ಬೆಂಗಳೂರು: ಕರ್ನಾಟಕದಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದೆ. ಕೊರೊನಾ ಎರಡನೇ ಅಲೆಗೆ ಇಡೀ ರಾಜಧಾನಿ ಬೆಂಗಳೂರು ತತ್ತರಿಸಿದೆ. ಕೊರೊನಾದ ಆರ್ಭಟ ನೋಡಿದ್ರೆ ಮುಂದೆ ದೊಡ್ಡ ಅನಾಹುತ ಕಾದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಕೊರೊನಾದ ಎರಡನೇ ಅಲೆ ಹೆಚ್ಚಾಗಿ ಮಕ್ಕಳ ಮೇಲೆಯೇ ದಾಳಿ ಮಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಇತ್ತೀಚೆಗೆ ದಾಖಲಾದ ಪ್ರಕರಣಗಳಲ್ಲಿ ಮಕ್ಕಳೇ ಹೆಚ್ಚು ಮಂದಿ.
ಬಿಬಿಎಂಪಿ ಶಾಲೆಗಳಲ್ಲಿ ಱಂಡಮ್ ಟೆಸ್ಟ್
ಹಲವೆಡೆ ಗುಣಲಕ್ಷಣಗಳಿಲ್ಲದಿದ್ದರೂ ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ಮಾರ್ಚ್ 1 ರಿಂದ ಈವರೆಗೂ 30 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ನಗರದ 198 ವಾರ್ಡ್ಗಳ ಪಾಲಿಕೆ ಶಾಲೆಗಳಲ್ಲಿ ಕೊರೊನಾ ಸ್ಯಾಂಪಲ್ ಕಲೆಕ್ಟ್ ಮಾಡಲಾಗುತ್ತಿದೆ. ಶಾಲೆಯ ಸಿಬ್ಬಂದಿ ಮತ್ತು ಶಿಕ್ಷಕರನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಲಾಗುತ್ತಿದೆ.
ತಡವಾಗುತ್ತಿದೆ ಕೊರೊನಾ ಟೆಸ್ಟ್ ರಿಪೋರ್ಟ್ ?!
ವರದಿ ತಡವಾದರೆ ಕೊರೊನಾ ಸ್ಫೋಟಗೊಂಡು ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಶಾಲೆ ಮಕ್ಕಳ ರಿಪೋರ್ಟ್ ನೀಡುವಲ್ಲಿ ನಿರ್ಲಕ್ಷ್ಯಕ್ಕೆ ಅಧಿಕಾರಿಗಳಲ್ಲೇ ಅಸಮಾಧಾನಗೊಂಡಿದ್ದಾರೆ. ಕಳೆದ 5 ದಿನಗಳಿಂದ ಪಾಲಿಕೆ ಶಿಕ್ಷಣ ವಿಭಾಗ ರಿಪೋರ್ಟ್ಗಾಗಿ ಕಾಯುತ್ತಿದೆ. ಬರೋಬ್ಬರಿ 5 ಸಾವಿರ ವಿದ್ಯಾರ್ಥಿಗಳ ರಿಸಲ್ಟ್ ಬರಬೇಕಿದೆ. ಈವರೆಗೂ ಕೊರೊನಾ ರಿಪೋರ್ಟ್ ಕೈಸೇರಿಲ್ಲ, ಯಾವಾಗ ಸಿಗುತ್ತೆ ಅನ್ನೊ ಮಾಹಿತಿಯೂ ಇಲ್ಲ. ಸದ್ಯ ಪಾಲಿಕೆಯಲ್ಲಿ ಒಟ್ಟು 13,839 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು. 33 ಹೈ ಸ್ಕೂಲ್ , 15 ಪ್ರೈಮರಿ ಸ್ಕೂಲ್ , 90 ನರ್ಸರಿ , 14 ಪಿಯು ಕಾಲೇಜ್ ಹಾಗೂ 4 ಡಿಗ್ರಿ ಕಾಲೇಜುಗಳ ಒಳಪಡುತ್ತವೆ. ಬಹುತೇಕ ಕಡೆ ಸ್ಯಾಂಪಲ್ ಕಲೆಕ್ಟ್ ಮಾಡಿ ವಾರ ಕಳೆಯುತ್ತಿದೆ. ಆದ್ರೆ ರಿಸಲ್ಟ್ ಮಾತ್ರ ಸಿಕ್ಕಿಲ್ಲ. ಈವರೆಗೂ 1500 ಕೇಸ್ಗಳ ರಿಪೋರ್ಟ್ ಬಂದಿದ್ದು ಅದರಲ್ಲಿ 30 ಕೇಸ್ಗಳು ಪಾಸಿಟಿವ್ ಆಗಿದೆ.
ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ
-ಗುಣಲಕ್ಷಣಗಳಿಲ್ಲ -ವಿದ್ಯಾರ್ಥಿಗಳಲ್ಲಿ ಸೋಂಕು ಇದ್ದರೆ ಹರಡುವ ಸಾಧ್ಯತೆಗಳು ಹೆಚ್ಚು. ಮನೆಯಲ್ಲಿ, ಓಡಾಡುವ ಸ್ಥಳಗಳಲ್ಲಿ ವಯಸ್ಸಾದವರಿದ್ದರೆ ಮತ್ತಷ್ಟು ಆತಂಕ ಫಿಕ್ಸ್
-ಪಾಲಿಕೆಯಲ್ಲಿ ಓದುವವರು ಬಡವರು ಅನೇಕ ಮಂದಿ ಸ್ಲಂ ಭಾಗಗಳಲ್ಲಿ ವಾಸ ಮಾಡುವವರು. ಹೀಗಾಗಿ ಇಂತಹ ಜಾಗಗಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು
-ಶಾಲೆ, ಪರೀಕ್ಷೆ, ಮಕ್ಕಳ ಚಟುವಟಿಕೆ, ಎಲ್ಲವೂ ಹೆಚ್ಚಳಕ್ಕೆ ಕಾರಣ. ಹಾಗಾಗಿ ಮಕ್ಕಳನ್ನು ಕಂಟ್ರೋಲ್ ಮಾಡುವುದು ಅಸಾಧ್ಯ.
-ಬೋಧನಾ ವೃಂದದಲ್ಲಿ ಕೊರೊನಾ ಸೋಂಕು ಇದ್ದರೂ ಮಕ್ಕಳಿಗೆ ಮತ್ತಷ್ಟು ಆತಂಕ
ತಡವಾಗಲು ಕಾರಣಗಳೇನು?
-ನಿತ್ಯ ನಗರದಲ್ಲಿ ಕೊರೊನಾ ಟೆಸ್ಟ್ಗಳ ಸಂಖ್ಯೆ ಹೆಚ್ಚಳ
-ಕೊರೊನಾ ಸರ್ಕಾರಿ ಟೆಸ್ಟ್ ಲ್ಯಾಬ್ಗಳ ಮೇಲೆ ಒತ್ತಡ
-ಮಾರ್ಚ್ 1 ರಲ್ಲಿ ನಿತ್ಯ 23 ಸಾವಿರ ಸ್ಯಾಂಪಲ್ ಟೆಸ್ಟ್ ಮಾಡಲಾಗುತ್ತಿತ್ತು, ಈಗ 50 ಸಾವಿರ ಸ್ಯಾಂಪಲ್ ಟೆಸ್ಟ್ ಮಾಡಲಾಗುತ್ತಿದೆ.
-24 ರಿಂದ 48 ಗಂಟೆಯೊಳಗೆ ಸಿಗುತ್ತಿದ್ದ ರಿಪೋರ್ಟ್ ಈಗ 5 ದಿನ ಕಳೆದ್ರು ರಿಸಲ್ಟ್ ಸಿಗುತ್ತಿಲ್ಲ.
ಕೊರೊನಾ ಪಾಸಿಟಿವ್ ಆದ ಶಾಲೆಗಳ ಏರಿಯಾ
-ಜೋಗುಪಾಳ್ಯ
-ಕಾಟನ್ ಪೇಟೆ
-ಆಸ್ಟಿನ್ ಟೌನ್
-ಹೆರೋಹಳ್ಳಿ
ಇದನ್ನೂ ಓದಿ: ಕೇವಲ 8ದಿನಕ್ಕೆ 700ಕ್ಕೂ ಹೆಚ್ಚು ಜನರಿಗೆ ಕೊರೊನಾ, 10 ಮಂದಿ ಸಾವು.. ಮೈಸೂರಿನಲ್ಲಿ ಅಬ್ಬರಿಸುತ್ತಿದೆ ಸೋಂಕು