಡಾಗಿದ್ದಾರೆ.