AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

School Fees ಟಾರ್ಚರ್​ಗೆ ಬೇಸತ್ತು ವಿದ್ಯಾರ್ಥಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ

ಶಾಲೆ ನೀಡುತ್ತಿದ್ದ ಫೀಸ್ ಟಾರ್ಚರ್​ಗೆ ಬೇಸತ್ತು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ HSR ಲೇಔಟ್​ನ ಸೋಮಸಂದರಪಾಳ್ಯದಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ವಿದ್ಯಾರ್ಥಿಯನ್ನು ಕಂಡ ಆತನ ಪೋಷಕರು ಸಮಯಪ್ರಜ್ಞೆ ಮೆರೆದು ಬಚಾವ್ ಮಾಡಿದ್ದಾರೆ.

School Fees ಟಾರ್ಚರ್​ಗೆ ಬೇಸತ್ತು ವಿದ್ಯಾರ್ಥಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ
ಖಾಸಗಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಪೋಷಕರು
KUSHAL V
|

Updated on:Feb 09, 2021 | 10:19 PM

Share

ಬೆಂಗಳೂರು: ಶಾಲೆ ನೀಡುತ್ತಿದ್ದ ಫೀಸ್ ಟಾರ್ಚರ್​ಗೆ ಬೇಸತ್ತು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ HSR ಲೇಔಟ್​ನ ಸೋಮಸಂದರಪಾಳ್ಯದಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ವಿದ್ಯಾರ್ಥಿಯನ್ನು ಕಂಡ ಆತನ ಪೋಷಕರು ಸಮಯಪ್ರಜ್ಞೆ ಮೆರೆದು ಬಚಾವ್ ಮಾಡಿದ್ದಾರೆ.

10ನೇ ತರಗತಿಯಲ್ಲಿ ಓದುತ್ತಿದ್ದ ಮಗ ನೇಣು ಹಾಕಿಕೊಳ್ಳುವುದನ್ನ ಗಮನಿಸಿದ ಆತನ ಪೋಷಕರು ಬಾಗಿಲು ಹೊಡೆದು ವಿದ್ಯಾರ್ಥಿಯನ್ನು ರಕ್ಷಿಸಿದರು. ಅಂದ ಹಾಗೆ, ವಿದ್ಯಾರ್ಥಿ ಓದುತ್ತಿದ್ದ ಖಾಸಗಿ ಶಾಲೆಯಲ್ಲಿ ಸ್ಕೂಲ್ ಫೀಸ್ ಕಟ್ಟದಿದ್ದಕ್ಕೆ ಕ್ಲಾಸ್ ರೂಂನಲ್ಲಿ ಆತನ ಟೀಚರ್ಸ್ ಪ್ರತಿನಿತ್ಯ ನಿಂದಿಸ್ತಿದ್ದರಂತೆ. ಇದರಿಂದ ಮನನೊಂದ ಬಾಲಕ ಆತ್ಮಹತ್ಯೆಗೆ ಯತ್ನಿಸಿದ.

ಒಟ್ಟು 96 ಸಾವಿರ ಇದ್ದ ಸ್ಕೂಲ್ ಫೀಸ್ ಮೊತ್ತದಲ್ಲಿ ಆತನ ಪೋಷಕರು ಈವರೆಗೆ 37 ಸಾವಿರ ಫೀಸ್ ಕಟ್ಟಿದ್ದರಂತೆ. ಈ ನಡುವೆ, ಇನ್ನುಳಿದ ಫೀಸ್ ಕಟ್ಟುವಂತೆ ಶಾಲೆಯವರು ಪದೇ ಪದೇ ಒತ್ತಡ ಹಾಕ್ತಿದ್ದರು ಎಂದು ಆತನ ಪೋಷಕರು ಆರೋಪಿಸಿದ್ದಾರೆ.

ಹೀಗಾಗಿ, ಮಗನ ಸ್ಥಿತಿ ಕಂಡು ಆತಂಕಗೊಂಡ ಪೋಷಕರು ಖಾಸಗಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ, ಅವರಿಗೆ ಇತರೆ ಪೋಷಕರು ಕೂಡ ಸಾಥ್ ಕೊಟ್ಟರು.

ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧೆಯ ರಕ್ಷಣೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧೆಯನ್ನ ರಕ್ಷಿಣೆ ಮಾಡಿರುವ ಘಟನೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ನಡೆದಿದೆ. ವನಮಾಲಾ‌ ಕುಲಕರ್ಣಿ ಎಂಬ ವೃದ್ಧೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

ಮಧ್ಯಾಹ್ನದಿಂದಲೇ ಮನೆಯಿಂದ ನಾಪತ್ತೆಯಾಗಿದ್ದ ವೃದ್ಧೆ ವನಮಾಲಾ ಬಾವಿಗೆ ಜಿಗಿಯುವುದನ್ನ ಬಾಲಕನೊಬ್ಬ ನೋಡಿದ್ದ. ಹೀಗಾಗಿ, ಅಗ್ನಿಶಾಮಕ ದಳದ ಸಿಬ್ಬಂದಿಗೆ ಬಾಲಕ ಮಾಹಿತಿ ನೀಡಿದ್ದನಂತೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ.

ಸದ್ಯ, ವೃದ್ಧೆ ವನಮಾಲಾ‌ರನ್ನ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾಗಿರಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Car Fire ಕಲಾಣ್ಯನಗರ ಫ್ಲೈಓವರ್ ಮೇಲೆ ಚಲಿಸುತ್ತಿದ್ದ ವೇಳೆ.. ಹೊತ್ತಿ ಉರಿದ ಕಾರು

Published On - 10:17 pm, Tue, 9 February 21