AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತರ ಎದುರೇ ಮೃತರ ಶವಗಳ ಪ್ಯಾಕ್; ಹುಬ್ಬಳ್ಳಿಯ ಕಿಮ್ಸ್ ಸಿಬ್ಬಂದಿಯಿಂದ ಎಡವಟ್ಟು

ವಾರ್ಡುಗಳಲ್ಲಿ ಸಾವನ್ನಪ್ಪುವ ಸೋಂಕಿತರ ಮೃತದೇಹಗಳನ್ನು ಬೇರೆ ಕೊಠಡಿಗಳಲ್ಲಿ ತೆಗೆದುಕೊಂಡು ಹೋಗಿ ಅಲ್ಲಿ ಪ್ಯಾಕ್ ಮಾಡಿ ಆ ನಂತರ ಅಂತ್ಯಸಂಸ್ಕಾರಕ್ಕೆ ಕಳುಹಿಸಬೇಕು. ಆದರೆ ಸೋಂಕಿತರ ಕಣ್ಣು ಮುಂದೆಯೇ ಶವಗಳನ್ನು ಪ್ಯಾಕ್ ಮಾಡುವ ಮೂಲಕ ಧೈರ್ಯ ಕುಗ್ಗಿಸುವ ಕೆಲಸ ನಡೆದಿದೆ.

ಕೊರೊನಾ ಸೋಂಕಿತರ ಎದುರೇ ಮೃತರ ಶವಗಳ ಪ್ಯಾಕ್; ಹುಬ್ಬಳ್ಳಿಯ ಕಿಮ್ಸ್ ಸಿಬ್ಬಂದಿಯಿಂದ ಎಡವಟ್ಟು
ಕಿಮ್ಸ್ ಆಸ್ಪತ್ರೆ
sandhya thejappa
|

Updated on:May 27, 2021 | 11:49 AM

Share

ಹುಬ್ಬಳ್ಳಿ: ಕೊರೊನಾ ನಡುವೆ ಎಷ್ಟು ಜಾಗೃತಿಯಿಂದ ಇದ್ದರೂ ಸಾಲದು. ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದ್ದಕ್ಕಿಂದ ಆತ್ಮಸ್ಥೈರ್ಯ ಕಳೆದುಕೊಂಡು ಮೃತಪಡುತ್ತಿದ್ದಾರೆ. ಮಹಾಮಾರಿ ಕೊರೊನಾ ಸೋಂಕಿಗೆ ಹೆದರಿ ಧೈರ್ಯವನ್ನು ಕಳೆದುಕೊಳ್ಳುವ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಆದರೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತರ ಆತ್ಮಸ್ಥೈರ್ಯವನ್ನೇ ಕುಗ್ಗಿಸುವಂತಹ ಕೆಲಸ ನಡೆದು ಹೋಗಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವವನ್ನು ಸೋಂಕಿತರ ಮುಂದೆ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ಪ್ಯಾಕ್ ಮಾಡಿದ್ದಾರೆ. ಸೋಂಕಿತರ ವಾರ್ಡ್​ನಲ್ಲೇ ಆಸ್ಪತ್ರೆ ಸಿಬ್ಬಂದಿ ಕೊವಿಡ್​ನಿಂದ ಮೃತಪಟ್ಟವರ ಶವವನ್ನು ಪ್ಯಾಕ್ ಮಾಡುವ ಮೂಲಕ ನಿರ್ಲಕ್ಷ್ಯ ಮೆರೆದಿದ್ದಾರೆ. ಶವಗಳನ್ನು ಪ್ಯಾಕ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಿಮ್ಸ್ ಸಿಬ್ಬಂದಿ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕ ಕಾಂಗ್ರೆಸ್ ಟ್ವೀಟ್ ವಾರ್ಡುಗಳಲ್ಲಿ ಸಾವನ್ನಪ್ಪುವ ಸೋಂಕಿತರ ಮೃತದೇಹಗಳನ್ನು ಬೇರೆ ಕೊಠಡಿಗಳಲ್ಲಿ ತೆಗೆದುಕೊಂಡು ಹೋಗಿ ಅಲ್ಲಿ ಪ್ಯಾಕ್ ಮಾಡಿ ಆ ನಂತರ ಅಂತ್ಯಸಂಸ್ಕಾರಕ್ಕೆ ಕಳುಹಿಸಬೇಕು. ಆದರೆ ಸೋಂಕಿತರ ಕಣ್ಣು ಮುಂದೆಯೇ ಶವಗಳನ್ನು ಪ್ಯಾಕ್ ಮಾಡುವ ಮೂಲಕ ಧೈರ್ಯ ಕುಗ್ಗಿಸುವ ಕೆಲಸ ನಡೆದಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.

ಒಬ್ಬರು ಕೇಂದ್ರ ಮಂತ್ರಿ, ಮತ್ತೊಬ್ಬರು ರಾಜ್ಯ ಮಂತ್ರಿ ಪ್ರತಿನಿಧಿಸುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಎಂದು ಲೇವಡಿ ಮಾಡಿರುವ ರಾಜ್ಯ ಕಾಂಗ್ರೆಸ್, ಭಯ ಹೆಚ್ಚಿಸುವ ರೀತಿಯಲ್ಲಿ ಸೋಂಕಿತರ ಎದುರೇ ಶವಕ್ಕೆ ಪ್ಲಾಸ್ಟಿಕ್ ಪ್ಯಾಕಿಂಗ್ ಮಾಡಲಾಗುತ್ತಿದೆ. ಪಿಪಿಇ ಕಿಟ್ ಸಿಬ್ಬಂದಿಗೂ ಇಲ್ಲ. ಶವಕ್ಕೂ ಇಲ್ಲ. ಇದೇನಾ ನಿಮ್ಮ ಸಾಧನೆ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ

ಕರ್ನಾಟಕದ 8 ಜಿಲ್ಲೆಗಳಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ರಾಜ್ಯದ ಸರಾಸರಿ ಪ್ರಮಾಣಕ್ಕಿಂತಲೂ ಕಡಿಮೆ

ಹಣ ನೀಡಿಲ್ಲ ಎಂದು ಪಾರ್ಶ್ವವಾಯು ಪೀಡಿತ ತಂದೆ ಮೇಲೆ ಕೊಡಲಿಯಿಂದ ಹಲ್ಲೆ.. ಮಗ ಅರೆಸ್ಟ್

(KIMS Hospital staff at Hubli have packed the bodies of the deceased in front of corona infected)

Published On - 11:48 am, Thu, 27 May 21