BDA ಅಧ್ಯಕ್ಷ – ಆಯುಕ್ತ ಮಧ್ಯೆ ಟಾಕ್ ವಾರ್! ರೈತರ ಸಣ್ಣ ಸೈಟ್ ವಿರುದ್ಧ ‘ಸುಪ್ರೀಂ’ಗೆ ಹೋಗ್ತಾರೆ, ಆದ್ರೆ 500 ಕೋಟಿ ರೂ ಜಾಗದ ಬಗ್ಗೆ ಯಾಕೆ ಹೋಗಿಲ್ಲ?
BDA chairman – BDA commissioner war of words ರೈತರಿಗೆ ಒಂದು ಸಣ್ಣ ಸೈಟ್ ಸಂಬಂಧ ‘ಸುಪ್ರೀಂ’ಗೆ ಹೋಗ್ತಾರೆ. ಆದ್ರೆ 500 ಕೋಟಿ ಜಾಗದ ಬಗ್ಗೆ ಏಕೆ ‘ಸುಪ್ರೀಂ’ಗೆ ಹೋಗಿಲ್ಲ? ಭವಾನಿ ಹೌಸಿಂಗ್ ಸೊಸೈಟಿ ಸಗಟು ಹಂಚಿಕೆ ಹೆಸರಲ್ಲಿ ಅಕ್ರಮ ನಡೆದಿದೆ. ಅತಿದೊಡ್ಡ ಅವ್ಯವಹಾರವಾಗಿದೆ ಎಂದು BDA ಅಧ್ಯಕ್ಷ ವಿಶ್ವನಾಥ್ ಗಮನ ಸೆಳೆದಿದ್ದಾರೆ.
ಬೆಂಗಳೂರು: ಒಂದಲ್ಲಾ ಒಂದು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸದಾ ಸುದ್ದಿಯಲ್ಲಿರುವ BDAನಲ್ಲಿ ಇದೀಗ ಭವಾನಿ ಸೊಸೈಟಿ ಭೂಹಗರಣದ ವಿಚಾರ ಭುಗಿಲೆದ್ದಿದೆ. ಇದು ಪ್ರಾಧಿಕಾರದ ಕಮಿಷನರ್ ಹಾಗೂ ಅಧ್ಯಕ್ಷರ ಮಧ್ಯೆ ಜಟಾಪಟಿಗೂ ಕಾರಣವಾಗಿದೆ. ಈ ಕುರಿತು, BDA ಆಯುಕ್ತ H.R.ಮಹದೇವ್ ವಿರುದ್ಧ BDA ಅಧ್ಯಕ್ಷ S.R.ವಿಶ್ವನಾಥ್ ತಮ್ಮ ಆಕ್ರೋಶ ಹೊರಹಾಕಿ ಸುದ್ದಿಗೋಷ್ಠಿ ನಡೆಸಿದರು. BDA scam
ಏನಿದು ಭವಾನಿ ಹೌಸಿಂಗ್ ಸೊಸೈಟಿ ಭೂಹಗರಣ ಪ್ರಕರಣ? ಭವಾನಿ ಹೌಸಿಂಗ್ ಸೊಸೈಟಿಗೆ ಸಗಟು ಹಂಚಿಕೆಗೆ BDA ಆಯುಕ್ತ ಹೆಚ್.ಆರ್.ಮಹದೇವ್‌ರಿಂದ ಪ್ಲ್ಯಾನ್ ನಡೆದಿದೆ. ರಾತ್ರೋರಾತ್ರಿ ಭವಾನಿ ಸೊಸೈಟಿಗೆ ಭೂ ಹಂಚಿಕೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎಂದು ಕಮಿಷನರ್ ಮಹದೇವ್ ವಿರುದ್ಧ ವಿಶ್ವನಾಥ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ. BDA chairman – BDA commissioner war of words
ಅಂದ ಹಾಗೆ, ಸಗಟು ಭೂಮಿ ಕೇಳಿ 1988ರಲ್ಲಿ ಭವಾನಿ ಹೌಸಿಂಗ್ ಸೊಸೈಟಿಯಿಂದ BDAಗೆ ಅರ್ಜಿ ನೀಡಲಾಗಿತ್ತು. ಆಗ, ಆ ಅರ್ಜಿ ಸ್ವೀಕರಿಸಿ 20 ಎಕರೆ ಕೊಟ್ಟು ಕ್ಲೋಸ್ ಮಾಡಿದ್ರು. ಆದ್ರೆ, 2017ರಲ್ಲಿ ಭವಾನಿ ಸೊಸೈಟಿ ಭೂಮಿಗಾಗಿ ಮತ್ತೆ ಅರ್ಜಿ ಹಾಕಿತ್ತು. ಹಾಗಾಗಿ, ಈಗ 12.5 ಎಕರೆ ಜಮೀನು ಕೊಡಲು ಆಯುಕ್ತರು ಪ್ಲ್ಯಾನ್ ಮಾಡಿದ್ದಾರೆ ಎಂದು ವಿಶ್ವನಾಥ್ ಹೇಳಿದರು. Bhavani Housing Society
