ಕೊವಿಡ್-19: ರಾಜ್ಯದಲ್ಲಿಂದು 17 ಸಾವು ಮತ್ತು 1,870 ಹೊಸ ಪ್ರಕರಣಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಗಳವಾರ ಸಾಯಂಕಾಲ ಸಿಕ್ಕರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 17 ಜನ ಮರಣಿಸಿದ್ದಾರೆ ಮತ್ತು ಹೊಸದಾಗಿ 1,870 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 11,695 ಜನ ಸಾವನ್ನಪ್ಪಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 8,76,425ಕ್ಕೇರಿದೆ. ಸೋಂಕಿತರ ಪೈಕಿ 8,40,099 ಜನ ಗುಣಮುಖರಾಗಿದ್ದಾರೆ ಮತ್ತು ಮಿಕ್ಕಿದ 24,612 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 12 […]

ಕೊವಿಡ್-19: ರಾಜ್ಯದಲ್ಲಿಂದು 17 ಸಾವು ಮತ್ತು 1,870 ಹೊಸ ಪ್ರಕರಣಗಳು
ಸಾಂದರ್ಭಿಕ ಚಿತ್ರ

Updated on: Nov 24, 2020 | 10:43 PM

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಗಳವಾರ ಸಾಯಂಕಾಲ ಸಿಕ್ಕರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 17 ಜನ ಮರಣಿಸಿದ್ದಾರೆ ಮತ್ತು ಹೊಸದಾಗಿ 1,870 ಜನರಲ್ಲಿ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 11,695 ಜನ ಸಾವನ್ನಪ್ಪಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 8,76,425ಕ್ಕೇರಿದೆ. ಸೋಂಕಿತರ ಪೈಕಿ 8,40,099 ಜನ ಗುಣಮುಖರಾಗಿದ್ದಾರೆ ಮತ್ತು ಮಿಕ್ಕಿದ 24,612 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಗೆಯೇ, ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 12 ಜನ ಬಲಿಯಾಗಿದ್ದಾರೆ ಮತ್ತು ಹೊಸದಾಗಿ ಇಂದು ಒಂದೇ ದಿನ 927 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲ್ಲಿ ಕೊರೊನಾದಿಂದ ಈವರೆಗೆ 4,090 ಜನ ಸಾವಿಗೀಡಾಗಿದ್ದಾರೆ ಮತ್ತು ಸೋಂಕು ಪೀಡಿತರ ಸಂಖ್ಯೆ 3,65,317 ತಲುಪಿದೆ.

ಸೋಂಕಿತರ ಪೈಕಿ 3,43,169 ಜನರು ಗುಣಮುಖರಾಗಿದ್ದಾರೆ ಹಾಗೂ ಉಳಿದ 18,057 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.