AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸೈನಿಕನಿಗೆ ಕೊರೊನಾ ಕಾಲದಲ್ಲಿ ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.. ಕಮಾಂಡೋ ಹಾಸ್ಪಿಟಲ್ ಸಹ ನೆರವಿಗೆ ಬರಲಿಲ್ಲ

Bangalore Commando Hospital: ಒಬ್ಬ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಇಷ್ಟೆಲ್ಲ ಹಾಸ್ಪಿಟಲ್​ಗಳಿಗೆ ಸುತ್ತಾಡಿಸಿದ್ದಾರೆ. ಇಷ್ಟೆಲ್ಲ ಮಾಡಿದರೂ ಮಾಜಿ ಸೈನಿಕನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಸ್ನೇಹಿತ ಗಂಗಾಧರಯ್ಯ ವ್ಯಥೆಪಟ್ಟಿದ್ದಾರೆ. ದೇಶ ಕಾಯುವ ಸೈನಿಕನಿಗೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಎಂದು ಸ್ನೇಹಿತ ಸಾವನಪ್ಪಿದ ಬಳಿಕ ಸ್ನೇಹಿತ ಹಾಗೂ ಮಾಜಿ ಸೈನಿಕ ಗಂಗಾಧರಯ್ಯ ವಿಡಿಯೋ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.

ಮಾಜಿ ಸೈನಿಕನಿಗೆ ಕೊರೊನಾ ಕಾಲದಲ್ಲಿ ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.. ಕಮಾಂಡೋ ಹಾಸ್ಪಿಟಲ್  ಸಹ ನೆರವಿಗೆ ಬರಲಿಲ್ಲ
ಮಾಜಿ ಸೈನಿಕನಿಗೆ ಕೊರೊನಾ ಕಾಲದಲ್ಲಿ ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.. ಕಮಾಂಡೋ ಹಾಸ್ಪಿಟಲ್ ಸಹ ನೆರವಿಗೆ ಬರಲಿಲ್ಲ
ಸಾಧು ಶ್ರೀನಾಥ್​
|

Updated on: May 27, 2021 | 11:05 AM

Share

ಬೆಂಗಳೂರು: ಯುದ್ಧ ಕಾಲದಲ್ಲಿ ದೇಶವನ್ನು ಕಾಪಾಡಿಕೊಂಡು ಬಂದಿರುವ ಮಾಜಿ ಸೈನಿಕನಿಗೆ ಕೊರೊನಾ ಕಾಲದಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ. ಮೊನ್ನೆ ಎಲೆಕ್ಟ್ರಾನಿಕ್ ಸಿಟಿ ಬಡಾವಣೆಯೊಂದರ ರಸ್ತೆಯಲ್ಲಿ ರಮೇಶ್​ ಬಾಬು ಕೆ ಎಂಬ ಮಾಜಿ ಸೈನಿಕನಿಗೆ ಅಪಘಾತವಾಗಿದೆ. ಅಪಘಾತ ಆದ ಬಳಿಕ ಸ್ಥಳೀಯ ಸ್ಪರ್ಶ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಲಾಗಿದೆ. ಅಪಘಾತಕ್ಕೀಡಾದ ಆ ಮಾಜಿ ಸೈನಿಕನಿಗೆ ಆತನ ಸ್ನೇಹಿತ ಹಾಗೂ ಮಾಜಿ ಸೈನಿಕ ಗಂಗಾಧರಯ್ಯ ಅವರು ಸ್ಪರ್ಶ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿಸಿದ್ದಾರೆ. ಅಲ್ಲಿಂದ ಮುಂದೆ ನಡೆದಿದ್ದೆಲ್ಲ ಅಮಾನವೀಯ, ಅಕ್ಷಮ್ಯ.

