ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗುರುವಾರ ಸಾಯಂಕಾಲ ದೊರೆತಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 21 ಜನ ಸತ್ತಿದ್ದಾರೆ ಮತ್ತು ಹೊಸದಾಗಿ 2,116 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮಹಾಮಾರಿಗೆ ರಾಜ್ಯದಲ್ಲಿ ಇದುವರೆಗೆ 11,474 ಜನ ಬಲಿಯಾಗಿದ್ದಾರೆ ಸೋಂಕಿತರ ಸಂಖ್ಯೆ 8,55,912 ತಲುಪಿದೆ.
ಸೋಂಕಿತರ ಪೈಕಿ 8,14,949 ಜನ ಗುಣಮುಖರಾಗಿದ್ದಾರೆ ಮತ್ತು ಮಿಕ್ಕಿದ 29,470 ಜನರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 8 ಜನ ಬಲಿಯಾಗಿದ್ದಾರೆ ಮತ್ತು 1, 069 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಕೊವಿಡ್-19 ವ್ಯಾಧಿಯಿಂದ ಈವರೆಗೆ 3,985 ಜನ ಮರಣಿಸಿದ್ದಾರೆ ಮತ್ತು ಸೋಂಕು ಪೀಡಿತರ ಸಂಖ್ಯೆ 3,54,215ಕ್ಕೇರಿದೆ.
ಸೋಂಕಿತರಲ್ಲಿ 3,32,287 ಜನ ಗುಣಮುಖರಾಗಿದ್ದಾರೆ ಮತ್ತು ಉಳಿದ17,942 ಸೋಂಕಿತರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ತಿಳಿಸುತ್ತದೆ.