ಜನರ ಮನೆ ಬಾಗಿಲಿಗೆ ಬಂದು ಲಸಿಕೆ ಹಾಕಲು ನಿರ್ಧಾರ; ಕಲಬುರಗಿ ಜಿಲ್ಲಾಡಳಿತದ ಯೋಜನೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಥ್

ಜನರ ಮನೆಬಾಗಿಲಿಗೆ ಹೋಗಿ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ ವಿ ಜೋತ್ಸ್ನಾ, ತಿಳಿಸಿದ್ದಾರೆ.

ಜನರ ಮನೆ ಬಾಗಿಲಿಗೆ ಬಂದು ಲಸಿಕೆ ಹಾಕಲು ನಿರ್ಧಾರ; ಕಲಬುರಗಿ ಜಿಲ್ಲಾಡಳಿತದ ಯೋಜನೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಥ್
ಕಲಬುರಗಿ ಜಿಲ್ಲಾಡಳಿತದ ಯೋಜನೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಥ್
Follow us
TV9 Web
| Updated By: preethi shettigar

Updated on:Jun 16, 2021 | 9:26 AM

ಕಲಬುರಗಿ: ಜಿಲ್ಲೆಯಲ್ಲಿ ಕೊವಿಡ್ ನಿರೋಧಕ ಲಸಿಕೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಕೂಡಾ ಗ್ರಾಮೀಣ ಭಾಗದ ಜನರು ಇನ್ನು ಕೂಡಾ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲಾ. ಜಿಲ್ಲೆಯ ಕೆಲ ತಾಂಡಾ ಮತ್ತು ಹಳ್ಳಿಗಳಲ್ಲಿ ಇನ್ನು ಒಬ್ಬರು ಕೂಡಾ ಲಸಿಕೆ ಹಾಕಿಸಿಕೊಂಡಿಲ್ಲಾ. ಹೀಗಾಗಿ ಜನರ ಮನೆಬಾಗಿಲಿಗೆ ಹೋಗಿ ಲಸಿಕೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಡಳಿತದ ಈ ಯೋಜನೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ( NEKRTC) ಹೆಗಲು ನೀಡಿದ್ದು, ಲಸಿಕಾ ಬಸ್​ಗಳನ್ನು ಸಿದ್ಧಗೊಳಿಸಿದೆ.

ಲಸಿಕೆ ಹಾಕಿಸಿಕೊಳ್ಳಲು ಗ್ರಾಮೀಣ ಭಾಗದ ಜನರ ಹಿಂದೇಟು ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತದೆ. ಬೇರೆ ರೀತಿಯ ಸಮಸ್ಯೆಗಳು ಬರುತ್ತವೆ ಎನ್ನುವ ಕಲಬುರಗಿ ಜನರಲ್ಲಿ ಇದೆ. ಜತೆಗೆ ಇನ್ನು ಕೆಲವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಹೋಗಲು ಸರಿಯಾದ ವಾಹನಗಳ ವ್ಯವಸ್ಥೆ ಇಲ್ಲಾ. ಬಸ್​ಗಳು ಬಂದಾಗಿರೋದರಿಂದ ಜನರಿಗೆ ಮನೆಯಿಂದ ಹೊರಬರಲು ತೊಂದರೆಯಾಗುತ್ತಿದೆ. ಅದರಲ್ಲೂ ಕೂಡಾ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ 1 ಹಳ್ಳಿ, 10 ತಾಂಡಾ ಮತ್ತು ಅಫಜಲಪುರ ತಾಲೂಕಿನ 11 ಹಳ್ಳಿ 4 ತಾಂಡಾಗಳ ಜನರು ಇಲ್ಲಿವರಗೆ ಲಸಿಕೆಯನ್ನೆ ಹಾಕಿಸಿಕೊಂಡಿಲ್ಲಾ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗ್ರಾಮಗಳು ದೂರ ಇರುವುದರಿಂದ ಜನರು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಹಾಕಿಸಿಕೊಂಡಿಲ್ಲಾ. ಹೀಗಾಗಿ ಜಿಲ್ಲೆಯಲ್ಲಿ 21 ಲಕ್ಷ ಜನರಿಗೆ ಲಸಿಕೆ ಹಾಕಬೇಕು. ಆದರೆ ಇಲ್ಲಿವರಗೆ ಸರಿಸುಮಾರು 4 ಲಕ್ಷ ಜನರು ಮಾತ್ರ ಲಸಿಕೆ ಪಡೆದಿದ್ದಾರೆ.