‘ಎಕರೆಗೆ 50 ಸಾವಿರ ರೂಪಾಯಿ ಕೂಡ ದರ ನಿಗದಿ ಆಗಿಲ್ಲ’ ಸರ್ಕಾರ ನಿಮ್ಮ ಮಟ್ಟದಲ್ಲೇ ನಿರ್ಧರಿಸಿ ಅಂತಾ ಹೇಳ್ತಾರೆ. ಆದ್ರೆ ನಿನ್ನೆ ರಾತ್ರಿ 10.30ರವರೆಗೂ ಇಂಜಿನಿಯರ್‌ಗಳನ್ನು ಕೂರಿಸಿ ಸಿ.ಡಿ ಬರೆಯಿಸಿದ್ದಾರೆ ಎಂದು ಆಯುಕ್ತ H.R.ಮಹದೇವ್ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ, 12.5 ಎಕರೆ ಪೈಕಿ 7.5 ಎಕರೆ ಹಳೇರೇಟ್ಗೆ ಕೊಡ್ತಿದ್ದಾರೆ. ಆದರೆ, ಎಕರೆಗೆ 50 ಸಾವಿರ ರೂಪಾಯಿ ಕೂಡ ದರ ನಿಗದಿ ಆಗಿಲ್ಲ. ರಾತ್ರೋರಾತ್ರಿ ಜಮೀನು ಹಂಚಿಕೆಗೆ ಆಯುಕ್ತರ ತಯಾರಿ ನಡೆಸುತ್ತಿದ್ದಾರೆ ಎಂದು ಕಮಿಷನರ್ ಮಹದೇವ್ ವಿರುದ್ಧ ಅಧ್ಯಕ್ಷ S.R.ವಿಶ್ವನಾಥ್ ತಿರುಗಿಬಿದ್ದರು. ಜೊತೆಗೆ, HBR ಲೇಔಟ್‌ನಲ್ಲಿ ಭವಾನಿ ಸೊಸೈಟಿಗೆ BDA ಭೂಮಿ ಕೊಟ್ಟಿದ್ದಾರೆ. BDA ಆಯುಕ್ತರಿಂದ ಭ್ರಷ್ಟಾಚಾರ ನಡೆದಿದೆ ಎಂದು ತೀವ್ರ ವಾಗ್ದಾಳಿ ಮಾಡಿದರು.
‘ಯಾವುದೇ ಪತ್ರಕ್ಕೂ ಆಯುಕ್ತ ಮಹದೇವ್ ಉತ್ತರ ಇಲ್ಲ’ ಜೊತೆಗೆ, ಬಿಡಿಎನಲ್ಲಿ ಜಮೀನು ಸಗಟು ಹಂಚಿಕೆಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆ. ನಾನು TDR ಸೇರಿ ಹಲವು ವಿಚಾರಕ್ಕೆ 11 ಪತ್ರ ಬರೆದಿದ್ದೇನೆ. ಆದರೆ, ಯಾವುದೇ ಪತ್ರಕ್ಕೂ ಆಯುಕ್ತ ಮಹದೇವ್ ಉತ್ತರ ನೀಡಿಲ್ಲ ಎಂದು BDA ಅಧ್ಯಕ್ಷ ವಿಶ್ವನಾಥ್ ಗರಂ ಆದರು.
ಭವಾನಿ ಹೌಸಿಂಗ್ ಸೊಸೈಟಿಗೆ ಜಮೀನು ಸಗಟು ಹಂಚಿಕೆ ಬಗ್ಗೆ ಕೇಳಿದರೂ ಉತ್ತರಿಸಿಲ್ಲ. ಏನೋ ಗೋಲ್‌ಮಾಲ್ ನಡೆಯುತ್ತಿದೆ ಎಂದು ವಿಶ್ವನಾಥ್ ಹೇಳಿದರು.
‘ಸಗಟು ಹಂಚಿಕೆಯೇ ನಿಯಮಾನುಸಾರ ತಪ್ಪು’ ಸಗಟು ಹಂಚಿಕೆಯೇ ನಿಯಮಾನುಸಾರ ತಪ್ಪು ಎಂದು ಬಿಡಿಎನಲ್ಲಿ ಗೋಲ್‌ಮಾಲ್ ಬಗ್ಗೆ S.R.ವಿಶ್ವನಾಥ್ ಹೇಳಿದರು. ಇಷ್ಟು ನಷ್ಟವಾಗ್ತಿದ್ದರೂ ಏಕೆ ಸುಪ್ರೀಂಕೋರ್ಟ್‌ಗೆ ಹೋಗುತ್ತಿಲ್ಲ? ಎಂದು ಪ್ರಶ್ನಿಸಿದರು.
