ಕೋಲಾರ: ಬೀದಿ ಬೀದಿ ತಿರುಗಿ ಹಸಿದವರ ಹಸಿವು ನೀಗಿಸಲು ಮುಂದಾದ ಸ್ನೇಹಿತರ ಗುಂಪು

ಈ ತಂಡ ನಿತ್ಯ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿರುವ ಸುಮಾರು 500 ಕ್ಕೂ ಹೆಚ್ಚು ಜನರಿಗೆ ಊಟ ನೀಡುತ್ತಿದೆ. ರಾಜ್ಯ ಸರ್ಕಾರ ಏಪ್ರಿಲ್ 29 ರಂದು ಲಾಕ್​ಡೌನ್​ ಘೋಷಣೆ ಮಾಡಿದ ನಂತರ ಈ ತಂಡ ತನ್ನ ಸಮಾಜ ಸೇವೆಯನ್ನು ಆರಂಭಿಸಿ ಸತತ 25 ದಿನಗಳಿಂದಲೂ ಆಹಾರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಕೋಲಾರ: ಬೀದಿ ಬೀದಿ ತಿರುಗಿ ಹಸಿದವರ ಹಸಿವು ನೀಗಿಸಲು ಮುಂದಾದ ಸ್ನೇಹಿತರ ಗುಂಪು
ಊಟವನ್ನು ನೀಡುತ್ತಿರುವ ಸ್ನೇಹಿತರ ಗುಂಪು
Follow us
sandhya thejappa
|

Updated on: May 27, 2021 | 9:47 AM

ಕೋಲಾರ: ಕೊರೊನಾ ಸಂಕಷ್ಟದ ಕಾಲದಲ್ಲಿ ಸೋಂಕು ಹತ್ತಿರ ಸುಳಿಯದಂತೆ ಜೀವ ಉಳಿಸಿಕೊಂಡರೆ ಸಾಕು ಎಂದು ಮನೆಯ ಬಾಗಿಲು ಹಾಕಿಕೊಂಡು ಒಳಗೆ ಕೂತವರೇ ಹೆಚ್ಚು. ಈ ನಡುವೆ ಜಿಲ್ಲೆಯ ಸ್ನೇಹಿತರ ಗುಂಪೊಂದು ಸಂಷಕ್ಟದ ಕಾಲದಲ್ಲಿ ಹಸಿವಿನಿಂದ ಜನ ಯಾರು ಸಾಯಬಾರದು ಎಂದು ಬೀದಿ ಬೀದಿ ತಿರುಗಿ ಹಸಿದವರ ಹಸಿವು ನೀಗಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಕೊರೊನಾ ಸಂಕಷ್ಟ ಇಡೀ ದೇಶವನ್ನೇ ಹಿಂಸಿಸುತ್ತಿದೆ. ಈ ನಡುವೆ ತಮಗೆ ಏನು ಆಗಬಾರದು ಎಂದು ಮನೆ ಸೇರಿಕೊಂಡವರೇ ಹೆಚ್ಚು. ಆದರೆ ಬಂಗಾರಪೇಟೆ ಯುವಕರ ತಂಡ, ಯಾರೊಬ್ಬರು ಹಸಿವಿನಿಂದ ಸಾಯಬಾರದು ಎಂದು ಪಣ ತೊಟ್ಟು ನಿತ್ಯ ಸಾವಿರಾರು ಜನರಿಗೆ ಅನ್ನ ನೀಡುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

ಈ ತಂಡ ನಿತ್ಯ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿರುವ ಸುಮಾರು 500 ಕ್ಕೂ ಹೆಚ್ಚು ಜನರಿಗೆ ಊಟ ನೀಡುತ್ತಿದೆ. ರಾಜ್ಯ ಸರ್ಕಾರ ಏಪ್ರಿಲ್ 29 ರಂದು ಲಾಕ್​ಡೌನ್​ ಘೋಷಣೆ ಮಾಡಿದ ನಂತರ ಈ ತಂಡ ತನ್ನ ಸಮಾಜ ಸೇವೆಯನ್ನು ಆರಂಭಿಸಿ ಸತತ 25 ದಿನಗಳಿಂದಲೂ ಆಹಾರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ರತಿದಿನ ಒಂದು ಹೊತ್ತಿಗೆ ಸುಮಾರು 250 ರಿಂದ 300 ಮಂದಿಗೆ ತಿಂಡಿ ಮತ್ತು ಊಟವನ್ನು ನೀಡುತ್ತಿದ್ದಾರೆ.