ಜನರ ಮನೆ ಬಾಗಿಲಿಗೆ ಲಸಿಕಾ ವಾಹನ ಗ್ರಾಮೀಣ ಭಾಗದ ಜನರು ಲಸಿಕಾ ಕೇಂದ್ರಕ್ಕೆ ಬಂದು ಹೋಗಲು ಸರಿಯಾದ ವ್ಯವಸ್ಥೆಗಳು ಇಲ್ಲದೇ ಇರುವುದರಿಂದಾಗಿ, ಜನರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ಮೂಲಕ ಗ್ರಾಮೀಣ ಭಾಗದಲ್ಲಿ ಲಸಿಕಾಕರಣಕ್ಕೆ ವೇಗವನ್ನು ನೀಡಲು ಜಿಲ್ಲಾಡಳಿತ ಮುಂದಾಗಿದೆ. ಅದಕ್ಕಾಗಿ ಈಶಾನ್ಯ ಕರ್ನಾಟಕ ಬಸ್​ಗಳನ್ನು ನೀಡುವಂತೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರಿಗೆ ಜಿಲ್ಲಾಡಳಿತ ಮನವಿ ಮಾಡಿತ್ತು. ಮನವಿಯನ್ನು ಪರಿಗಣಿಸಿರುವ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕೇವಲ 24 ಗಂಟೆಯಲ್ಲಿ ಎರಡು ಬಸ್​ಗಳನ್ನು ಲಸಿಕಾ ವಾಹನಗಳನ್ನಾಗಿ ಪರಿವರ್ತಿಸಿದೆ.

ಇಂದು ಕಲಬುರಗಿ ಜಿಲ್ಲಾಡಳಿತಕ್ಕೆ ಎರಡು ಬಸ್​ಗಳನ್ನು ಸಂಸ್ಥೆಯಿಂದ ನೀಡಲಾಗುತ್ತಿದ್ದು, ನಾಳೆ ಲಸಿಕಾ ಬಸ್​ಗಳಿಗೆ ಚಾಲನೆ ಸಿಗಲಿದೆ. ಬಸ್​ಗಳು ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದೂರದಲ್ಲಿರುವ ಹಳ್ಳಿಗಳು, ತಾಂಡಾಗಳಿಗೆ ಮೊದಲು ಹೋಗಲಿವೆ. ಜನರ ಮನೆ ಬಾಗಿಲಿಗೆ ವ್ಯಾಕ್ಸಿನ್ ಹೋಗಲಿದ್ದು, ಸದ್ಯ ಎರಡು ಬಸ್​ಗಳನ್ನು ಪ್ರಾಯೋಗಿಕವಾಗಿ ನೀಡಲಾಗಿದೆ.

ಕೆಲ ಹಳ್ಳಿಗಳು ಮತ್ತು ತಾಂಡಾಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೂರದಲ್ಲಿವೆ. ಅನೇಕರಿಗೆ ಆಸ್ಪತ್ರೆಗೆ ಬಂದು ಲಸಿಕೆ ಹಾಕಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲಾ. ಹೀಗಾಗಿ ಜನರ ಮನೆಬಾಗಿಲಿಗೆ ಹೋಗಿ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ ವಿ ಜೋತ್ಸ್ನಾ, ತಿಳಿಸಿದ್ದಾರೆ.

ಆಸ್ಪತ್ರೆ ರೀತಿ ಸಿದ್ಧವಾಗಿರುವ ಬಸ್​ಗಳು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ನಗರದ ವರ್ಕ್ ಶಾಪ್​ನಲ್ಲಿ ಎರಡು ಲಸಿಕಾ ಬಸ್​ಗಳನ್ನು ಸಿದ್ಧಗೊಳಿಸಲಾಗಿದೆ. ವಿಶೇಷವೆಂದರೆ, ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕೇಂದ್ರದ ರೀತಿಯಲ್ಲಿಯೇ ಬಸ್​ಗಳನ್ನು ಸಿದ್ಧಪಡಿಸಲಾಗಿದೆ. ಆಸ್ಪತ್ರೆಯಲ್ಲಿರುವಂತೆ ನೋಂದಣಿ, ವೇಟಿಂಗ್​ ರೂಮ್, ಲಸಿಕಾ ಕೋಣೆ, ಅಬ್ಸ್​​ರ್​ವೇಶನ್ ರೂಮ್​ನಂತೆ ಬಸ್​ನಲ್ಲಿ ಕೂಡಾ ವ್ಯವಸ್ಥೆ ಮಾಡಲಾಗಿದೆ. ಬಸ್​ನಲ್ಲಿ ಓರ್ವ ವೈದ್ಯ ಮತ್ತು ನರ್ಸಿಂಗ್ ಸ್ಟಾಫ್ ಕೂಡಾ ಇರಲಿದ್ದಾರೆ.

