‘ಬೆಡ್ ಕಳ್ಳಾಟ’ಕ್ಕೆ ಬ್ರೇಕ್, ಇನ್ಮುಂದೆ ಆಸ್ಪತ್ರೆಗಳಲ್ಲಿ ಡಿಸ್‌ಪ್ಲೇ ಆಗುತ್ತೆ ಬೆಡ್​ಗಳ ವಿವರ

| Updated By: ಸಾಧು ಶ್ರೀನಾಥ್​

Updated on: Jul 15, 2020 | 6:51 PM

[lazy-load-videos-and-sticky-control id=”oTfqbeOHWzs”] ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ‘ಬೆಡ್ ಕಳ್ಳಾಟ’ ಆರೋಪ ಕೇಳಿ ಬರುತ್ತಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಗಳಿಗೆ ಮತ್ತೆ ಸರ್ಕಾರ ಖಡಕ್ ಸೂಚನೆ ನೀಡಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೆಡ್‌ಗಳ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಡಿಸ್‌ಪ್ಲೇ ಬೋರ್ಡ್ ಹಾಕಬೇಕು ಎಂದು ಸರ್ಕಾರ ಆದೇಶ ನೀಡಿದೆ. ಇನ್ಮುಂದೆ ಆಸ್ಪತ್ರೆಗಳಲ್ಲಿರೋ ಬೆಡ್​ಗಳ ಬಗ್ಗೆ ರಿಸೆಪ್ಷನ್ ಕೌಂಟರ್‌ನಲ್ಲಿ ಬೆಡ್‌ ಹಂಚಿಕೆ ಡಿಸ್‌ಪ್ಲೇ ಬೋರ್ಡ್ ಹಾಕಬೇಕು ಎಂದು ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ನಾಳೆಯಿಂದ […]

‘ಬೆಡ್ ಕಳ್ಳಾಟ’ಕ್ಕೆ ಬ್ರೇಕ್,  ಇನ್ಮುಂದೆ ಆಸ್ಪತ್ರೆಗಳಲ್ಲಿ ಡಿಸ್‌ಪ್ಲೇ ಆಗುತ್ತೆ ಬೆಡ್​ಗಳ ವಿವರ
Follow us on

[lazy-load-videos-and-sticky-control id=”oTfqbeOHWzs”]

ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ‘ಬೆಡ್ ಕಳ್ಳಾಟ’ ಆರೋಪ ಕೇಳಿ ಬರುತ್ತಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಗಳಿಗೆ ಮತ್ತೆ ಸರ್ಕಾರ ಖಡಕ್ ಸೂಚನೆ ನೀಡಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೆಡ್‌ಗಳ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಡಿಸ್‌ಪ್ಲೇ ಬೋರ್ಡ್ ಹಾಕಬೇಕು ಎಂದು ಸರ್ಕಾರ ಆದೇಶ ನೀಡಿದೆ.

ಇನ್ಮುಂದೆ ಆಸ್ಪತ್ರೆಗಳಲ್ಲಿರೋ ಬೆಡ್​ಗಳ ಬಗ್ಗೆ ರಿಸೆಪ್ಷನ್ ಕೌಂಟರ್‌ನಲ್ಲಿ ಬೆಡ್‌ ಹಂಚಿಕೆ ಡಿಸ್‌ಪ್ಲೇ ಬೋರ್ಡ್ ಹಾಕಬೇಕು ಎಂದು ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ನಾಳೆಯಿಂದ ಕಡ್ಡಾಯವಾಗಿ ಬೋರ್ಡ್ ಅಳವಡಿಸಬೇಕು. ಇಲ್ಲದಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ತಿಳಿಸಿದ್ದಾರೆ.

ಬೆಡ್ ಲಭ್ಯತೆ ಬಗ್ಗೆ ರಿಸೆಪ್ಷನ್ ಬಳಿ ನೋಟಿಸ್ ಬೋರ್ಡ್​ನಲ್ಲಿ ಪ್ರಕಟಿಸಬೇಕು. ಕೊರೊನಾ ರೋಗಿಗಳಿಗೆ ಮೀಸಲಿಟ್ಟಿರೋ ಬೆಡ್​ಗಳೆಷ್ಟು..? ಆಸ್ಪತ್ರೆಯಲ್ಲಿರುವ ಒಟ್ಟು ಬೆಡ್​ಗಳು, ಐಸಿಯು ವಾರ್ಡ್​ನಲ್ಲಿರೋ ಬೆಡ್​ಗಳು, ಐಸೋಲೇಷನ್ ವಾರ್ಡ್​ನಲ್ಲಿರೋ ಬೆಡ್​ಗಳು, ವೆಂಟಿಲೇಟರ್​ಗಳು, ಹೈ ಫ್ಲೋ ಆಕ್ಸಿಜನ್ ಸಪ್ಲೈ ಇರುವ ಬೆಡ್​ಗಳ ಸಂಖ್ಯೆ ಎಷ್ಟು..?ಸಾಮಾನ್ಯ ಆಕ್ಸಿಜನ್ ಲಭ್ಯ ಇರುವ ಬೆಡ್​ಗಳ ಸಂಖ್ಯೆ ಬಗ್ಗೆ ಬೋರ್ಡ್​ನಲ್ಲಿ ಪ್ರಕಟಿಸಬೇಕು. ಆಗ ಕೊರೊನಾ ಸೋಂಕಿತರಿಗೆ ಬೆಡ್​ ಇರುವ ಬಗ್ಗೆ ತಿಳಿಯುತ್ತೆ.

ಈ ನಿಯಮಗಳ ಬಗ್ಗೆ ಮೊದಲೇ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಆಸ್ಪತ್ರೆಗಳು ಆದೇಶವನ್ನು ಪಾಲಿಸಿರಲಿಲ್ಲ. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಮತ್ತೆ ಖಡಕ್ ಆದೇಶ ಹೊರಡಿಸಿದೆ. ನಿಯಮ ಪಾಲಿಸದಿದ್ದರೆ 2005ರ ಕಾಯ್ದೆಯನ್ವಯ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

Published On - 3:53 pm, Wed, 15 July 20