ವಿಜಯಪುರ: ಒಬ್ಬರಿಗೊಬ್ಬರು ಧೈರ್ಯ ತುಂಬುತ್ತ ಕೊರೊನಾ ಗೆದ್ದು ಬೀಗಿದ ಒಂದೇ ಕುಟುಂಬದ ಸದಸ್ಯರು

|

Updated on: May 27, 2021 | 10:27 AM

ಕೊರೊನಾ ಸೋಂಕು ಇಡೀ ಕುಟುಂಬದ ಮೇಲೆ ಆವರಿಸಿ ಕಾಟ ಕೊಟ್ಟರು ಎಲ್ಲೂ ಕುಗ್ಗದೆ ಧೈರ್ಯದಿಂದ ಎದುರಿಸಿ ಸರ್ವರೂ ಗುಣಮುಖರಾಗಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. 48 ವರ್ಷದ ರಾಜಕುಮಾರ್ ಕುಮಾನಿ ಕುಟುಂಬಕ್ಕೆ ಕೆಲ ದಿನಗಳ ಹಿಂದೆ ಕೊರೊನಾ ಬಿಟ್ಟು ಬಿಡದೇ ಕಾಡಿದೆ.

ವಿಜಯಪುರ: ಒಬ್ಬರಿಗೊಬ್ಬರು ಧೈರ್ಯ ತುಂಬುತ್ತ ಕೊರೊನಾ ಗೆದ್ದು ಬೀಗಿದ ಒಂದೇ ಕುಟುಂಬದ ಸದಸ್ಯರು
ಸಾಂದರ್ಭಿಕ ಚಿತ್ರ
Follow us on

ವಿಜಯಪುರ: ಮಹಾಮಾರಿ ಕೊರೊನಾ ಅದೆಷ್ಟೋ ಜೀವಗಳನ್ನು ಬಲಿ ಪಡೆದಿದೆ. ಈಗಾಗಗಲೇ ಪೋಷಕರು, ಮಕ್ಕಳನ್ನು ಕಳೆದುಕೊಂಡು ಸಂಬಂಧಿಕರು ದುಃಖಿಸುತ್ತಿದ್ದಾರೆ. ಕೊರೊನಾಗೆ ಹೆದರಿ ಆತ್ಮಹತ್ಯೆಗೆ ಶರಣಾದ ಪ್ರಕರಣಗಳು ಕಂಡುಬಂದಿವೆ. ಸೋಂಕು ತಗುಲಿದೆ ಎಂದು ದೃಢವಾದಾಗ ಮಾನಸಿಕ ಸ್ಥಿತಿ ಹದಗೆಟ್ಟು ಬೇರೆ ದಾರಿ ಇಲ್ಲದೆ ನೇಣಿಗೆ ಶರಣಾಗುತ್ತಿದ್ದಾರೆ. ಈ ಎಲ್ಲಾ ಬೇಸರದ ಸುದ್ದಿಯೊಂದಿಗೆ ಖುಷಿ ಸಂಗತಿಯೊಂದಿದೆ. ಇಡೀ ಕುಟುಂಬದ ಮೇಲೆ ಮಾಹಾಮಾರಿ ಕೊರೊನಾ ಛಾಯೆ ಆವರಿಸಿದರೂ ಅದನ್ನು ಧೈರ್ಯದಿಂದ ಎದುರಿಸಿ ಸರ್ವರೂ ಗೆದ್ದು ಬಂದಿದ್ದಾರೆ.