ಬಸ್​ನ ಚಾಲಕ ಕೂಡಾ ಸಂಸ್ಥೆಯವರೇ ಇರಲಿದ್ದಾರೆ. ಬಸ್​ನ ಡಿಸೆಲ್ ಕೂಡಾ ಸಂಸ್ಥೆ ವತಿಯಿಂದಲೇ ಹಾಕಲಾಗುತ್ತಿದೆ. ಆರೋಗ್ಯ ಇಲಾಖೆಯವರು ವ್ಯಾಕ್ಸಿನ್ ಮತ್ತು ಆರೋಗ್ಯ ಸಿಬ್ಬಂಧಿಯನ್ನು ಮಾತ್ರ ನೀಡಲಿದ್ದಾರೆ. ಬಸ್​ಗಳು ಮುಂಜಾನೆ ಆರು ಗಂಟೆಯಿಂದ ರಾತ್ರಿವರಗೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಚರಿಸಲಿವೆ. ಕಳೆದ ತಿಂಗಳು ಸಂಸ್ಥೆ, ಆಕ್ಸಿಜನ್ ಬಸ್​ಗಳನ್ನು ಸಿದ್ಧ ಮಾಡಿ ಜಿಲ್ಲಾಡಳಿತಕ್ಕೆ ನೀಡಿತ್ತು. ಅವು ಕೂಡಾ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿವೆ. ಇದೀಗ ಲಸಿಕಾ ಬಸ್​ಗಳನ್ನು ಸಿದ್ಧ ಮಾಡಿ, ಕಲಬುರಗಿ ಜಿಲ್ಲಾಡಳಿತಕ್ಕೆ ನೀಡಿವೆ.

ಜಿಲ್ಲಾಡಳಿತ ನಮ್ಮ ಸಂಸ್ಥೆಗೆ ಲಸಿಕಾ ವಾಹನಗಳನ್ನು ಸಿದ್ಧಗೊಳಿಸಿ ನೀಡಲು ಹೇಳಿತ್ತು. ಅದರಂತೆ ಕೇವಲ 24 ಗಂಟೆಯಲ್ಲಿ ನಮ್ಮ ಸಿಬ್ಬಂದಿ, ಸಾರಿಗೆ ಬಸ್​ಗಳನ್ನು ಲಸಿಕಾ ಬಸ್​ಗಳನ್ನಾಗಿ ಮಾರ್ಪಾಟು ಮಾಡಿದ್ದಾರೆ. ಜಿಲ್ಲಾಡಳಿತ ಕೇಳಿದರೆ ಇನ್ನು ಕೂಡಾ ಹೆಚ್ಚಿನ ಬಸ್​ಗಳನ್ನು ನೀಡುತ್ತೇವೆ. ಗ್ರಾಮೀಣ ಭಾಗದ ಜನರಿಗೆ ಲಸಿಕೆಗಳು ಸಿಗಲು ನಮ್ಮ ಸಂಸ್ಥೆ ಕೂಡಾ ಪ್ರಯತ್ನ ಮಾಡುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ರಾಜುಕಮಾರ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ:

ಕೊರೊನಾ ಲಸಿಕೆ ವಿತರಣೆಯಲ್ಲಿ ಮೈಸೂರು ಜಿಲ್ಲೆ ರಾಜ್ಯಕ್ಕೆ ನಂ.1; ಇದೀಗ ಬೀದಿಬದಿ ವ್ಯಾಪಾರಿಗಳು, ವಿಶೇಷ ಚೇತನರಿಗಾಗಿ ಲಸಿಕೆ ಅಭಿಯಾನ ಆರಂಭ

Corona Vaccine: ಕೊವಿಡ್ ಲಸಿಕೆ ಪಡೆಯಲು ಆನ್​ಲೈನ್ ರಿಜಿಸ್ಟ್ರೇಶನ್ ಅಥವಾ ಬುಕಿಂಗ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

Published On - 9:12 am, Wed, 16 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್