ರೈತರಿಗೆ ಒಂದು ಸಣ್ಣ ಸೈಟ್ ಸಂಬಂಧ ‘ಸುಪ್ರೀಂ’ಗೆ ಹೋಗ್ತಾರೆ. ಆದ್ರೆ 500 ಕೋಟಿ ಜಾಗದ ಬಗ್ಗೆ ಏಕೆ ‘ಸುಪ್ರೀಂ’ಗೆ ಹೋಗಿಲ್ಲ? ಭವಾನಿ ಹೌಸಿಂಗ್ ಸೊಸೈಟಿ ಸಗಟು ಹಂಚಿಕೆ ಹೆಸರಲ್ಲಿ ಅಕ್ರಮ ನಡೆದಿದೆ. ಅತಿದೊಡ್ಡ ಅವ್ಯವಹಾರವಾಗಿದೆ ಎಂದು BDA ಅಧ್ಯಕ್ಷ ವಿಶ್ವನಾಥ್ ಹೇಳಿದರು.
‘ಅಧ್ಯಕ್ಷರ ಚೇಂಬರ್‌ಗೆ ಯಾರು ಹೋಗಬೇಡಿ ಅಂತಾರೆ!’ ಅಧ್ಯಕ್ಷರ ಚೇಂಬರ್‌ಗೆ ಯಾರು ಹೋಗಬೇಡಿ ಅಂತಾರೆ! ಇಂಥ ಆಯುಕ್ತರ ಬಗ್ಗೆ ನೀವು ಯೋಚನೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಬಿಡಿಎ ಅಧ್ಯಕ್ಷ ವಿಶ್ವನಾಥ್ ಹೇಳಿದರು. CMಗೂ ಕೂಡ ಈ ಸಂಬಂಧ ದೂರು ಸಲ್ಲಿಸಿದ್ದೇನೆ ಎಂದು ವಿಶ್ವನಾಥ್ ಹೇಳಿದರು.
ಭವಾನಿ ಸೊಸೈಟಿಗೆ ಭೂಮಿ ಕೊಟ್ಟು 500 ಕೋಟಿ ಹಗರಣ ಮಾಡಿದ್ದಾರೆ. ಬಿಡಿಎ ಸೆಕ್ಷನ್ 65 ಪ್ರಕಾರ ಸಗಟು ಹಂಚಿಕೆಗೆ ರೂಲ್ಸ್ ಇದೆ. ಇಷ್ಟದ ಪ್ರಕಾರ, ಇಲ್ಲೀಗಲ್ ಆಗಿ ಸಗಟು ಹಂಚಿಕೆ ಅಸಾಧ್ಯ. ಆದ್ರೆ BDA ಆಯುಕ್ತರೇ ಗುಪ್ತವಾಗಿ ಹಂಚಿಕೆ ಮಾಡ್ತಿದ್ದಾರೆ ಎಂದು BDA ಆಯುಕ್ತ ಮಹದೇವ್ ವಿರುದ್ಧ ವಿಶ್ವನಾಥ್ ಆರೋಪಿಸಿದ್ದಾರೆ.
BDA ಉಪ ಕಾರ್ಯದರ್ಶಿ ಚಿದಾನಂದ ಮೂಲಕ ಸ್ಕ್ಯಾಮ್ ಮಾಡಿದ್ದಾರೆ. ರಾತ್ರೋರಾತ್ರಿ ಭವಾನಿ ಸೊಸೈಟಿಗೆ ಭೂಹಂಚಿಕೆಗೆ ಪ್ಲ್ಯಾನ್ ಮಾಡಿದ್ದಾರೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ದೂರಿಗೆ ತಡೆ ಆಗಿದೆ ಎಂದು ಹೇಳಿದರು.
‘ಈ ಹಿಂದೆ ಬಿನ್ನಿಮಿಲ್ ಸೊಸೈಟಿಯಲ್ಲೂ ಗೋಲ್‌ಮಾಲ್ ಆಗಿತ್ತು’ ಈ ಹಿಂದೆ ಬಿನ್ನಿಮಿಲ್ ಸೊಸೈಟಿಯಲ್ಲೂ ಗೋಲ್‌ಮಾಲ್ ಆಗಿತ್ತು. ಆ ಹಗರಣವನ್ನು ಖುದ್ದು ಆಯುಕ್ತರೇ ಪತ್ತೆ ಹಚ್ಚಿದ್ದರು. NRI ಸಂಸ್ಥೆಗೆ ಸಗಟು ಹಂಚಿಕೆಗೆ ವಿಚಾರಣೆ ಮಾಡುತ್ತಾರೆ. NRI ಸಂಸ್ಥೆ ಸದಸ್ಯರ ವಿವರ ಕೇಳಿ ಆಯುಕ್ತರಿಂದ್ಲೇ ತಡೆ ನೀಡಲಾಗುತ್ತದೆ. ಆದರೆ ಭವಾನಿ ಸೊಸೈಟಿ ಬಗ್ಗೆ ಆಯುಕ್ತರು ಏಕೆ ಕೇಳಿಲ್ಲ? ಇದರಲ್ಲಿ ಚಿದಾನಂದ್, ಬಿಡಿಎ ಆಯುಕ್ತರ ಪಾತ್ರ ಏನು? ಎಂದು ಸುದ್ದಿಗೋಷ್ಠಿಯಲ್ಲಿ BDA ಅಧ್ಯಕ್ಷ ವಿಶ್ವನಾಥ್ ಪ್ರಶ್ನೆ ಮಾಡಿದರು.