ಕೊರೊನಾ ಸೋಂಕು ಇಡೀ ಕುಟುಂಬದ ಮೇಲೆ ಆವರಿಸಿ ಕಾಟ ಕೊಟ್ಟರು ಎಲ್ಲೂ ಕುಗ್ಗದೆ ಧೈರ್ಯದಿಂದ ಎದುರಿಸಿ ಸರ್ವರೂ ಗುಣಮುಖರಾಗಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. 48 ವರ್ಷದ ರಾಜಕುಮಾರ್ ಕುಮಾನಿ ಕುಟುಂಬಕ್ಕೆ ಕೆಲ ದಿನಗಳ ಹಿಂದೆ ಕೊರೊನಾ ಬಿಟ್ಟು ಬಿಡದೇ ಕಾಡಿದೆ. ಸರಕಾರಿ ಹುದ್ದೆಯಲ್ಲಿರುವ 40 ವರ್ಷದ ಶ್ರಿಶೈಲ್ ಕುಮಾನಿಯವರಿಗೆ ಮೊದಲು ಕೊರೊನಾ ಲಕ್ಷಣಗಳು ಉಲ್ಬಣಗೊಂಡವು. ನಂತರ ಇಡೀ ಕುಟುಂಬಕ್ಕೆ ಕೊವಿಡ್ ಪಸರಿಸಿ 39 ವರ್ಷದ ಸುಜಾತ, 41 ವರ್ಷದ ವಿದ್ಯಾ, 41 ವರ್ಷದ ದುಂಡಪ್ಪ ಕುಮಾನಿರವರು ಕೊರೊನಾ ವಿರುದ್ಧ ಹೋರಾಡಿ ಇದೀಗ ಗೆದ್ದಿದ್ದಾರೆ.

ಒಂದೇ ಸಮಯದಲ್ಲಿ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಬಂದರೂ ಎಲ್ಲು ಧೃತಿಗೆಡದೆ ರಾಜಕುಮಾರ್ ಕುಮಾನಿ ಹಾಗೂ ಅವರ ಸಹೋದರ ಶ್ರೀಶೈಲ್ ಕುಮಾನಿ ತಾವೂ ಜ್ವರದಿಂದ ಬಳಲುತ್ತಿದ್ದರೂ ಕುಟುಂಬದ ಇತರ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ. ಮನೆಯಲ್ಲಿ ಇವರೇ ಯಜಮಾನರಾಗಿದ್ದರಿಂದ ಇಡೀ ಕುಟುಂಬ ಸದಸ್ಯರ ಊಟೋಪಚಾರ, ಅನಿವಾರ್ಯತೆಗಳನ್ನು ನಿಭಾಯಿಸಿ ಕೊರೊನಾ ಗೆದ್ದಿರುವುದು ಬಹಳಷ್ಟು ಸೋಂಕಿತ ಕುಟುಂಬಗಳಿಗೆ ಧೈರ್ಯ ತಂದಿದೆ.

ಶ್ರೀಶೈಲ್ ಕುಮಾನಿಯವರ ಪತ್ನಿ ಸುಜಾತ ಕುಮಾನಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಕೊರೊನಾ ಕಾಲದಲ್ಲಿ ಫ್ರಂಟ್ ಲೈನ್ ವರ್ಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೃಷ್ಟವಶಾತ್ ಸುಜಾತರವರಿಗೆ ಕೊವಿಡ್ ತೀರಾ ಕ್ರಿಟಿಕಲ್ ಸ್ಟೇಜ್​ಗೆ ಕರೆದುಕೊಂಡು ಹೋಗಿದ್ದರೂ ಕುಟುಂಬದ ಪ್ರೀತಿ, ಸಹಕಾರ, ಮಾನಸಿಕ ಹೋರಾಟದ ಪ್ರತಿಫಲವಾಗಿ ಅವರೂ ಕೂಡ ಗಂಭೀರ ಸ್ಥಿತಿಯಿಂದ ಹೊರ ಬಂದು ನೆಗಟಿವ್ ಆಗಿದ್ದಾರೆ. ವೈದ್ಯರ ಸಲಹೆ ಜೊತೆಗೆ ಮಾನಸಿಕ ಧೈರ್ಯವೇ ಕೊರೊನಾಗೆ ಮದ್ದು ಎನ್ನುವುದು ಕುಮಾನಿ ಕುಟುಂಬದ ಅಭಿಪ್ರಾಯವಾಗಿದೆ.

ಇದನ್ನೂ ಓದಿ

ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ.. ಸೂಚಿಸಿದ್ರೂ ಕ್ರಮ ಕೈಗೊಂಡಿಲ್ಲ ಎಂದು ಶಾಸನ ಎಸ್.ರಾಮಪ್ಪ ಕಿಡಿ

ಹಾವೇರಿ: ಮಳೆರಾಯನ ಅವಾಂತರಕ್ಕೆ ಕೆರೆಯಂತಾದ ಮೆಣಸಿನಕಾಯಿ ಬೆಳೆದ ಜಮೀನು

(Coronavirus infection for all members of single family but All are free from corona infection in Vijayapura)