Corona Cases Updates: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 68,020 ಕೊರೊನಾ ಸೋಂಕಿತರು ಪತ್ತೆ; 2020 ಅಕ್ಟೋಬರ್ ನಂತರ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣ

|

Updated on: Mar 29, 2021 | 12:46 PM

ರಾಜ್ಯದಲ್ಲಿ ಕೊವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಳ ಕಾಣುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದ್ದು, ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರ ಮತ್ತು ಕೊರೊನಾ ವಲಯ ಉಸ್ತುವಾರಿಗಳ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಕೊರೊನಾ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ. ಮಹತ್ವದ ನಿರ್ಧಾಗಳು ಹೊರಬೀಳುವ ಸಾಧ್ಯತೆಯೂ ಇದೆ.

Corona Cases Updates: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 68,020 ಕೊರೊನಾ ಸೋಂಕಿತರು ಪತ್ತೆ; 2020 ಅಕ್ಟೋಬರ್ ನಂತರ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣ
ಪ್ರಾತಿನಿಧಿಕ ಚಿತ್ರ (ಪಿಟಿಐ)
Follow us on

ದೆಹಲಿ: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಒಟ್ಟು 68,020 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 2020ರ ಅಕ್ಟೋಬರ್ ತಿಂಗಳ ನಂತರ ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೇ 29 ಸೋಂಕಿತರು ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 5,21,808 ಕ್ಕೆ ತಲುಪಿದೆ. ದೇಶಕ್ಕೆ ಕೊರೊನಾ ದಾಳಿಯ ನಂತರ ಜನವರಿ 2020ರಿಂದ ಈವರೆಗೆ 1.2 ಕೋಟಿ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಒಟ್ಟು 1,61,843 ಜನರು ಮೃತಪಟ್ಟಿದ್ದಾರೆ.

ಸದ್ಯ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಏರುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈಗಾಗಲೇ ಲಾಕ್​ಡೌನ್ ವಿಧಿಸುವ ಸಂಭಾವ್ಯತೆಗಳ ಕುರಿತು ಅಧಿಕೃತ ಸುಳಿವು ನೀಡಿದ್ದಾರೆ. ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೋಳಿ ಹಬ್ಬದ ಆಚರಣೆ ಬಹು ಜೋರಾಗಿದ್ದು ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮುಂಬೈ ಸೇರಿದಂತೆ ಬಹುತೇಕ ನಗರಗಳಲ್ಲಿ ಹೋಳಿ ಹಬ್ಬದ ಸಾರ್ವಜನಿಕ ಆಚರಣೆಗೆ ತಡೆ ಒಡ್ಡಲಾಗಿದೆ. ಮುಂಬೈನಲ್ಲಿ ಅಧಿಕೃತವಾಗಿಯೇ ಹೋಳಿ ಆಚರಣೆಗೆ ನಿಷೇಧ ಹೇರಲಾಗಿದ್ದು, ಇನ್ನಿತರ ಪ್ರಮುಖ ನಗರಗಳಾದ ದೆಹಲಿ, ಇಂದೋರ್, ಭೂಪಾಲ್, ಜಬ್ಲಾಪುರ್​ಗಳಲ್ಲಿ ಸಾರ್ವಜನಿಕ ಆಚರಣೆ ಮಾಡದಂತೆ ಆಯಾ ರಾಜ್ಯಗಳ ಆಡಳಿತಗಳು ಮನವಿ ಮಾಡಿವೆ. ಅಲ್ಲದೇ ಜಾರ್ಖಂಡ್, ರಾಜಸ್ಥಾನ, ಗೋವಾ, ತೆಲಂಗಾಣ ಉತ್ತರಾಖಂಡ್, ಬಿಹಾರ್, ರಾಜಸ್ಥಾನ, ಹರ್ಯಾಣ, ಮೇಘಾಲಯ ರಾಜ್ಯಗಳ ಸರ್ಕಾರಗಳು ಸಹ ಹೋಳಿ, ಶಬ್-ಇ-ಬಾರತ್, ಈಸ್ಟರ್ ಮತ್ತು ರಾಮನವಮಿ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸದಂತೆ ಸಾರ್ವಜನಿಕರಲ್ಲಿ ಕೋರಿವೆ.

