ಮತ್ತೊಂದು ಚೀಟ್ ಫಂಡ್: ಸುಮಾರು ನಾನೂರು ಕೋಟಿ ವಂಚಿಸಿ ಕೆಂಗೇರಿಯಿಂದ ಕಾಲ್ಕಿತ್ತ ಆನಂದ
ಬೆಂಗಳೂರು: ಬಡ್ಡಿ ನೀಡುವುದಾಗಿ ಹಣ ಪಡೆದು ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಈಗ ಬೆಂಗಳೂರಿನ ಕೆಂಗೇರಿಯ ಉಲ್ಲಾಳ ಬಳಿಯಿರುವ ಐಶ್ವರ್ಯ ಲಕ್ಷ್ಮೀ ಚಿಟ್ಸ್ ಪ್ರೈವೇಟ್ ಲಿ. ವಿರುದ್ಧ ಕೇಳಿಬಂದಿದೆ. ಆನಂದ್ ಎಂಬುವನಿಂದ ಸುಮಾರು 200 ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಶೇ. 2ರಷ್ಟು ಬಡ್ಡಿ ಕೊಡುವುದಾಗಿ ಹೇಳಿ ಹಣ ಸಂಗ್ರಹಿಸಿದ್ದ ಆನಂದ್ ಅಸಲು, ಲಾಭ ಎರಡನ್ನೂ ನೀಡದೆ ಇಂದು ನಾಪತ್ತೆಯಾಗಿದ್ದಾನೆ. ಸುಮಾರು 400-500 ಕೋಟಿ ವಂಚಿಸಿರುವುದು ಈಗ ಬಹಿರಂಗವಾಗಿದೆ. ಭಾರಿ ಮೊತ್ತದ ಹಣ ಪಡೆದು […]

ಬೆಂಗಳೂರು: ಬಡ್ಡಿ ನೀಡುವುದಾಗಿ ಹಣ ಪಡೆದು ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಈಗ ಬೆಂಗಳೂರಿನ ಕೆಂಗೇರಿಯ ಉಲ್ಲಾಳ ಬಳಿಯಿರುವ ಐಶ್ವರ್ಯ ಲಕ್ಷ್ಮೀ ಚಿಟ್ಸ್ ಪ್ರೈವೇಟ್ ಲಿ. ವಿರುದ್ಧ ಕೇಳಿಬಂದಿದೆ.
ಆನಂದ್ ಎಂಬುವನಿಂದ ಸುಮಾರು 200 ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಶೇ. 2ರಷ್ಟು ಬಡ್ಡಿ ಕೊಡುವುದಾಗಿ ಹೇಳಿ ಹಣ ಸಂಗ್ರಹಿಸಿದ್ದ ಆನಂದ್ ಅಸಲು, ಲಾಭ ಎರಡನ್ನೂ ನೀಡದೆ ಇಂದು ನಾಪತ್ತೆಯಾಗಿದ್ದಾನೆ. ಸುಮಾರು 400-500 ಕೋಟಿ ವಂಚಿಸಿರುವುದು ಈಗ ಬಹಿರಂಗವಾಗಿದೆ.
ಭಾರಿ ಮೊತ್ತದ ಹಣ ಪಡೆದು ವಂಚಿಸಿರುವ ಆನಂದ್ ನಾಪತ್ತೆಯಾಗಿರುವ ಹಿನ್ನೆಲೆಯಿಂದಾಗಿ ಆನಂದ್ನಿಂದ ಮೋಸ ಹೋದವರು ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. ಇದು ಕೋಟ್ಯಂತರ ರೂ. ವಂಚನೆಯಾಗಿರುವುದರಿಂದ ಮೋಸ ಹೋದವರಿಗೆ ಸಿಐಡಿಗೆ ದೂರು ನೀಡಲು ಜ್ಞಾನಭಾರತಿ ಠಾಣೆ ಪೊಲೀಸರು ಸೂಚನೆ ನೀಡಿದ್ದಾರೆ.




