AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ.. ಸೂಚಿಸಿದ್ರೂ ಕ್ರಮ ಕೈಗೊಂಡಿಲ್ಲ ಎಂದು ಶಾಸನ ಎಸ್.ರಾಮಪ್ಪ ಕಿಡಿ

ಕೊರೊನಾ ಲಾಕ್ಡೌನ್ ವೇಳೆ ಹರಿಹರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದಕ್ಕೆ ಸಾಕ್ಷಿಯಾಗಿ ರಾಜನಹಳ್ಳಿಯಲ್ಲಿ ಗ್ರಾಮಸ್ಥರು ಟಿಪ್ಪರ್ ತಡೆದು ಆಕ್ರೋಶ ಹೊರ ಹಾಕಿದ್ದರು. ಈ ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 10 ಟಿಪ್ಪರ್‌ಗಳನ್ನು ರಾಮಪ್ಪ ಬೆಂಬಲಿಗರು ವಶಕ್ಕೆ ಪಡೆದಿದ್ದರು.

ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ.. ಸೂಚಿಸಿದ್ರೂ ಕ್ರಮ ಕೈಗೊಂಡಿಲ್ಲ ಎಂದು ಶಾಸನ ಎಸ್.ರಾಮಪ್ಪ ಕಿಡಿ
ಶಾಸನ ಎಸ್.ರಾಮಪ್ಪ
ಆಯೇಷಾ ಬಾನು
|

Updated on:May 27, 2021 | 9:39 AM

Share

ದಾವಣಗೆರೆ: ಜಿಲ್ಲೆಯ ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಆರೋಪ ಮಾಡಿದ್ದು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದರು ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ.

ಕೊರೊನಾ ಲಾಕ್ಡೌನ್ ವೇಳೆ ಹರಿಹರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದಕ್ಕೆ ಸಾಕ್ಷಿಯಾಗಿ ರಾಜನಹಳ್ಳಿಯಲ್ಲಿ ಗ್ರಾಮಸ್ಥರು ಟಿಪ್ಪರ್ ತಡೆದು ಆಕ್ರೋಶ ಹೊರ ಹಾಕಿದ್ದರು. ಈ ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 10 ಟಿಪ್ಪರ್‌ಗಳನ್ನು ರಾಮಪ್ಪ ಬೆಂಬಲಿಗರು ವಶಕ್ಕೆ ಪಡೆದಿದ್ದರು.

ಪೊಲೀಸರೇ ಮರಳು ದಂಧೆ ನಡೆಸುತ್ತಿದ್ದಾರೆ ಎಂದು ಶಾಸಕ ಎಸ್ ರಾಮಪ್ಪ ಆರೋಪ ಮಾಡಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದರು. ಆದರೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಂದಾಯ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆಂದು ಕಿಡಿಕಾರಿದ್ದಾರೆ. ಲಾಕ್ ಡೌನ್ ಟೈಮ್ನಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ ಇನ್ನು ಹರಿಹರ ತಾಲೂಕಿನಲ್ಲಿ ದಿನದಿಂದ ದಿನ್ಕಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು ಹರಿಹರ ತಾಲೂಕಿನ ಹಣಗವಾಡಿ ಹಾಗೂ ಕಡರನಾಯಕನಹಳ್ಳಿ ತಲಾ 15 ರಿಂದ 20 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಆದರೆ ದಾವಣಗೆರೆ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಮಾಹಿತಿ ನೀಡ್ತಿಲ್ಲ. ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೆಲಸ ಮಾಡುತ್ತಿಲ್ಲ. ಕೊರೊನಾ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: RRR ಫೈಟಿಂಗ್​ ದೃಶ್ಯದಲ್ಲಿ ರಾಜಮೌಳಿ ಹೊಸ ಪ್ರಯೋಗ; ತಂದೆಯಿಂದಲೇ ಬಯಲಾದ ಸೀಕ್ರೆಟ್​ ಏನು?

Published On - 9:32 am, Thu, 27 May 21