ಅಧ್ಯಕ್ಷರ ಆರೋಪದ ಸುರಿಮಳೆಗೆ ಆಯುಕ್ತರ ತಿರುಗೇಟು ಇತ್ತ, ಬಿಡಿಎ ಅಧ್ಯಕ್ಷರಿಗೆ ಆಯುಕ್ತರಿಂದ ತಿರುಗೇಟು ಬಂದಿದ್ದು ಭವಾನಿ ಸೊಸೈಟಿಗೆ ಭೂಮಿ ಹಂಚಿಕೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಆಯುಕ್ತ ಡಾ.ಹೆಚ್.ಆರ್.ಮಹದೇವ್ ಸಮರ್ಥನೆ ನೀಡಿದ್ದಾರೆ.
‘ಭವಾನಿ ಸೊಸೈಟಿ ಜಾಗಕ್ಕೆ ಬದಲಾಗಿ ಜಾಗ ಕೊಟ್ಟಿದ್ದೇವೆ’ ಕೋರ್ಟ್ ಆದೇಶದಂತೆಯೇ ಭವಾನಿ ಸೊಸೈಟಿಗೆ ಭೂಮಿ ನೀಡಲಾಗಿದೆ. ಸೊಸೈಟಿಗೆ ಜಮೀನು ಸಗಟು ಹಂಚಿಕೆ ಮಾಡಿಲ್ಲ. ಭವಾನಿ ಸೊಸೈಟಿ ಜಾಗಕ್ಕೆ ಬದಲಾಗಿ ಜಾಗ ಕೊಟ್ಟಿದ್ದೇವೆ ಎಂದು ಬಿಡಿಎ ಅಧ್ಯಕ್ಷ ಡಾ.ಹೆಚ್.ಆರ್.ಮಹದೇವ್ ಹೇಳಿದರು.
ಸಮಾನಾಂತರ ಬಡಾವಣೆಯಲ್ಲೇ ಆ ಸೊಸೈಟಿಗೆ ಭೂಮಿ ಹಂಚಿಕೆಯಾಗಿದೆ. ಈ ಹಿಂದೆ, ಬಲವಂತವಾಗಿ ಸೊಸೈಟಿ ಭೂಮಿ ಪಡೆದಿದ್ದೆವು. ಆದ್ದರಿಂದ ಅದರ ಬದಲಾಗಿ ಈಗ ಜಾಗ ಕೊಡುತ್ತಿದ್ದೇವೆ. ಈ ಬಗ್ಗೆ 2019ರಲ್ಲೇ ಬಿಡಿಎ ಬೋರ್ಡ್ನಲ್ಲೇ ತೀರ್ಮಾನ ಕೈಗೊಳ್ಳಲಾಗಿತ್ತು. ಭವಾನಿ ಸೊಸೈಟಿಯಿಂದ BDA 32 ಎಕರೆ ತೆಗೆದುಕೊಂಡಿದ್ರು. 20 ಎಕರೆ ಕೊಟ್ಟಿದ್ದ BDA ಇನ್ನೂ 12 ಎಕರೆ ಕೊಡಬೇಕಾಗಿತ್ತು. ಆದ್ದರಿಂದ ಅಧ್ಯಕ್ಷರು ಹೇಳಿದಂತೆ ಗೋಲ್‌ಮಾಲ್ ಆಗಿಲ್ಲ ಎಂದು ಡಾ.ಹೆಚ್.ಆರ್.ಮಹದೇವ್ ಸ್ಪಷ್ಟನೆ ನೀಡಿದರು.
ತಮಿಳುನಾಡಿನಲ್ಲಿ ಚಿನ್ನಮ್ಮ ಶಶಿಕಲಾಗೆ ಮತ್ತೊಂದು ಶಾಕ್ ನೀಡಿದ ಪಳನಿಸ್ವಾಮಿ ನೇತೃತ್ವದ AIADMK ಸರ್ಕಾರ