ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಒಟ್ಟು 48,781 ಜನರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು 592 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 21,376 ಜನರಿಗೆ ಸೋಂಕು ತಗುಲಿದೆ. 346 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 18,38,885ಕ್ಕೆ (18.38 ಲಕ್ಷ) ಏರಿಕೆಯಾಗಿದೆ. ಸೋಂಕಿತರ ಪೈಕಿ 12,84,420 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ 17,804 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟು 5,36,641 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 346 ಮಂದಿ ಮೃತಪಟ್ಟಿದ್ದಾರೆ. ಸೋಂಕಿನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 7,491ಕ್ಕೆ ಏರಿಕೆಯಾಗಿದೆ. ನಗರದಲ್ಲಿ 3,41,978ಕ್ಕೆ ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿಂದು ಹೊಸದಾಗಿ 48,781 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ 21,376, ತುಮಕೂರು 3040, ಹಾಸನ 2422, ಮೈಸೂರು 2246, ಕಲಬುರಗಿ 1722, ದಕ್ಷಿಣ ಕನ್ನಡ 1633, ಬಳ್ಳಾರಿ 1284, ಮಂಡ್ಯ 1110, ಉಡುಪಿ 976, ಬೆಳಗಾವಿ 965, ಬೆಂಗಳೂರು ಗ್ರಾಮಾಂತರ 959, ಧಾರವಾಡ 942, ಉತ್ತರ ಕನ್ನಡ 833, ಕೋಲಾರ 828, ರಾಯಚೂರು 762, ಚಿಕ್ಕಬಳ್ಳಾಪುರ 734, ಚಾಮರಾಜನಗರ 725, ಯಾದಗಿರಿ 714, ಬಾಗಲಕೋಟೆ 661, ಚಿಕ್ಕಮಗಳೂರು 632, ಕೊಡಗು 622, ಶಿವಮೊಗ್ಗ 563, ದಾವಣಗೆರೆ 538, ಕೊಪ್ಪಳ 523, ರಾಮನಗರ 501, ವಿಜಯಪುರ 445, ಬೀದರ್ 437, ಗದಗ 248, ಹಾವೇರಿ 214, ಚಿತ್ರದುರ್ಗ 126.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 592 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ಅತಿಹೆಚ್ಚು ಅಂದರೆ 346 ಜನರು ಮೃತಪಟ್ಟಿದ್ದಾರೆ. ಬಳ್ಳಾರಿ 24, ಮೈಸೂರು 22, ಹಾಸನ 20, ಕಲಬುರಗಿ 19, ತುಮಕೂರು 15, ಶಿವಮೊಗ್ಗ 14, ಉತ್ತರ ಕನ್ನಡ 12, ಬೆಂಗಳೂರು ಗ್ರಾಮಾಂತರ 12, ಮಂಡ್ಯ 11, ಕೊಡಗು, ರಾಮನಗರ ಜಿಲ್ಲೆಯಲ್ಲಿ ತಲಾ 10, ಹಾವೇರಿ 9, ಬಾಗಲಕೋಟೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತಲಾ 7 ಮಂದಿ, ಉಡುಪಿ, ವಿಜಯಪುರ 6, ಬೀದರ್ 5, ಚಿಕ್ಕಮಗಳೂರು, ರಾಯಚೂರು 4. ಗದಗ 3, ದಾವಣಗೆರೆ, ಕೋಲಾರ 2, ಯಾದಗಿರಿ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 17,804 ಜನರು ಸಾವನ್ನಪ್ಪಿದ್ದಾರೆ.
ಇಂದಿನ 07/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/KlWYvWjNMg @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/yYeBrR2wii
— K’taka Health Dept (@DHFWKA) May 7, 2021
(Coronavirus Karnataka Update 48781 infections and 346 deaths due to covid on may 7)
ಇದನ್ನೂ ಓದಿ: Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ
ಇದನ್ನೂ ಓದಿ: Explainer: ಲಸಿಕೆಗೆ ಬೇಡಿಕೆ ಹೆಚ್ಚು, ಪೂರೈಕೆಗೆ ಹಲವು ಸಮಸ್ಯೆ; ಉತ್ಪಾದನೆ ಹೆಚ್ಚಿಸಲು ಸರ್ಕಾರದ ಮುಂದಿರುವ ಆಯ್ಕೆಗಳೇನು?
Published On - 9:14 pm, Fri, 7 May 21