ಕೊರೊನಾ ಆರಂಭದಿಂದಲೂ ಒಗ್ಗೂಡಿದ ಸ್ನೇಹಿತರ ತಂಡ ತಮ್ಮ ಪಟ್ಟಣದ ನಿರ್ಗತಿಕರಿಗೆ ಆಹಾರ ಕೊರತೆ ಕಾಡಲು ಬಿಡಲಿಲ್ಲ. ಕಳೆದ ವರ್ಷ ಮೊದಲನೇ ಅಲೆಯಲ್ಲಿಯೂ ತಮ್ಮ ಸಮಾಜ ಸೇವೆಯನ್ನು ಮಾಡಿದ್ದ ಈ ತಂಡ ಈ ಭಾರಿಯೂ ಅದನ್ನು ಮುಂದುವರೆಸಿದೆ. ಪ್ರತಿದಿನ ಸ್ನೇಹಿತರೆಲ್ಲ ಯಾವುದೇ ಕೆಲಸವಿರಲಿ ಅದನ್ನು ಬದಿಗೊತ್ತಿ ಒಂದೆಡೆ ಸೇರುತ್ತಾರೆ. ಪ್ರತಿದಿನ ತಿಂಡಿ ಮತ್ತು ಮಧ್ಯಾಹ್ನ ಅನ್ನ, ಪಲ್ಯ, ಸಾರು ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ತಾವೇ ಬೈಕ್​ಗಳಲ್ಲಿ ಊಟದ ಪೊಟ್ಟಣಗಳನ್ನು ಇಟ್ಟುಕೊಂಡು ಬೀದಿ ಬೀದಿ ಸುತ್ತುತ್ತಾರೆ.

ಬೀದಿ ಬದಲಿಯಲ್ಲಿ ಮಲಗಿರುವ ಜನರಿಗೆ, ಬಿಕ್ಷುಕರಿಗೆ, ಅನಾಥರು, ನಿರ್ಗತಿಕರನ್ನು ಹುಡುಕಿ ಹುಡಕಿ ಊಟದ ಪಾಕೆಟ್ಗಳನ್ನು ನೀಡುತ್ತಾರೆ. ಜೊತೆಗೆ ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ಮೂರು ಹೊತ್ತಿನ ಊಟವನ್ನು ಕೊಡುತಿದ್ದಾರೆ. ಇನ್ನು ರಾಜ್ಯದಲ್ಲಿ ಎಷ್ಟು ದಿನ ಲಾಕ್​ಡೌನ್​ ಆಗಲಿದೆಯೋ ಅಷ್ಟು ದಿನಗಳು ಸಹ ಈ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮನ್ನು ನಂಬಿರುವಂತಹ ಜನರನ್ನು ಕೈ ಬಿಡುವುದಿಲ್ಲ ಎಂದು ಸ್ನೇಹಿತರು ಹೇಳುತ್ತಿದ್ದಾರೆ.

ಇದನ್ನೂ ಓದಿ

ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ.. ಸೂಚಿಸಿದ್ರೂ ಕ್ರಮ ಕೈಗೊಂಡಿಲ್ಲ ಎಂದು ಶಾಸನ ಎಸ್.ರಾಮಪ್ಪ ಕಿಡಿ

ಹಾವೇರಿ: ಮಳೆರಾಯನ ಅವಾಂತರಕ್ಕೆ ಕೆರೆಯಂತಾದ ಮೆಣಸಿನಕಾಯಿ ಬೆಳೆದ ಜಮೀನು

(group of friends are feeding the needy in kolar)