ದೇಶದಲ್ಲಿ ಈವರೆಗೆ 1,13,55,993 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೇ ಕೊರೊನಾ ಲಸಿಕೆ ವಿತರಣೆಯೂ ನಡೆಯುತ್ತಿದ್ದು ಈವರೆಗೆ 6,05,30,435 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.ಮುಂದಿನ ದಿನಗಳಲ್ಲಿ ದೇಶದಲ್ಲಿ ಕೊವಿಡ್ ಸೋಂಕು ಇನ್ನಷ್ಟು ಮುಂಚೂಣಿಗೆ ಬರುವ ಸಾಧ್ಯತೆ ಇದ್ದು ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ವಲಯದ ಸುಧಾರಣೆ ಇನ್ನಷ್ಟು ವೇಗವಾಗಿ ನಡೆಯಬೇಕಿದೆ ಎಂದು ತಜ್ಞರು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ.

ಕರ್ನಾಟಕದಲ್ಲಿ ಏನಾಗಲಿದೆ?
ಕರ್ನಾಟಕ ರಾಜ್ಯದಲ್ಲಿ ಕೊವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಳ ಕಾಣುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದ್ದು, ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರ ಮತ್ತು ಕೊರೊನಾ ವಲಯ ಉಸ್ತುವಾರಿಗಳ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಕೊರೊನಾ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ. ಮಹತ್ವದ ನಿರ್ಧಾಗಳು ಹೊರಬೀಳುವ ಸಾಧ್ಯತೆಯೂ ಇದೆ. ಕೊರೊನಾ ಸೋಂಕು ಹೀಗೆ ಹೆಚ್ಚುತ್ತಾ ಮುಂದುವರೆದರೆ ರಾಜ್ಯದಲ್ಲೂ ಲಾಕ್​ಡೌನ್ ಅಥವಾ ಸೆಮಿ ಲಾಕ್​ಡೌನ್ ವಿಧಿಸುವ ಸಾಧ್ಯೆತಗಳೂ ಇವೆ ಎಂದು ಈಗಾಗಲೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ 

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಎಲ್ಲರೂ ಮಾಸ್ಕ್​ ಧರಿಸಬೇಕು, ಅಂತರ ಕಾಪಾಡಬೇಕು. ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಕೆಲ ರಾಜ್ಯಗಳಲ್ಲಿ ಲಾಕ್​ಡೌನ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಲಾಕ್​​ಡೌನ್ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಬೇಡಿ. ಮುಂದಿನ 2 ತಿಂಗಳು ಅತ್ಯಂತ ಮಹತ್ವ ಪಡೆದಿದೆ, ಉದಾಸೀನ ಮಾಡಬೇಡಿ. ಎಲ್ಲರೂ ಹಬ್ಬಗಳನ್ನ ಸರಳವಾಗಿ ಆಚರಣೆ ಮಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಕೊರೊನಾ 2ನೇ ಅಲೆ ಹೆಚ್ಚುತ್ತಿದ್ದು ಈಗ ಮುಂದಿನ ಹಬ್ಬಗಳನ್ನ ನಿಷೇಧ ಮಾಡಲಾಗಿದೆ. ಹೋಳಿ, ಯುಗಾದಿ, ಗು ಫ್ರೈ ಡೇ ಸೇರಿ ಎಲ್ಲಾ ಹಬ್ಬವೂ ನಿಷೇಧ ಮಾಡಲಾಗಿದೆ. ಜನರು ಎಚ್ಚೆತ್ತುಕೊಳ್ಳಬೇಕು. ನಿಯಮ ಪಾಲಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: ಕರುನಾಡಿನಲ್ಲಿ ಕಂಟ್ರೋಲ್ ತಪ್ಪಿದ ಕೊರೊನಾ.. ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಮೀಟಿಂಗ್

Coronavirus Case in India: ದೇಶದಲ್ಲಿ ಕೊವಿಡ್​ನಿಂದ ಒಂದೇ ದಿನ 312 ಸಾವು, 62,714 ಹೊಸ ಪ್ರಕರಣ ಪತ್ತೆ

Published On - 11:01 am, Mon, 29 March 21