Car Fire ಕಲಾಣ್ಯನಗರ ಫ್ಲೈಓವರ್ ಮೇಲೆ ಚಲಿಸುತ್ತಿದ್ದ ವೇಳೆ.. ಹೊತ್ತಿ ಉರಿದ ಕಾರು
ಚಲಿಸುತ್ತಿದ್ದ ವೇಳೆ ಕಾರೊಂದು ಹೊತ್ತಿ ಉರಿದ ಘಟನೆ ಕಲ್ಯಾಣನಗರದ ಫ್ಲೈಓವರ್ ಮೇಲೆ ನಡೆದಿದೆ. ಫ್ಲೈಓವರ್ ಮೇಲೆ ಕಾರು ತರೆಳುತ್ತಿದ್ದ ವೇಳೆ ಏಕಾಏಕಿ ಹೊತ್ತಿಉರಿದಿತ್ತು.
ಬೆಂಗಳೂರು: ಚಲಿಸುತ್ತಿದ್ದ ವೇಳೆ ಕಾರೊಂದು ಹೊತ್ತಿ ಉರಿದ ಘಟನೆ ಕಲ್ಯಾಣನಗರದ ಫ್ಲೈಓವರ್ ಮೇಲೆ ನಡೆದಿದೆ. ಫ್ಲೈಓವರ್ ಮೇಲೆ ಕಾರು ತರೆಳುತ್ತಿದ್ದ ವೇಳೆ ಏಕಾಏಕಿ ಹೊತ್ತಿಉರಿದಿತ್ತು.
ವಾಹನ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್, ಕೂದಲೆಳೆ ಅಂತರದಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಇನ್ನು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಣ್ಣಗುಂಡಿ ಗ್ರಾಮದಲ್ಲಿ ಪ್ಯಾಸೆಂಜರ್ ವಾಹನದಲ್ಲಿ ಬೆಂಕಿ ಇತ್ತ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಣ್ಣಗುಂಡಿ ಗ್ರಾಮದಲ್ಲಿ ಪ್ಯಾಸೆಂಜರ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ. ಅದೃಷ್ಟವಶಾತ್, ವಾಹನದಲ್ಲಿದ್ದ ಮೂವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಶಿರಾಡಿಯಿಂದ ನೆಲ್ಯಾಡಿಗೆ ಬರುತ್ತಿದ್ದಾಗ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೇ ವಾಹನ ನಿಲ್ಲಿಸಿದ ಚಾಲಕ ಮತ್ತು ಪ್ರಯಾಣಿಕರು ಗಾಡಿಯಿಂದ ಕೆಳಗಿಳಿದರು. ಆಗ, ಕ್ಷಣಾರ್ಧದಲ್ಲೇ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Published On - 7:17 pm, Tue, 9 February 21