ಅಡ್ಮಿಟ್ ಆಗಿ ಒಂದು ದಿನ ಆಗಿರಲ್ಲ. ಮಾಜಿ ಸೈನಿಕರಿಗೆ ಮೂರು ಲಕ್ಷಕ್ಕಿಂತ ಹೆಚ್ಚು ಮೊತ್ತದ ಬಿಲ್ ನೀಡಿದೆ ಇದೇ ಸ್ಪರ್ಶ ಹಾಸ್ಪಿಟಲ್. ಹಾಗಾಗಿ ಅಲ್ಲಿ ಬಿಲ್ ಜಾಸ್ತಿ ಆಗ್ತಿದೆ ಎಂದು ತಿಳಿದು ರಮೇಶ್​ ಬಾಬು ಸ್ನೇಹಿತ, ಮತ್ತೋರ್ವ ಮಾಜಿ ಸೈನಿಕ ಗಂಗಾಧರಯ್ಯ ಅವರು ಫೋನ್​ ಮಾಡಿ, ಕಮಾಂಡೋ ಹಾಸ್ಪಿಟಲ್ ಮೊರೆಹೋಗಿದ್ದಾರೆ. ಮೊದಲಿಗೆ ಕಮಾಂಡೋ ಹಾಸ್ಪಿಟಲ್ ನವರು ಬನ್ನಿ ಎಂದು ಹೇಳಿದ್ದಾರೆ. ಹೀಗಾಗಿ ಕಮಾಂಡೋ ಹಾಸ್ಪಿಟಲ್ ಗೆ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಸ್ನೇಹಿತ ಗಂಗಾಧರಯ್ಯ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿಗೆ ಹೋದ ಮೇಲೆ.. ಇಲ್ಲ ಮೊದಲಿಗೆ ಸರ್ವೀಸ್ ನಲ್ಲಿ ಇರುವವರಿಗೆ ಮಾತ್ರ ಇಲ್ಲಿ ಅಡ್ಮಿಟ್ ಮಾಡಿಕೊಳ್ಳಲು ಅವಕಾಶ ಇರೋದು. ಅದಿಲ್ಲದಿದ್ದರೆ ಕೋವಿಡ್ ಇದ್ದವರಿಗೆ ಅಡ್ಮಿಟ್ ಮಾಡಿಕೊಳ್ಳುತ್ತೇವೆ. ನಿಮ್ಮದು ನಾನ್-ಕೋವಿಡ್ ಕೇಸ್​. ಹೀಗಾಗಿ ECHS ಇರುವ ಹಾಸ್ಪಿಟಲ್ ಗೆ ಹೋಗಿ ಎಂದು ಖುದ್ದು ಸೇನಾ ಆಸ್ಪತ್ರೆಯಲ್ಲಿ ಹೇಳಿದ್ದಾರೆ.

ಅನ್ಯ ಮಾರ್ಗವಿಲ್ಲದೆ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಕರೆದುಕೊಂಡು ಬೇರೆ ಬೇರೆ ಖಾಸಗಿ ಹಾಸ್ಪಿಟಲ್ ಗಳಿಗೆ ಸುತ್ತಾಡಿದ್ದಾರೆ ಸ್ನೇಹಿತ ಗಂಗಾಧರಯ್ಯ. ಎಂ ಎಸ್​ ರಾಮಯ್ಯ ಆಸ್ಪತ್ರೆ, ಅದಾದಮೇಲೆ ಮಣಿಪಾಲ್ ಆಸ್ಪತ್ರೆ ಮತ್ತು ವಿಕ್ರಮ್ ಖಾಸಗಿ ಹಾಸ್ಪಿಟಲ್ ಗೆಲ್ಲಾ ಸುತ್ತಾಡಿದ್ದಾರೆ. ಆದರೆ ಎಲ್ಲೂ ಬೆಡ್ ಇಲ್ಲವೆಂದು ಪೆಶೆಂಟ್ ಗೆ ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ.

ಕೊನೆಗೆ ಮತ್ತೆ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಕಮಾಂಡೋ ಹಾಸ್ಪಿಟಲ್ ಗೆ ಸ್ನೇಹಿತ ಗಂಗಾಧರಯ್ಯ ಕರೆದುಕೊಂಡು ಬಂದಿದ್ದಾರೆ. ಕೊನೆಗೂ ಅಲ್ಲಿ ಕೆಲ ಸಮಯ ಚಿಕಿತ್ಸೆ ನೆಪದಲ್ಲಿ ಮಾಜಿ ಸೈನಿಕನನ್ನು (ಗಾಯಾಳು) ಪರಿಶೀಲನೆ ಮಾಡಲಾಗಿ, ಆತ ಸಾವನಪ್ಪಿದ್ದಾರೆ, ವಾಪಸ್ ಹೋಗಿ ಎಂದು ಸೇನಾ ಆಸ್ಪತ್ರೆಯವರು ಹೇಳಿದ್ದಾರೆ.

ಒಬ್ಬ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಇಷ್ಟೆಲ್ಲ ಹಾಸ್ಪಿಟಲ್​ಗಳಿಗೆ ಸುತ್ತಾಡಿಸಿದ್ದಾರೆ. ಇಷ್ಟೆಲ್ಲ ಮಾಡಿದರೂ ಮಾಜಿ ಸೈನಿಕನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಸ್ನೇಹಿತ ಗಂಗಾಧರಯ್ಯ ವ್ಯಥೆಪಟ್ಟಿದ್ದಾರೆ. ದೇಶ ಕಾಯುವ ಸೈನಿಕನಿಗೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಎಂದು ಸ್ನೇಹಿತ ಸಾವನಪ್ಪಿದ ಬಳಿಕ ಸ್ನೇಹಿತ ಹಾಗೂ ಮಾಜಿ ಸೈನಿಕ ಗಂಗಾಧರಯ್ಯ ವಿಡಿಯೋ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.

(Bangalore Commando Hospital also fails to treat ex serviceman ramesh babu k latter he succumbs to injuries)

ಸರ್​.. ನಾನು ಯೋಧ.. ಕಾರ್ಗಿಲ್​ನಲ್ಲಿ ಯುದ್ಧ ಮಾಡಿದ್ರೂ ಇಷ್ಟು ನೋವು ಆಗಿರಲಿಲ್ಲ | ಮೃತರ ಸಂಬಂಧಿಕರ ಗೋಳು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