ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆಗೆ ಯತ್ನ: ಪತಿ ರಾಕೇಶ್ ಪಾಟೀಲ್ ಸ್ಥಳದಲ್ಲೇ ಸಾವು
ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆಗೆ ಯತ್ನ ಮಾಡಿದ್ದು, ಪತಿ ರಾಕೇಶ್ ಪಾಟೀಲ್ ಸಾವನ್ನಪ್ಪಿದ್ದಾರೆ. ಈ ಘಟನೆ 1ನೇ ರೈಲ್ವೆ ಗೇಟ್ ಬಳಿ ನಡೆದಿದೆ.
ಬೆಳಗಾವಿ: ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆಗೆ ಯತ್ನ ಮಾಡಿದ್ದು, ಪತಿ ರಾಕೇಶ್ ಪಾಟೀಲ್ ಸಾವನ್ನಪ್ಪಿದ್ದಾರೆ. ಈ ಘಟನೆ 1ನೇ ರೈಲ್ವೆ ಗೇಟ್ ಬಳಿ ನಡೆದಿದೆ.
ಮೃತ ದುರ್ದೈವಿ ರಾಕೇಶ್ ಪಾಟೀಲ್ ಹಿಂಡಲಗಾ ನಿವಾಸಿ. ದಂಪತಿಯಿಬ್ಬರೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ದುರಾದೃಷ್ಟವಶಾತ್ ರಾಕೇಶ್ ಸಾವನ್ನಪ್ಪಿದ್ದು, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬೆಳಗಾವಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿ ಸ್ಥಳದಲ್ಲೇ ದುರ್ಮರಣ