Seizure 1994ರಿಂದ 1.15 ಕೋಟಿ ಬಿಲ್ ಬಾಕಿ ಪಾವತಿಸದ್ದಕ್ಕೆ.. ಕಂಪ್ಯೂಟರ್, ಮೇಜು, ಕುರ್ಚಿ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ಕಚೇರಿಯ ಎಲ್ಲಾ ವಸ್ತು ಜಪ್ತಿ!

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡುವಂತೆ ಜನವರಿ 13ರಂದು ಜಿಲ್ಲಾ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು, ಕಚೇರಿಯಲ್ಲಿದ್ದ ಕಂಪ್ಯೂಟರ್, ಮೇಜು, ಕುರ್ಚಿ ಸೇರಿದಂತೆ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಲಾಯಿತು.

Seizure 1994ರಿಂದ 1.15 ಕೋಟಿ ಬಿಲ್ ಬಾಕಿ ಪಾವತಿಸದ್ದಕ್ಕೆ.. ಕಂಪ್ಯೂಟರ್, ಮೇಜು, ಕುರ್ಚಿ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ಕಚೇರಿಯ ಎಲ್ಲಾ ವಸ್ತು ಜಪ್ತಿ!
ಕಂಪ್ಯೂಟರ್, ಮೇಜು, ಕುರ್ಚಿ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ಕಚೇರಿಯ ಎಲ್ಲಾ ವಸ್ತು ಜಪ್ತಿ

Updated on: Feb 09, 2021 | 7:55 PM

ಗದಗ: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡುವಂತೆ ಜನವರಿ 13ರಂದು ಜಿಲ್ಲಾ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು, ಕಚೇರಿಯಲ್ಲಿದ್ದ ಕಂಪ್ಯೂಟರ್, ಮೇಜು, ಕುರ್ಚಿ ಸೇರಿದಂತೆ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಲಾಯಿತು.

ನ್ಯಾಯಾಲಯದಿಂದ ಈ ಆದೇಶ ಹೊರಬೀಳಲು ಕಾರಣವೇನು?
ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದ ಕೆರೆಗೆ 1994ರಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದ ಗುತ್ತಿಗೆದಾರ ಆರ್.ಎನ್.ನಾಯಕ ಇಲಾಖೆಗೆ ಕೆಲಸದ ಬಿಲ್​ ನೀಡಿದ್ದರು. ಕಾಮಗಾರಿಗೆ ತಗುಲಿದ್ದ 1.15 ಕೋಟಿ ವೆಚ್ಚದ ಬಿಲ್​ನ ನಾಯಕ ಇಲಾಖೆಗೆ ನೀಡಿದ್ದರು.

ಆದರೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಬಿಲ್​ ಬಾಕಿ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ, ಕೋರ್ಟ್​ನಿಂದ ಆದೇಶ ಹೊರಬಿದ್ದಿದ್ದು ಆರ್.ಎನ್.ನಾಯಕ​​ಗೆ 2.99 ಕೋಟಿ ರೂ. ಪಾವತಿಸುವಂತೆ ಇಲಾಖೆಗೆ ಆದೇಶಿಸಲಾಗಿತ್ತು.

ಹಾಗಾಗಿ, ಇಂದು ಕೋರ್ಟ್​ ಆದೇಶದಂತೆ ಸಣ್ಣ ನೀರಾವರಿ ಇಲಾಖೆಯ ಕಚೇರಿಯಲ್ಲಿ ಕಂಪ್ಯೂಟರ್, ಮೇಜು, ಕುರ್ಚಿ ಸೇರಿದಂತೆ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಯಾರೂ ‌ಕೂತುಕೊಳ್ಳಲು ಕುರ್ಚಿಗಳೇ ಇರದ ಹಾಗೇ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಲಾಯಿತು.

Car Fire ಕಲಾಣ್ಯನಗರ ಫ್ಲೈಓವರ್ ಮೇಲೆ ಚಲಿಸುತ್ತಿದ್ದ ವೇಳೆ.. ಹೊತ್ತಿ ಉರಿದ ಕಾರು