ಬೆಂಗಳೂರು: ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚು ಜವಾಬ್ದಾರಿಯಿಂದ ಇರಬೇಕು ಅಂತ ರಾಜ್ಯ ಸರ್ಕಾರಕ್ಕೆ ಈಗಾಗಲೇ ತಿಳಿಸಿದೆ. ಮೂರನೇ ಅಲೆ ಎದುರಿಸಲು ಐಸಿಯು ಬೆಡ್ ಸಿದ್ಧಪಡಿಸಿಕೊಳ್ಳಿ. ಬೆಂಗಳೂರಿನಲ್ಲಿ 4,500 ಐಸಿಯು ಬೆಡ್ಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಇದೀಗ ತಜ್ಞರು ಸಲಹೆ ನೀಡಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್ನಿಂದ ಮೂರನೇ ಅಲೆ ಸಾಧ್ಯತೆಯಿದೆ. ಎರಡನೇ ಅಲೆಯ ವೇಳೆಯಲ್ಲಿ ಮಾಡಿದಂತೆ ಬೇಜವಾಬ್ದಾರಿ ಮಾಡಬೇಡಿ. ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಲ್ಲಿ ಸಾವು-ನೋವು ಹೆಚ್ಚಾಗುತ್ತದೆ. ರಾಜ್ಯದಲ್ಲಿ ಸದ್ಯ 1,300 ಐಸಿಯು ಬೆಡ್ಗಳು ಲಭ್ಯವಿದೆ. ಇದರ ಜೊತೆ ಬೆಂಗಳೂರನ್ನು ಹೊರತುಪಡಿಸಿ 1 ಸಾವಿರ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಜ್ಞರು ಹೇಳಿದ್ದಾರೆ.
ಬೆಡ್ಗಳು ಎಲ್ಲಿ, ಎಷ್ಟಿದೆ?
ಜಯನಗರ ಜನರಲ್ ಆಸ್ಪತ್ರೆಯಲ್ಲಿ 24 ಬೆಡ್ಗಳು, ಸಿ.ವಿ.ರಾಮನ್ ಜನರಲ್ ಆಸ್ಪತ್ರೆಯಲ್ಲಿ 56, ಐಪಿಡಮಿಕ್ ಡಿಸೀಸ್ ಆಸ್ಪತ್ರೆಯಲ್ಲಿ 24 ಬೆಡ್ಗಳಿವೆ.
ಹೆಚ್ಚುವರಿ ಬೆಡ್ ವ್ಯವಸ್ಥೆಗೆ ಸರ್ಕಾರದ ಸಿದ್ಧತೆ
ರಾಜೀವ್ ಗಾಂಧಿ ಆಸ್ಪತ್ರೆ, ಕೆ.ಆರ್.ಪುರಂ ಜನರಲ್ ಆಸ್ಪತ್ರೆ ಹಾಗೂ ಯಲಹಂಕ ಜನರಲ್ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್ ಅಳವಡಿಕೆಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 190 ಬೆಡ್, ಕೆ.ಆರ್.ಪುರಂ ಜನರಲ್ ಆಸ್ಪತ್ರೆಯಲ್ಲಿ 58, ಯಲಹಂಕ ಜನರಲ್ ಆಸ್ಪತ್ರೆಯಲ್ಲಿ 17 ಬೆಡ್ ಹಾಕಲು ಸಿದ್ಧತೆ ನಡೆಸುತ್ತಿದೆ. ಇದಲ್ಲದೆ ಹೆಚ್.ಎಂ.ಟಿ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲದಲ್ಲಿ ಹೆಚ್ಚುವರಿ ಬೆಡ್ಗಳಿಗೆ ವ್ಯವಸ್ಥೆ ಮಾಡಲಿದೆ.
ಬೆಂಗಳೂರಿನ ಇ.ಎಸ್.ಐ ಆಸ್ಪತ್ರೆಗಳಲ್ಲೂ ಎಕ್ಸಟ್ರಾ ಬೆಡ್ ಅಳವಡಿಕೆಗೆ ನಿರ್ಧಾರವಾಗಿದ್ದು, ರಾಜಾಜಿನಗರ, ಇಂದಿರಾನಗರ ಹಾಗೂ ಪೀಣ್ಯ ಇ.ಎಸ್.ಐ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್ಗಳನ್ನು ಹಾಕಲು ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ
ಬಿಗ್ಬಾಸ್ ಮನೆಯೊಳಗೆ ಮತ್ತೆ ಹೋಗೋಕೆ ಬ್ಯಾಗ್ ಪ್ಯಾಕ್ ಮಾಡಿದ ಸ್ಪರ್ಧಿಗಳು; ಒಳಹೋಗುವವರು ಬರೀ 11 ಮಂದಿ ಅಲ್ಲ!
(Covid Experts advised to Karnataka government to prepare 4,500 ICU beds in Bangalore in advance)
Published On - 10:23 am, Wed, 16 June 21