AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ.. ಜಾತ್ರೆ, ರಥೋತ್ಸವ ಸೇರಿ ಧಾರ್ಮಿಕ ಆಚರಣೆಗಳಿಗೆ ಇಲಾಖೆ ಅಸ್ತು

ಮುಜರಾಯಿ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ನಡೆಯುವ ಸೇವೆಗಳಿಗೆ ಇಲಾಖೆ ಅಸ್ತು ಎಂದಿದೆ. ಹೀಗಾಗಿ, ಜಾತ್ರೆ ಮತ್ತು ರಥೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಆಚರಣೆಗಳಿಗೆ ಮುಜರಾಯಿ ಇಲಾಖೆಯಿಂದ ಅನುಮತಿ ಸಿಕ್ಕಿದೆ.

ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ.. ಜಾತ್ರೆ, ರಥೋತ್ಸವ ಸೇರಿ ಧಾರ್ಮಿಕ ಆಚರಣೆಗಳಿಗೆ ಇಲಾಖೆ ಅಸ್ತು
KUSHAL V
|

Updated on: Feb 09, 2021 | 9:13 PM

Share

ಬೆಂಗಳೂರು: ಮುಜರಾಯಿ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ನಡೆಯುವ ಸೇವೆಗಳಿಗೆ ಇಲಾಖೆ ಅಸ್ತು ಎಂದಿದೆ. ಹೀಗಾಗಿ, ಜಾತ್ರೆ ಮತ್ತು ರಥೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಆಚರಣೆಗಳಿಗೆ ಮುಜರಾಯಿ ಇಲಾಖೆಯಿಂದ ಅನುಮತಿ ಸಿಕ್ಕಿದೆ. Muzrai department

ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ಈ ಕುರಿತು ಆದೇಶ ಪ್ರಕಟವಾಗಿದೆ. ಭಕ್ತಾದಿಗಳ ಭಾವನೆಗೆ ಧಕ್ಕೆ ಆಗದಿರಲೆಂಬ ಹಿನ್ನೆಲೆಯಲ್ಲಿ ಇಲಾಖೆ ಅನುಮತಿ ನೀಡಿದೆ.

ಕೊವಿಡ್ ಮಾರ್ಗಸೂಚಿ ಪಾಲಿಸುವ ಷರತ್ತು ಒಳಪಟ್ಟು ಆಯಾ ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ಆಚರಣೆಗೆ ಅವಕಾಶ ನೀಡಲಾಗಿದೆ. ಹಾಗಾಗಿ, ದೇವಸ್ಥಾನಗಳಲ್ಲಿನ ಸೇವೆಗಳು, ಜಾತ್ರೆ ಉತ್ಸವ ಪ್ರಕ್ರಿಯೆ, ಬ್ರಹ್ಮ ರಥೋತ್ಸವ, ಪ್ರಸಾದ ವಿತರಣೆ, ಅನ್ನ ದಾಸೋಹ ಮತ್ತು ಇತರೆ ಪೂಜಾ ಕೈಂಕರ್ಯಗಳನ್ನು ನಡೆಸಲು ಗ್ರೀನ್‌ ಸಿಗ್ನಲ್ ದೊರೆತಿದೆ. ಈ ಬಗ್ಗೆ, ಎಲ್ಲಾ ಜಿಲ್ಲಾ ಡಿ.ಸಿಗಳಿಗೂ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಇಂಥದ್ದೇ ಮೀಸಲಾತಿ ಕೊಡಿ ಎಂದು ಕೇಳಲ್ಲ, ಆದ್ರೆ ಮೀಸಲಾತಿ ಕೊಡಬೇಕು- ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